ಪತಿಯ ಮಾಜಿ ಪ್ರೇಯಸಿ ಜೊತೆ ಡೇಟಿಂಗ್ ಪ್ಲ್ಯಾನ್'ನಲ್ಲಿದ್ದಾಳಂತೇ ನಟಿ ಪಿಗ್ಗಿ!!!

ಬಾಲಿವುಡ್ ನಟಿ ಪಿಗ್ಗಿ ಅಲಿಯಾಸ್ ಪ್ರಿಯಾಂಕ ಚೋಪ್ರಾ ಹಾಲಿವುಡ್’ನ ಸಿಂಗರ್ ನಿಕ್ ಜೋನಸ್ ಜೊತೆ ಮದುವೆಯಾದ ಮೇಲಂತೂ ದಿನಕ್ಕೊಂದು ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಟ್ರೋಲ್ ಆಗಿರೋದು ಪಿಗ್ಗಿನೂ ಅಲ್ಲಾ, ಆಕೆಯ ಪತಿ ನಿಕ್ ಕೂಡ ಅಲ್ಲ. ಬದಲು ಯಾರು ಗೊತ್ತಾ..? ನಿಕ್ ನ ಮಾಜಿ ಪ್ರೇಯಸಿ ನಟಿ ಮಿಲೀ ಸೈರಸ್.
ಈಕೆ ಬೋಲ್ಡ್ ಫೋಟೋಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾಳೆ. ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಈ ಸುಂದರಿ ಇದೀಗ, ಅಭಿಮಾನಿಗಳು ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುವಂತೆ ಫೋಟೋವೊಂದನ್ನು ಹಾಕಿದ್ದಾಳೆ. ಅದ್ಯಾವ ಪೋಟೋ ಅಂತೀರಾ...!ನ್ಯೂಡ್ ಆಗಿ ನಾಯಿ ಜೊತೆ ಕಾಲ ಕಳೆಯುತ್ತಿರೋ ಫೋಟೋ ಹಾಕಿದ್ದಾಳೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ರಾಷ್ಟ್ರೀಯ ನಾಯಿ ದಿನದಂದು ತನ್ನ ನಾಯಿಗೆ ವಿಶ್ ಮಾಡಲು ಮಿಲೀ ಸೈರಸ್ ಈ ಫೋಟೋ ಹಾಕಿದ್ದಾಳೆ.
ಮಿಲೀ ಸೈರಸ್, ನ್ಯೂಡ್ ಫೋಟೋ ಹಾಕಿರುವುದು ಇದೇ ಮೊದಲಲ್ಲ. ಮಿಲೀ, ಲಿಯಾಮ್ ಹೆಮ್ಸ್ವರ್ತ್ ಎಂಬಾತನ ಜೊತೆ ಮದುವೆಯಾಗಿದ್ದಾಳೆ. ನನ್ನ ಪತಿ ನಿಕ್'ರ ಮಾಜಿ ಪ್ರೇಯಸಿ ಜೊತೆ ಚಿತ್ರದಲ್ಲಿ ನಟಿಸಿರುವ ಪ್ರಿಯಾಂಕಾ ಅನೇಕ ಬಾರಿ ಇಬ್ಬರು ಕುಳಿತು ಮಾತನಾಡಿದ್ದೇವೆ. ಒಬ್ಬರಿಗೊಬ್ಬರು ಭಾವನೆಗಳನ್ನು ಶೇರ್ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ನಾನು ನನ್ನ ಪತಿ ನಿಕ್ ಹಾಗೂ ಮಿಲೀ ಹಾಗೂ ಅವ್ರ ಪತಿ ಲಿಯಾಮ್ ಹೆಮ್ಸ್ವರ್ತ್ ಜೊತೆ ಡಬಲ್ ಡೇಟಿಂಗ್ ಪ್ಲಾನ್ ಮಾಡ್ತಿದ್ದೇವೆ ಎಂದಿದ್ದಾಳೆ.
Comments