ನಟಿ ದೀಪಿಕಾ ಪಡುಕೋಣೆ ಮೇಲೆ ಆ್ಯಸಿಡ್ ದಾಳಿ….?!!!

ಡಿಪ್ಪಿ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ, ಅವಳ ಕಣ್ಣಿಗೆ ಕೋಟ್ಯಾಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಡಿಪ್ಪಿ ಸ್ಟೈಲ್, ಲುಕ್ ಗೆ ಬಿದ್ದವರ ಪೈಕಿ ಆಕೆಯ ಪತಿ ರಣವೀರ್ ಕೂಡ ಇಬ್ಬರು. ಆದರೆ ಅಂತಹ ಸುಂದರವಾದ ಮುಖಕ್ಕೆ ಯಾರೋ ಆ್ಯಸಿಡ್ ಸುರಿದಿದ್ದಾರೆಂದರೇ ನಿಜಕ್ಕೂ ಗಾಬರಿಯಾಗಲ್ವಾ…?
ನಟಿ ದೀಪಿಕಾ ಕನ್ನಡದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ರೂ ಬೆಳೆದಿದ್ದೂ ಮಾತ್ರ ಬಾಲಿವುಡ್ ನಲ್ಲಿ. ದೀಪಿಕಾ ರಣವೀರ್ ಸಿಂಗ್ ರನ್ನು ಮದುವೆಯಾಗಿ ಚೆನ್ನಾಗಿಯೇ ಜೀವನ ನಡೆಸುತ್ತಿದ್ದಾರೆ. ಆದರೆ ಇದ್ದಕ್ಕಿಂದಂತೇ ಇಂಥಾ ಸುದ್ದಿಯೊಂದು ಹಬ್ಬಿದೆ. ಡಿಪ್ಪಿ ಮೇಲೆ ಯಾರೋ ಆ್ಯಸಿಡ್ ಸುರಿದಿದ್ದಾರೆ. ಡಿಪ್ಪಿ ಮುಖ ನೋಡಲಾಗುತ್ತಿಲ್ಲ. ಅರೆಬರೆ ಬೆಂದ ಸ್ಥಿತಿಯಲ್ಲಿದೆ ಆಕೆಯ ಮುಖದ ಚರ್ಮ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಸುದ್ದಿ ಕೇಳಿ ದೀಪಿಕಾ ಪಡುಕೋಣೆ ಅಭಿಮಾನಿಗಳು ಹೌ ಹಾರಿದ್ದಂತೂ ನಿಜ. ಅಷ್ಟೇ ಅಲ್ಲಾ, ಆಕೆಯ ಫೋಟೋ ನೋಡಿ ನೋಡಲಾಗುತ್ತಿಲ್ಲವೆಂದು ಕಮೆಂಟ್ ಕೂಡ ಮಾಡಿದ್ದಾರೆ.
ಅಂದಹಾಗೇ ನಟಿ ದೀಪಿಕಾ ಆ್ಯಸಿಡ್’ನಿಂದ ದಾಳಿಗೊಳಗಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿರೋದಂತೂ ನಿಜ. ಆದರೆ ರಿಯಲ್ ಅಗಿ ಅಲ್ಲಾ, ರೀಲ್ ನಲ್ಲಿ ಡಿಪ್ಪಿ ಮುಖ ಬೆಂದಿದ್ಯಂತೆ. ಏನಿದು ಹೊಸ ಸಮಾಚಾರ ಅಂತೀರಾ..? ಮೇಘನಾ ಗುಲ್ಜಾರ್ ನಿರ್ದೇಶನದ ಆಸಿಡ್ ದಾಳಿಗೊಳಗಾದ ಮಹಿಳೆ ಕಥೆ ಆಧಾರಿ 'ಚಪಾಕ್' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಆ್ಯಸಿಡ್ ದಾಳಿಗೊಳಗಾದ ಮಹಿಳೆ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ತಿದ್ದಾರೆ. ಇಂದಿನಿಂದ ಈ ಸಿನಿಮಾ ಶೂಟಿಂಗ್ ಶುರುವಾಗಲಿದ್ದು, ಸಿನಿಮಾ ಜನವರಿಯಲ್ಲಿ ಕಂಪ್ಲೀಟ್ ಆಗಲಿದೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋ ಶೇರ್ ಮಾಡಿಕೊಂಡಿದ್ದೂ, ಅಪಾರ ಡಿಪ್ಪಿ ಅಭಿಮಾನಿಗಳು ಲೈಕ್ಸ್ ಕೊಟ್ಟಿದ್ದಾರೆ. ಡಿಪ್ಪಿ ಈ ಸಿನಿಮಾದಲ್ಲಿ ಲಕ್ಷ್ಮಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಡಿಪ್ಪಿ ಲುಕ್ ಕಂಡು ಗಾಬರಿ ಮಾಡಿಕೊಂಡಿದ್ರಂತೆ. ದೀಪಿಕಾ ಆ ಫೋಟೋದಲ್ಲಿ ವಿಭಿನ್ನವಾಗಿ ಕಾಣಿಸುತ್ತಿದ್ದಾಳೆ. ದೀಪಿಕಾಗೆ ಈ ಮೂಲಕ ಶುಭ ಹಾರೈಸುತ್ತಿದ್ದಾರೆ ಆಕೆಯ ಫ್ಯಾನ್ಸ್
Comments