ವಿಕಟಕವಿ ಭಟ್ಟರ ಸಾಲುಗಳನ್ನ ಕದ್ದ ರಾಜಕೀಯ ಪಕ್ಷ : ಈ ಬಗ್ಗೆ ಭಟ್ರು ಹೇಳಿದ್ದೇನು..?!
ಲೋಕಸಭೆ ಚುನಾವಣೆ ಕಾವು ಜೋರಾಗುತ್ತಿದ್ದಂತೇ ಸ್ಯಾಂಡಲ್’ವುಡ್ ಸ್ಟಾರ್ ನಟರ ಹೇಳಿಕೆ ಕೂಡ ಅಷ್ಟೇ ಪ್ರಮಾಣವಾಗಿ ಬಿರುಸುಗೊಳ್ಳುತ್ತಿವೆ. ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಇಬ್ಬರು ಘಟಾನುಘಟಿ ಸ್ಪರ್ಧಿಗಳ ಬಗ್ಗೆ ನಿರಾಶದಾಯಕರಾಗಿ ಮಾತನಾಡಿದ್ದಾರೆ. ಅದ್ಯಾಕೋ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಮಗೆ ಅತಿಆಸೆ ಅಗತ್ಯವಿಲ್ಲ, ನಾನು ಈ ಬಾರಿ ಪರ ಪ್ರಚಾರಕ್ಕೆ ಹೋಗಲ್ಲ. ರಾಜಕೀಯ ಮಾಡೋಕೆ ಬುದ್ಧಿ ಬೇಕು ನನಗದು ಸಾಲಲ್ಲ ಎಂದು ನಟಿ ಸುಮಲತಾ ವಿರುದ್ಧ ಟಾಂಗ್ ನೀಡಿದ್ರು. ಇದೀಗ ವಿಕಟ ಕವಿ ಯೋಗರಾಜ್ ಭಟ್ರು ನೊಂದು ಪತ್ರವೊಂದನ್ನು ಬರೆದಿದ್ದಾರೆ.
ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ನಾನು ಬರೆದ ಕೆಲ ಕವಿತೆಯ ಸಾಲುಗಳು, ಗಾದೆ ರೂಪದ ಕವನಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಮತದಾರರ ಮನ ಸೆಳೆಯೋಕೆ ಈ ರೀತಿ ಚೀಪ್ ಆಗಿ ಬಳಸಿಕೊಳ್ಳೋದು ನಿಜಕ್ಕೂ ನನಗೆ ಅಸಮಾಧನವಿದೆ. ಇದರಿಂದ ಹಿಂಸೆ ಆಗುತ್ತಿದೆ. ನಾನು ಯಾವ ಪಕ್ಷದ ಪರ ಅಲ್ಲ. ಎಡ ಬಲ ಜಾತಿ ಸೇರಿದವನಲ್ಲ. ನೋಡುಗರು ಕೂಡ ನನ್ನನು ಪಕ್ಷಪಾತಿಯಾಗಿ ನೋಡಬೇಕು. ನಿರ್ಲಿಪ್ತತೆ ಕಾಪಾಡಬೇಕು ಎಂದಿದ್ದಾರೆ. ಅಂದಹಾಗೇ ಭಟ್ರ ಮನಸ್ಸಿಗೆ ಇರಿಸು-ಮುರಿಸು ತಂದಿದ್ದು ಬಿಜೆಪಿ ಪಕ್ಷದ್ದು ಎನ್ನಲಾಗಿದೆ. ಅಂದಹಾಗೇ ಫೇಸ್ ಬುಕ್ ಮೂಲಕ ಭಟ್ಟರು ಇದನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ಆ ಪಕ್ಷ, ಕಾಡು ಕ್ರಮೇಣ ಕ್ಷೀಣಿಸುತ್ತಿತ್ತು. ಕಾಡಿನ ಮರಗಳು ಕೊಡಲಿಗೆ ಓಟು ಹಾಕುತ್ತಿದ್ದವು, ಏಕೆಂದರೆ, ಕೊಡಲಿಯ ಹಿಂದಿರುವ ಕಟ್ಟಿಗೆಯ ಹಿಡಿಕೆ ನಮ್ಮ ಜಾತಿಯವನು ಎಂಬ ಕಾರಣಕ್ಕೆ ಎಂಬ ಸಾಲುಗಳಿದ್ದವು.
Comments