ಬಾಲಿವುಡ್'ಗೆ ಹಾರಲಿದ್ದಾರೆ 'ಬೆಲ್ ಬಾಟಂ'ನ ಡಿಟೆಕ್ಟಿವ್ ದಿವಾಕರ..!

ಕನ್ನಡದಲ್ಲಿ ದೊಡ್ಡ ಟೈಟಲ್ ಇಟ್ಟು ಸಿನಿಮಾ ಯಶಸ್ವಿ ಮಾಡಿದ ನಿರ್ದೇಶಕ ಅಂದ್ರೆ ಅವರು ರಿಷಬ್ ಶೆಟ್ಟಿ ಮಾತ್ರ.. ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ನಂತರ ರಿಷಬ್ ಹಿರೋ ಆಗಿ ಬೆಲ್ ಬಾಟಂ ಸಿನಿಮಾವನ್ನು ಮಾಡಿದರು.. ಸಿನಿಮಾ ಅಂದುಕೊಳ್ಳುವುದಕ್ಕಿಂತ ಜಾಸ್ತಿಯೇ ಸಕ್ಸಸ್ ಆಯ್ತು. ಚಿತ್ರದ ಬಗ್ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಗುಡ್ ರೆಸ್ಪಾನ್ಸ್ ಕೂಡ ಸಿಕ್ತು. ಇದೀಗ ಹೀರೋ ಕಮ್ ಡೈರೆಕ್ಟರ್ ಆಗಿರುವ ರಿಷಬ್ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಬೆಲ್ ಬಾಟಂ ಸಿನಿಮಾ ಪಾರ್ಟ್-2 ಮಾಡೊಕೆ ಮುಂದಾಗಿದ್ದಾರೆ. ಅಂದಹಾಗೇ ಈ ವರ್ಷದ ಕೊನೆಯಲ್ಲಿ ಭಾಗ-2 ಶುರುವಾಗುವ ಮುನ್ಸೂಚನೆ ಸಿಕ್ಕಿದೆ.
ರಿಷಬ್ ಶೆಟ್ಟಿ ನಾಯಕರಾಗಿ ಮೊದಲ ಬಾರಿಗೆ ನಟಿಸಿದ್ದ ಬೆಲ್ ಬಾಟಂ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಬೆಲ್ ಬಾಟಂ ಸಿನಿಮಾ ಬಾಲಿವುಡ್ ಗೆ ಜಿಗಿಯಲಿದೆ.. ಎಸ್ ಬೆಲ್ ಬಾಟಂ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲೂ ರಿಮೇಕ್ ಆಗಲಿದೆ. ಹಿಂದೆ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಬೇರೆ ಭಾಷೆಗಳಲ್ಲಿ ರಿಮೇಕ್ ಆಗಿತ್ತು. ಈಗ ಬೆಲ್ ಬಾಟಂ ಸರದಿ ಬಂದಿದೆ.
ಈಗಾಗಲೇ ಬೆಲ್ ಬಾಟಂ ರಿಮೇಕ್ ಹಕ್ಕುಗಳನ್ನು ಮಾರಾಟವಾಗಿದೆ ಎನ್ನಲಾಗಿದ್ದು, ಹಿಂದಿ, ತೆಲುಗಿನಲ್ಲಿ ಡಿಟೆಕ್ಟಿವ್ ದಿವಾಕರನ ಪಾತ್ರ ಮಾಡುವವರು ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಡಿಟಕ್ಚೀವ್ ಕಥೆಯಾಧರಿತ ಸಿನಿಮಾ ಬೆಲ್ ಬಾಟಂ ನೈಜ ಘಟನೆಯನ್ನಾಧರಿತ ಚಿತ್ರಕಥೆಯನ್ನು ಒಳಗೊಂಡಿದೆ.. ಸಿನಿಮಾ ಕೂಡ ಯಶಸ್ಸು ಆಯ್ತು. ದಯಾನಂದ ಪಾತ್ರದಲ್ಲಿ ರಿಶಬ್ ಶೆಟ್ಟಿ ಮಿಂಚಿದ್ರೆ, ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡರು. ಇದೀಗ ಬೆಲ್ ಬಾಟಂ ಸಿನಿಮಾದ ಯಶಸ್ಸಿನ ನಂತರ ಬೆಲ್ ಬಾಟಂ 2 ಮಾಡಲಿದ್ದಾರೆ.
Comments