ಬಾಲಿವುಡ್’ನ ಸ್ಟಾರ್ ಜೋಡಿಯ ಲವ್ ಬ್ರೇಕಪ್..!?

ಬಣ್ಣದ ಲೋಕದಲ್ಲಿ ಲವ್ ಆಗೋದು ಕಾಮನ್ ಅದೇ ರೀತಿ ಬ್ರೇಕಪ್ ಆಗೋದು ಕಾಮನ್ ಕೂಡ.. ಅದೇ ರೀತಿಯಾಗಿ ಅದೆಷ್ಟೋ ಜೋಡಿಗಳು ಲವ್ ಮಾಡಿದ್ದು ಕೂಡ ಆಗಿದೆ.. ಅದೇ ರೀತಿ ಬ್ರೇಕಪ್ ಆಗಿದ್ದು ಕೂಡ ಆಗಿದೆ.. ಬಣ್ಣದ ಲೋಕದಲ್ಲಿ ಪ್ರೀತಿ, ಪ್ರೇಮ, ಮುನಿಸು ಎಲ್ಲವೂ ಸಾಮಾನ್ಯ. ಬಾಲಿವುಡ್ ನ ಮತ್ತೊಂದು ಜೋಡಿ ಈಗ ಬೇರೆ ಬೇರೆ ಯಾಗಿದ್ದಾರೆ. ಸಾರಾ ಅಲಿ ಖಾನ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ಮಧ್ಯೆಯಿದ್ದ ಪ್ರೀತಿ ಇದೀಗ ಮುರಿದು ಬಿದ್ದಿದೆ. ಸುಶಾಂತ್ ಸಿಂಗ್, ಇನ್ಸ್ಟ್ರಾಗ್ರಾಮ್ ನಲ್ಲಿ ಸಾರಾ ಅಲಿ ಖಾನ್ ಅನ್ ಫಾಲೋ ಮಾಡಿದ್ದಾನೆ. ಲವ್ ಬ್ರೇಕಪ್ ಆಗಲು ಇದೇ ಕಾರಣ ಎಂದು ಹೇಳಲಾಗುತ್ತಿದೆ.
ಆ ಜೋಡಿಯ ಮೊದಲ ಸಿನಿಮಾವಾದ ಕೇದಾರನಾಥದಲ್ಲಿ ಸಾರಾ ಹಾಗೂ ಸುಶಾಂತ್ ಒಟ್ಟಿಗೆ ಸ್ಕ್ರೀನ್ ಷೇರ್ ಮಾಡಿದ್ದರು... ಇದೇ ಚಿತ್ರದಲ್ಲಿ ಇಬ್ಬರೂ ಕೂಡ ಪರಸ್ಪರ ಹತ್ತಿರವಾಗಿದ್ದರು. ಆದ್ರೆ ಸಾರಾ, ಸುಶಾಂತ್ ಪ್ರತಿ ಕೆಲಸದ ಮೇಲೂ ನಿಗಾ ಇಡ್ತಾಳಂತೆ. ಇದು ಸುಶಾಂತ್ ಗೆ ಇಷ್ಟವಾಗಿಲ್ಲ ಎನ್ನಲಾಗುತ್ತಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ, ಕರೀನಾ ಕಪೂರ್ ಖಾನ್, ಸಾರಾಗೆ ಸಲಹೆಯೊಂದನ್ನು ನೀಡಿದ್ದಳು.
ಸಾರಾ, ತನ್ನ ಮೊದಲ ಚಿತ್ರದ ಕೋ ಸ್ಟಾರ್ ಜೊತೆ ಅಫೇರ್ ಇಟ್ಟುಕೊಳ್ಳಬಾರದು ಎಂದಿದ್ದಳು. ಅಂದ್ರೆ ಸಾರಾ, ಸುಶಾಂತ್ ಸಂಬಂಧ, ಅವ್ರ ಕುಟುಂಬಸ್ಥರಿಗೆ ಇಷ್ಟವಿಲ್ಲ ಎಂದಾಯ್ತು. ಕೆಲವೇ ದಿನಗಳ ಹಿಂದೆ ಒಟ್ಟಿಗಿದ್ದ ಜೋಡಿ ಸಿಕ್ಕಾಪಟ್ಟೆ ಗಲಾಟೆ ಮಾಡಿಕೊಂಡಿದೆಯಂತೆ. ಒಟ್ಟಿನಲ್ಲಿ ಈ ಜೋಡಿಯ ಮದ್ಯೆ ಬಿರುಕುಬಿಟ್ಟಿದೆ.. ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ.. ಸ್ಯಾಂಡಲ್ವುಡ್ ನಲ್ಲಿಯೂ ಕೂಡ ಲವ್ ಬ್ರೇಕಪ್ ಗಳು ಕಾಮನ್ ಆಗಿ ಬಿಟ್ಟಿವೆ.
Comments