ನರೇಂದ್ರ ಮೋದಿ ಸಿನಿಮಾ ಟ್ರೇಲರ್ ನೋಡಿ ಸಿಟ್ಟಾದ ಸಲ್ಮಾನ್ ಖಾನ್...

ನರೇಂದ್ರ ಮೋದಿ ಅವರ ಬಯೋಪಿಕ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದವು. ಅಂದಹಾಗೇ ಪಿಎಂ ನರೇಂದ್ರ ಮೋದಿ ಎಂಬ ಹೆಸರಿನ ಮೂಲಕ ಮೋದಿಯವರ ಸಿನಿಮಾ ಟ್ರೇಲರ್ ಇತ್ತೀಚಿಗೆ ರಿಲೀಸ್ ಆಗಿದೆ. ಕೆಲ ಸ್ಟಾರ್ ನಟರ ಸಿನಿಮಾ ಟ್ರೇಲರ್ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಂದಷ್ಟು ಜನ ಚೆನ್ನಾಗಿ ಮೂಡಿ ಬಂದಿದೆ ಎಂದರೆ ಇನ್ನೊಂದಿಷ್ಟು ಮಂದಿ ನೆಗಟೀವ್ ಕಮೆಂಟ್ ಮಾಡಿದ್ದಾರೆ. ಬಾಲಿವುಡ್ ನ ನಟ ವಿವೇಕ್ ಓಬೆರಾಯ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ಈ ಸಿನಿಮಾ ಮೇಲೆ ಸಿಟ್ಟಾಗಿದ್ದಾರೆ ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ನಟ ಸಲ್ಮಾನ್ ಖಾನ್. ವಿವೇಕ್ ಓಬೆರಾಯ್ ಗೂ ಮತ್ತು ಸಲ್ಮಾನ್ ಖಾನ್ ಗೂ ಶೀತಲ ಸಮರ ನಡೆಯುತ್ತಲೇ ಇದೆ. ಇದಕ್ಕೆ ನಾನಾ ಕಾರಣಗಳಿವೆ. ಈಗ ಸಲ್ಲು, ಈ ಚಿತ್ರದ ಬಗ್ಗೆ ತೀವ್ರವಾಗಿ ಅಸಮಾಧಾನ ಹೊರಹಾಕಿದ್ದಾರಂತೆ. ಆದರೆ ಚುನಾವಣೆ ಸಮಯದಲ್ಲಿಯೇ ಸಿನಿಮಾ ಟ್ರೇಲರ್ ರಿಲೀಸ್ ಮಾಡಲಾಗಿದ್ದು, ಭಾರೀ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ನಟ ಸಲ್ಲು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಅವರು ಸಿನಿಮಾ ನೋಡಿ ಸಿಟ್ಟಾಗಲು ಕಾರಣ ಸಿನಿಮಾದ ಹಾಡು. ಸಲ್ಮಾನ್ ಖಾನ್ ಅಭಿನಯದ ‘ದಸ್’ ಚಿತ್ರದ ‘ಸುನೋ ಗೌರ್ ಸೆ ದುನಿಯಾ ವಾಲೋ’ ಹಾಡು ನರೇಂದ್ರ ಮೋದಿ ಬಯೋಪಿಕ್ನಲ್ಲಿ ಬಳಕೆಯಾಗಿದೆ. ವಿವೇಕ್ ಚಿತ್ರದಲ್ಲಿ ತನ್ನ ಸಿನಿಮಾದ ಹಾಡು ಬಳಕೆಯಾಗಿರುವುದು ಸಲ್ಲು ಬೇಸರಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ.
Comments