ಜನಪ್ರಿಯ ನಟಿಯನ್ನು ದೆವ್ವ ಎಂದು ಕರೆದಿದ್ದಕ್ಕೆ ಪಕ್ಷದಿಂದಲೇ ಉಚ್ಛಾಟನೆಗೊಂಡ ನಾಯಕ…?!!!

ಚುನಾವಣೆ ಹತ್ತಿರ ಬರುತ್ತಿದ್ದಂತೇ ಕೆಲ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಾ ತಮ್ಮತಮ್ಮ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೇ ಇದು ನಮ್ಮ ರಾಜ್ಯ ರಾಜಕಾರಣದಲ್ಲಷ್ಟೇ ಅಲ್ಲ. ಪಕ್ಕದ ಡಿಎಂಕೆ ಪಕ್ಷದಲ್ಲೂ ಕೂಡ ನಡೆದಿದೆ. ಅಂದಹಾಗೇ ಖ್ಯಾತ ನಟಿಯ ಬಗ್ಗೆ ಅವಹೇಳನಕಾರಿ ಶಬ್ಧ ಬಳಸಿದ್ದಕ್ಕೆ ನಟ ರಾಧಾ ರವಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
'ಕೊಲಯುತ್ತಿಲ್ ಕಾಲಂ' ಚಲನಚಿತ್ರ ಬಿಡುಗಡೆಗೆ ಮುನ್ನ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ರಾಧಾ ರವಿ ಈ ಸಂದರ್ಭದಲ್ಲಿಯೇ ನಯನಾತಾರರನ್ನು ಉಲ್ಲೇಖಿಸಿ ಆಕೆ ಬೇರೆ ಬೇರೆ ಚಿತ್ರಗಳಲ್ಲಿ ಪ್ರೇತ ಮತ್ತು ಸೀತೆಯ ಪಾತ್ರವನ್ನು ಮಾಡುತ್ತಿರುವುದರ ಬಗ್ಗೆ ಹೇಳಿಕೆ ನೀಡಿದ್ದರು. ಹಿಂದೆಲ್ಲಾ ಹೀಗೆಲ್ಲಾ ಇರ್ತಾಯಿರಲಿಲ್ಲ. ನಟಿ ವಿಜಯಾರಂತಹ ನಟಿಯರನ್ನು ದೇವತೆಗಳ ಪಾತ್ರಕ್ಕಾಗಿ ಆರಿಸಲಾಗುತ್ತಿತ್ತು. ಆದರೆ ಇಂದು ಯಾರನ್ನು ಬೇಕಾದರೂ ದೇವತೆಯ ಪಾತ್ರಕ್ಕೆ ಆರಿಸಬಹುದು.
ಅವರನ್ನು ಪ್ರಾರ್ಥಿಸಬೇಕೆಂದು ಅನಿಸುವ ಪಾತ್ರಕ್ಕೂ ಆರಿಸಬಹುದು ಹಾಗೂ ಅವರನ್ನು ನೋಡಿದಾಗ ನಿಮ್ಮ ಕಡೆ ಕರೆಯ ಬೇಕೆಂದು ಅನಿಸುವವರನ್ನೂ ಆರಿಸಬಹುದು ಎಂದು ಹೇಳಿದ್ದರು. ಅವರ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಹಾಗೂ ಚಿತ್ರ ತಯಾರಕ ವಿಘ್ನೇಶ್ ಶಿವನ್ ಸೇರಿದಂತೇ ಅನೇಕರು ಟೀಕಿಸಿದ್ದರು. ಈ ಹೇಳಿಕೆ ಅಸ್ವೀಕಾರಾರ್ಹ ಎಂದು ಹೇಳಿದ್ದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟ್ಯಾಲಿನ್, ನಟನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದ್ದರು. ಗಾಯಕಿ ಚಿನ್ಮಯಿ ಅವರು ರಾಧಾರವಿ ಅವರ ಮೇಲೆ ಮೀಟೂ ಆರೋಪ ಹೊರಿಸಿದ್ದರಿಂದ ಅವರನ್ನು ಡಬ್ಬಿಂಗ್ ಯೂನಿಯನ್ ನಿಂದಲೇ ಹೊರ ಕಳುಹಿಸಿರೋದನ್ನು ಇಲ್ಲಿ ಸ್ಮರಿಸಬಹುದು.
Comments