ರಾಧಿಕಾ ಮನವಿಗೆ ನಾಚಿ ನೀರಾದ ರಾಕಿಂಗ್ ಸ್ಟಾರ್ ಯಶ್…!
ಸ್ಯಾಂಡಲ್’ವುಡ್’ನ ಕ್ಯೂಟೆಸ್ಟ್ ದಂಪತಿ ಎಂದರೆ ಅದು ಯಶ್ ಅಂಡ್ ರಾಧಿಕಾ. ರಾಧಿಕಾ ಕೇಳಿದ ಮನವಿಗೆ ನಾಚಿ ನೀರಾಗಿದ್ದಾರಂತೆ ರಾಕಿಂಗ್ ಸ್ಟಾರ್ ಯಶ್. ಅಂತದ್ದೇನು ಕೇಳಿದ್ದಾರೆ ರಾಧಿಕಾ ಅನ್ಕೊಂಡ್ರಾ…? ಅವರು ನಾಚಿಕೆಯಿಂದ ಮುಖ ಮುಚ್ಚಿಕೊಂಡಿದ್ದನ್ನು ರಾಧಿಕಾ ಅವರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೌದು. ಇತ್ತೀಚೆಗೆ ಯಶ್ ಅಂಡ್ ರಾಧಿಕಾ ಇಬ್ಬರು ಒಟ್ಟಿಗೆ ಹೋಟೆಲ್ ಗೆ ಹೋಗಿದ್ದಾರೆ. ಯಶ್ ಎದುರು ಕುಳಿತಿದ್ದ ರಾಧಿಕಾ ಅವರೇ ಯಶ್’ರನ್ನು ಏನೋ ಕೇಳಿದ್ದಾರೆ. ರಾಧಿಕಾ ಚೇಡಿಸೋಕೆ ಅಂತಾನೇ ಯಶ್ ತಮ್ಮ ಎರಡು ಕೈಗಳಿಂದ ಮುಖ ಮುಚ್ಚಿಕೊಂಡಿದ್ದಾರೆ. ಫಟ್ ಅಂತಾ ಅದೇ ಸಮಯಕ್ಕೆ ಸರಿಯಾಗಿ ರಾಧಿಕಾ ಪೋಟೋ ತೆಗೆದು ತಮ್ಮ ಇನ್ಸ್’ಟ್ರಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.ಅರೇ…! ಯಶ್'ಗೆ ಏನಾದ್ರು ರಾಧಿಕಾ ಕೇಳ್ ಬಿಟ್ರಾ ಅನ್ಕೊಂಡ್ರಾ… ಕೇಳಿದ್ದು ನಿಜ. ಆದರೆ ಯಶ್ ಆ ಪರಿ ನಾಚಿದ್ಯಾಕೆ ಗೊತ್ತಾ..?ಯಶ್ ಅವರನ್ನು ರಾಧಿಕಾಫೋಟೋಗೆ ಪೋಸ್ ಕೊಡಿ, ತುಂಬಾ ಚೆನ್ನಾಗಿ ಕಾಣ್ತಿದ್ದೀರಾ ಎಂದು ಕೇಳಿದ್ದಾರೆ. ರಾಕಿಂಗ್ ಸ್ಟಾರ್, ರಾಧಿಕಾ ಮಾತು ಕೇಳಿ, ನೋ ನೋ ಎಂದು ಯಶ್ ಹೀಗೆ ತುಂಬಾ ನಾಚಿಕೊಂಡಿದ್ದಾರೆ” ಎಂದು ನಟಿ ರಾಧಿಕಾ ಫೋಟೋದೊಂದಿಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಈ ಫೋಟೋ ನೋಡಿ ಕೆಲವರು ಸೂಪರ್ ಅಂತಾ ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ಯಶ್ ಅವರ ಫೋಟೋ ಮುದ್ದಾಗಿ ಕಾಣುತ್ತಿದ್ದಾರೆ ನಿಮ್ಮ ಪತಿ ಎಂದಿದ್ದಾರೆ. ಯಶ್'ಗೆ ರಾಧಿಕಾ ನೀವೇ ಬೆಸ್ಟ್ ಜೋಡಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
Comments