ಮದುವೆ ಸಂಭ್ರಮದಲ್ಲಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ….!

ಅಂದಹಾಗೇ ಲೋಕಸಭೆ ಚುನಾವಣೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸುಖಾಸುಮ್ಮನೇ ಟ್ರೋಲ್ ಆಗುತ್ತಿದ್ದವರ ಪೈಕಿ ನಟಿ ರಾಧಿಕಾ ಕುಮಾರ ಸ್ವಾಮಿ ಕೂಡ ಒಬ್ಬರು. ಗಂಡನ ಹೆಸರನ್ನು ಬಹಿರಂಗವಾಗಿ ಹೇಳುವುದಿಲ್ಲಾ, ನಮ್ಮ ಸಂಪ್ರದಾಯದಲ್ಲಿ ಗಂಡನ ಹೆಸರು ಹೇಳಿದ್ರೆ ಅವರ ಆಯಸ್ಸು ಕಡಿಮೆಯಾಗುತ್ತದೆ ಎಂದು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ನಟಿ ರಾಧಿಕಾ ಅವರನ್ನು ದೇವೇಗೌಡರ ಫ್ಯಾಮಿಲಿ ಜೊತೆ ಸೇರಿಸಿ ಟ್ರೋಲ್ ಮಾಡಲಾಗುತ್ತಿದೆ.
ಅದೇನೇ ಇರಲೀ ಬಿಡಿ. ಆದರೆ ಇದೀಗ ರಾಧಿಕಾ ಕುಮಾರ ಸ್ವಾಮಿ ಅವರು ಮದುವೆ ಸಂಭ್ರಮದಲ್ಲಿದ್ದಾರಂತೆ. ಯಾರ ಮದುವೆ ಅನ್ಕೊಂಡ್ರಾ…… ರಾಧಿಕಾ ಕುಮಾರಸ್ವಾಮಿ ತಾವು ಮದುವೆಯಾಗೋ ಸಂಭ್ರಮದಲ್ಲಿರುವ ಪೋಟೋವೊಂದು ರಿವೀಲ್ ಆಗಿದೆ. ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನ್ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ರಾಧಿಕಾ ಮದುವೆಯಾಗುವ ಸಂಭ್ರಮದಲ್ಲಿದ್ದಾರಂತೆ. ಹೌದು..ಕಾಂಟ್ರಾಕ್ಟ್ ಹೆಸರಿನ ಸಿನಿಮಾದಲ್ಲಿ ಅರ್ಜುನ್ ಸರ್ಜಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ರಾಧಿಕಾ. ಈಗಾಗಲೇ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು ಚಿತ್ರದಲ್ಲಿ ರಾಧಿಕಾ ಸಾಫ್ಟ್’ ವೇರ್ ಎಂಜಿನಿಯರ್ ಆಗಿ ಕಾಣಿಸಿಕೊಂಡರೇ, ಅರ್ಜುನ್ ಸರ್ಜಾ ಅವರು ಬ್ಯುಸಿನೆಸ್ ಮ್ಯಾನ್ ಆಗಿ ನಟಿಸುತ್ತಿದ್ದಾರೆ. ಬೋಲ್ಡ್ ಕ್ಯಾರೆಕ್ಟರ್ ನಲ್ಲಿ ಮಿಂಚುತ್ತಿರುವ ರಾಧಿಕಾ ಸೀನ್’ವೊಂದರಲ್ಲಿ ತನ್ನ ಗೆಳತಿಯರೊಂದಿಗೆ ಸೇರಿ ಮದುವೆಗೆ ತಯಾರಿ ನಡೆಸಿದ್ದಾರೆ. ಟೀಸರ್ನಿಂದಲೇ ಕ್ಯೂರಿಯಾಸಿಟಿ ಮೂಡಿಸಿದೆ ಸಿನಿಮಾ. ಇತ್ತೀಚೆಗೆ ರಾಧಿಕಾ ಬಳುಕೋ ಬಳ್ಳಿಯಂತೇ ಕಾಣುತ್ತಾರೆ. ದಶಗಳ ಕಾಲ ತೆರೆಯಿಂದ ದೂರವಿದ್ದ ರಾಧಿಕಾ ಅವರ ಬಹು ನಿರೀಕ್ಷಿತ ಸಿನಿಮಾ ಭೈರಾದೇವಿ, ರಾಜೇಂದ್ರ ಪೊನ್ನಪ್ಪ, ದಮಯಂತಿ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಸದ್ಯ ರಾಧಿಕಾ ಕಾಂಟ್ರಾಕ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Comments