ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಖ್ಯಾತ ನಟಿ…!

ಸಿನಿಮಾ ಲ್ಯಾಂಡ್’ನ ಕೆಲ ನಾಯಕಿಯರು ರಾಜಕೀಯ ಪಕ್ಷಗಳಿಗೆಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೇ ಬಾಲಿವುಡ್’ನ ಖ್ಯಾತ ನಟಿ ಯೊಬ್ಬರುಕಾಂಗ್ರೆಸ್ ಸೇರಲಿದ್ದು, ಅವರನ್ನು ಕಣಕ್ಕಿಳಿಸಲು ಪಕ್ಷ ಈಗಾಗಲೇ ನಿರ್ಧರಿಸಿದೆ. ಈ ಹಿಂದೆ ನಟಿ ಸಪ್ನಾ, ಕಾಂಗ್ರೆಸ್ ಯಾವ ಆಫರ್ ಕೊಟ್ರೂ ನಾನು ಅವರೊಂದಿಗೆ ಕೈ ಜೋಡಿಸಲ್ಲ ಎಂದಿದ್ದರು. ಆದರೆ ಅದೇ ಬಿ ಟೌನ್'ನ ಮತ್ತೊಬ್ಬ ಸುಂದರಿ ಊರ್ಮಿಳಾ ಮಾತೊಂಡ್ಕರ್ ಅವರ ಹೆಸರು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆಯೂ ಅನೇಕ ಬಾರಿ ಅವರ ಹೆಸರು ಕೇಳಿದ್ರು ಊರ್ಮಿಳಾ ಕಾಂಗ್ರೆಸ್ ಸೇರಲಿದ್ದಾರೆಯೇ ಎಂಬ ಅನುಮಾನವಿತ್ತು. ಆಕೆ ಸ್ಪರ್ಧೆ ಮಾಡುತ್ತಿರುವ ಕ್ಷೇತ್ರ ಯಾವುದು ಗೊತ್ತಾ..?
ಇದೀಗ ಊರ್ಮಿಳಾ ಮಾತೊಂಡ್ಕರ್ (45) ಅವರ ಹೆಸರು ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಪರಿಗಣನೆಗೆ ಬಂದಿದೆ. ಈ ಕುರಿತು ಅಂತಿಮ ನಿರ್ಧಾರ ಶೀಘ್ರದಲ್ಲಿಯೇ ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಊರ್ಮಿಳಾ ಕಾಂಗ್ರೆಸ್'ನಿಂದ ಮುಂಬೇ ಉತ್ತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವುದರ ಬಗ್ಗೆ ಅವರ ವಕ್ತಾರರು ಪ್ರತಿಕ್ರಿಯೆ ನೀಡಲು ನಿರಾಕಿರಿಸಿದ್ದಾರೆ. ಸೋಮವಾರವಷ್ಟೇ ಈ ಬಗ್ಗೆ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮಿಲಿಂದ್ ದೇವೊರಾ ಅವರಿಗೆ ಬಿಟ್ಟು ಕೊಟ್ಟ ಸಂಜಯ್ ನಿರುಪಮ್ ಅವರುಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
Comments