ಈ ಬಾರಿ ಟ್ರೋಲ್ ಮಾಡಿದವರಿಗೆ ರಶ್ಮಿಕಾ ಖಡಕ್ ವಾರ್ನಿಂಗ್…?
ಗೀತಾ ಗೋವಿಂದಂ ಸಿನಿಮಾ ಮೂಲಕ ಹಾಟ್ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ನಟಿ ರಶ್ಮಿಕಾ ಮಂದಣ್ಣ ಸದ್ಯ ಅಭಿಮಾನಿಗಳಿಗೆ ಈ ಬಾರಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಪದೇ ಪದೇ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ ಎಂಬ ಪಟ್ಟದ ಬದಲು, ರಶ್ಮಿಕಾ ಇದೆಲ್ಲಾ ನಿನಗೆ ಬೇಕಿತ್ತಾ ಎಂಬ ನೆಗಟೀವ್ ಕಮೆಂಟ್'ಗಳನ್ನೇ ಹೆಚ್ಚಾಗಿ ಪಡೆದುಕೊಂಡಿದ್ದಾರೆ ಕರ್ನಾಟಕದ ಕ್ರಶ್. ಆದರೆ ಯಾರು ಎಷ್ಟೇ ಕಮೆಂಟ್ ಮಾಡಿದ್ರು, ಟ್ರೋಲ್ ಮಾಡಿದ್ರು ಜಗ್ಗದ ರಶ್ಮಿಕಾ ಹೊಸ ಸಿನಿಮಾ ಡಿಯರ್ ಕ್ರಾಮೆಡ್ ನಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ವಿರುದ್ಧಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದವರಿಗೆ ಈ ಬಾರಿ ಖಾರವಾಗಿ ಪ್ರತಿಕ್ರಿಯೆ ನಿಡಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ರೊಮ್ಯಾನ್ಸ್ ಸೀನ್ ಗಳಿಗೆ ಭಾರೀ ವಿರೋಧ ವ್ಯಕ್ತವಾಯ್ತು. ಆದರೂ ರಶ್ಮಿಕಾ ಮಂದಣ್ಣ ಈ ಬಾರಿ ಖಡಕ್ ಆಗಿಯೇ ವಾರ್ನಿಂಗ್ ಮಾಡಿದ್ದಾರೆ. ನಾವು ಕಲಾವಿದರು, ಯಾವ ಪಾತ್ರ ಕೊಟ್ಟರೂ ಮಾಡಬೇಕು. ಪಾತ್ರಗಳಿಗೆ ನ್ಯಾಯ ಒದಗಿಸ ಬೇಕು. ಹಾಗೇ ನಾನು ಕೂಡ ಮಾಡಿದ್ದೀನಿ. ಗೋತಾ ಗೋವಿಂದಂ ಸಿನಿಮಾದಲ್ಲಿ ಆ ಸೀನ್ ಬೇಕಿತ್ತು. ಮಾಡಿದ್ದೀನಿ, ಹಾಗೇ ಡಿಯರ್ ಕ್ರಾಮೆಡ್ ನಲ್ಲಿ ಪಾತ್ರಕ್ಕೆ ಆ ಸೀನ್ ಅಗತ್ಯವಿತ್ತು. ಮಾಡಿದ್ದೀನಿ. ಇಷ್ಟಕ್ಕೂ ನನ್ನನ್ನು ಟ್ರೋಲ್ ಮಾಡೋವರಿಗೆ ನನ್ನ ಕೊನೆಯ ವಾರ್ನಿಂಗ್ ಏನ್ ಗೊತ್ತಾ…ನಾನು ಏನಾದ್ರೂ ಮಾಡ್ಕೊತ್ತೀನಿ. ಅಷ್ಟಕ್ಕೂ ನನ್ನ ಮುತ್ತು.
ನನ್ನಿಷ್ಟ, ನಾನ್ ಯಾರಿಗಾದ್ರು ಕೊಡ್ತೀನಿ. ನಿಮಗೇನು ಎಂದು ಟ್ರೋಲಿಗರ ಕಣ್ಣು ಕೆಂಪಗೆ ಮಾಡಿದ್ದಾಳೆ ಕರ್ನಾಟಕದ ಕ್ರಶ್.ಅದೇನೆ ಇರಲೀ ಅನೇಕ ಬಾರಿ ರಶ್ಮಿಕಾ ಟ್ರೋಲ್ ಆದ್ರೂ ಅವರ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಸೀನ್ ನಿಂದ ಇಡೀ ಸಿನಿಮಾ ಅಳೆಯ ಬೇಡಿ ಎಂದು ಕೂಡ ಹೇಳಿದ್ದಾರೆ. ಸದ್ಯ ಬಾಲಿವುಡ್ ನಿಂದಲೂ ರಶ್ಮಿಕಾ ಗೆ ಆಫರ್ ಬಂದಿದೆ. ಒಟ್ಟಾರೆ ಕರ್ನಾಟಕದ ಹುಡುಗಿ ಬಾಲಿವುಡ್ ತನಕವೂ ಬೆಳೆದಿರೋದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ಅಭಿಮಾನಿಗಳು.
Comments