28 ಮಕ್ಕಳನ್ನು ದತ್ತು ಪಡೆದ ಬಿಗ್ ಬಾಸ್ ಸ್ಪರ್ಧಿ..!!
ಕನ್ನಡದ ಅತೀ ದೊಡ್ಡ ರಿಯಾಲಿಟಿ ಷೋಗಳಲ್ಲಿ ಬಿಗ್ ಬಾಸ್ ಕೂಡ ಒಂದು.. ಬಿಗ್ ಬಾಸ್ 6 ಸಿಕ್ಕಾಪಟ್ಟೆ ವಿವಾದಕ್ಕೆ ಗುರಿಯಾಗಿತ್ತು.. ಕೆಲವು ಅಭ್ಯರ್ಥಿಗಳಂತೂ ಹೊರಬಂದ ಮೇಲೂ ಕೂಡ ತುಂಬಾ ಸುದ್ದಿಯಾದರು.. ಕೆಲವರು ಒಳ್ಳೆಯ ವಿಷಯಕ್ಕೆ ಸುದ್ದಿಯಾದರೂ ಮತ್ತೆ ಕೆಲವರು ವಿವಾದ ಸೃಷ್ಟಿ ಮಾಡಿಕೊಂಡು ಸುದ್ದಿಯಾದರು.. ಆದರೆ ತುಂಬಾ ಹೆಸರು ಮಾಡಿದ್ದವರ ಪೈಕಿ ಮಾಡ್ರನ್ ರೈತ ಅಂತಾನೆ ಹೆಸರು ಮಾಡಿದ್ದ ಶಶಿಕುಮಾರ್ ಕೂಡ ಒಬ್ಬರು… ಇದೀಗ ಅವರು ಮತ್ತೊಂದು ಸಮಾಜಮುಖಿ ಕಾರ್ಯ ಮಾಡಿದ್ದಾರೆ.. ಅರೇ ಹೌದಾ .. ಏನದು ಅಂತೀರಾ.! ಮುಂದೆ ಓದಿ..
ಆಧುನಿಕ ರೈತ ಅಂತಾನೆ ಖ್ಯಾತಿಗಳಿಸಿರುವ ಶಶಿ ಕೆಲವು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಶಶಿ ಅಭಿನಯದ 'ಕೌಸಲ್ಯಾ ಕಲ್ಯಾಣ' ಸಿನಿಮಾ ಕೂಡ ಬಿಡುಗಡೆಗೆ ಸಿದ್ದವಾಗುತ್ತಿದೆ.. ಇದರ ಜೊತೆ ಜೊತೆಗ ಶಶಿಕುಮಾರ್ ಮತ್ತೊಂದು ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು, ಶಶಿ ಒಂದು ಶಾಲೆಯ ಮಕ್ಕಳನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಆ ಶಾಲೆಯ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವ ಹೊಸ ಜವಾಬ್ದಾರಿಯನ್ನು ಶಶಿಕುಮಾರ್ ಹೊತ್ತುಕೊಂಡಿದ್ದಾರೆ.
ಶಶಿ ಸ್ವಂತ ಊರಾದ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಗ್ರಾಮದ ವಿವಿಎಸ್ ಶಾಲೆಯ 28 ಮಕ್ಕಳನ್ನು ಶಶಿ ದತ್ತು ಪಡೆದಿದ್ದಾರೆ. ವಿಶೇಷ ಅಂದ್ರೆ, ಶಶಿ ಓದಿ ಆಡಿ ಬೆಳೆದಿರುವ ಶಾಲೆಯಾಗಿದೆ. ಹಾಗಾಗಿ ಮತ್ತಷ್ಟು ಕಾಳಜಿಯಿಂದ ಈ ಶಾಲೆ ಮಕ್ಕಳನ್ನು ದತ್ತು ಪಡೆಯುವ ಮೂಲಕ ಶಾಲೆಯ ಋಣ ತೀರಿಸುತ್ತಿದ್ದಾರೆ. ಶಶಿ ಮಾಡುತ್ತಿರುವ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.. ಕೇವಲ ಮನೆಯೊಳಗೆ ಅಷ್ಟೆ ಅಲ್ಲ..ಹೊರಗೂ ಕೂಡ ಶಶಿ ತುಂಬಾ ಹೆಸರು ಮಾಡುತ್ತಿದ್ದಾರೆ.
Comments