ಕೊನೆಗೂ ರಶ್ಮಿಕಾ ರಿಲೀಫ್ : ನಟ ವಿಜಯ್ ದೇವರಕೊಂಡಾಗೆ ಮದುವೆ ಫಿಕ್ಸ್..?!!!
ಅಂದಹಾಗೇ ಕನ್ನಡತಿ ರಶ್ಮಿಕಾ ಜೊತೆ ಗಾಸಿಪ್ ಗೆ ಒಳಗಾಗಿದ್ದ ನಟ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಇತ್ತೀಚೆಗೆ ರಶ್ಮಿಕಾ ಜೊತೆ ಹೊಸ ಸಿನಿಮಾ ಡಿಯರ್ ಕಾಮ್ರೆಡ್ ನಲ್ಲಿನ ಲಿಪ್ಲಾಕ್ ವಿಡಿಯೋ ರಿಲೀಸ್ ಆಗಿ ಮತ್ತಷ್ಟು ಟ್ರೋಲ್ ಆಯ್ತು. ವಿಜಯ್ ಜೊತೆ ರೊಮ್ಯಾನ್ಸ್ ಮಾಡೋ ಸೀನ್ ನಟಿಸ್ತೀರಲ್ಲಾ ನಿಮಗೆ ನಾಚಿಕೆ ಆಗಲ್ವಾ ರಶ್ಮಿಕಾ ನಿಮಗೆ, ಎಂದೆಲ್ಲಾ ಕಮೆಂಟ್ ಮಾಡಿದ್ರು. ಆದರೆ ಅದರ ಬೆನ್ನಲ್ಲೇ ಇದೀಗ ವಿಜಯ್ ದೇವರಕೊಂಡಾಗೆ ಮದುವೆ ಫಿಕ್ಸ್ ಆಗಿದೆ ಎಂಬ ಸುದ್ದಿ ಹಬ್ಬಿದೆ. ವಿಜಯ್ ದೇವರಕೊಂಡಾ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಅಳಿಯನಾಗ್ತಿದ್ದಾರಂತೆ ...? ವಿಜಯ್ ಕೈ ಹಿಡಿಯುತ್ತಿರುವ ಆಕೆ ಯಾರು ಗೊತ್ತಾ.. ಈಗಾಗಲೇ ಖ್ಯಾತ ಸಿನಿಮಾಗಳ ಮೂಲಕ ಹೆಸರಾಗಿರುವ ನಿಹಾರಿಕಾ.
ಏನಿದು ಹೊಸ ಸುದ್ದಿ. ಹೌದು…ಈ ಸುದ್ದಿ ಇದೀಗ ಟಾಲಿವುಡ್ ಸುತ್ತೆಲ್ಲಾ ಗಿರಕಿ ಹೊಡಿಯುತ್ತಿದೆ. ತೆಲುಗಿನ ನಾಗಬಾಬು ಅವರ ಪುತ್ರಿ ನಿಹಾರಿಕಾ ಹಾಗೂ ವಿಜಯ್ ದೇವರಕೊಂಡಾ ಅವರು ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ಎಲ್ಲಿಂದ ಹುಟ್ಟಿಕೊಂಡಿತು ಎಂದು ಯಾರಿಗೂ ಗೊತ್ತಿಲ್ಲ. ಆದರೆ ಸುದ್ದಿ ಮಾತ್ರ ಕಾಡ್ಗಿಚ್ಚಿನಂತೇ ಹಬ್ಬುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ಈ ಸುದ್ದಿ ಹಬ್ಬುತ್ತಿದ್ದಂತೇ ಕೆಲ ಅಭಿಮಾನಿಗಳು ರಶ್ಮಿಕಾಗೆ ಗಾಸಿಪ್ ನಿಂದ ಮುಕ್ತಿ ಸಿಕ್ಕಿತು ಎಂದು ಕಮೆಂಟ್ ಮಾಡುತ್ತಿದ್ದಾರೆ. ವಿಜಯ್ ‘ಗೆ ಜಂಟಿ ಸಿಕ್ಕಿದ್ದಾರೆ ಎಂಬ ವಿಚಾರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಾಗಬಾಬು, ಮಗಳಿಗೆ ತಕ್ಕ ವರನಿಗಾಗಿ ಸರ್ಚ್ ಮಾಡುತ್ತಿದ್ದಾರೆ. ಈಗಾಗಲೇ ವಿಜಯ್ ಗೆ ಪ್ರಪೋಸಲ್ ಹೋಗಿದೆ ಎಂಬ ಸುದ್ದಿಯೂ ಇದೆ. ಆದರೆ ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬುದು ಅಭಿಮಾನಿಗಳ ಪ್ರಶ್ನೆ. ಈಗಾಗಲೇ ವಿಜಯ್ ಮತ್ತು ನಿಹಾರಿಕಾ ಮದುವೆ ಫಿಕ್ಸ್ ಆಗಿರಬಹುದು, ಇನ್ನೂ ಎರಡು ಮನೆಯವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ಮಾತ್ರ ಯಾರಿಂದಲೂ ಪ್ರತಿಕ್ರಿಯೆ ಇಲ್ಲ. ವಿಜಯ್ ಮದುವೆಯಾಗ್ತಿರುವ ನಿಹಾರಿಕಾ ಹೆಸರು ಟಾಲಿವುಡ್ ನ ಫೇಮಸ್ ಆ್ಯಕ್ಟರ್ ಜೊತೆ ತಳುಕು ಹಾಕಿಕೊಂಡಿತ್ತು...?
ನಟ ಪ್ರಭಾಸ್ ಜೊತೆ ಒಂದಷ್ಟು ದಿನ ನಿಹಾರಿಕಾ ನೇಮ್ ತಳುಕು ಹಾಕಿಕೊಂಡಿತ್ತು. ಆ ನಂತರ ತಣ್ಣಗಾಗಿದ್ದೂ ಗೊತ್ತೇ ಇದೆ. ಅಂದಹಾಗೇ ನಿಹಾರಿಕಾ ಹೆಸರು ಇವರ ಜೊತೆ ಅಷ್ಟೇ ಅಲ್ಲಾ 'ಓಕ ಮನಸು' ಚಿತ್ರದ ನಟ ನಾಗ ಶೌರ್ಯ ಜೊತೆಯೂ ಕೂಡ ನಿಹಾರಿಕಾಗೆ ಲವ್ ಆಗಿದೆ ಎಂಬ ಸುದ್ದಿಯಿತ್ತು. ಮದುವೆ ಕೂಡ ನಿಶ್ಚಯವಾಗಿದೆ ಎಂಬ ನ್ಯೂಸ್ ಕೂಡ ಹರಿದಾಡಿತ್ತು. ಆದರೆ ಇದೀಗ ನಿಹಾರಿಕಾ ಹೆಸರು ವಿಜಯ್ ದೇವರಕೊಂಡಾ ಜೊತೆ ಇದೆ.
ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಯಾರು ನೀಡಿಲ್ಲದಿದ್ದರೂ, ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ..? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅಥವಾ ಈ ಸಂಬಂಧ ಮದುವೆ ತನಕ ಹೋಗುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ನಟ ವಿಜಯ್ ದೇವರಕೊಂಡಾ ಮಾತ್ರ ಮೆಗಾಸ್ಟಾರ್ ಚಿರಂಜೀವಿ ಮನೆಗೆ ಅಳಿಯನಾಗ್ತಿದ್ದಾರೆಂಬ ಸುದ್ದಿ ಚಾಲ್ತಿಯಲ್ಲಿದೆ.
Comments