'ನನ್ನ ಸಹಾಯಕ್ಕೆ ಯಾರು ಬಂದಿಲ್ಲ' ಎಂಬ ವಿಜಯಲಕ್ಷ್ಮಿ ಹೇಳಿಕೆಗೆ : ಖಡಕ್ ರಿಯಾಕ್ಟ್ ಮಾಡಿದ ಹ್ಯಾಟ್ರಿಕ್ ಹೀರೋ..?!!!

ರಾಜ್ ಕುಮಾರ್ ಅಪ್ಪಾಜಿ ಇದ್ದಿದ್ರೆ ನನಗೆ ಈ ಸ್ಥಿತಿ ಬರ್ತಾಯಿರಲಿಲ್ಲ. ನಾನು ಏನಂಥಾ ತಪ್ಪು ಮಾಡಿದ್ದೀನಿ, ಗೊತ್ತಾಗ್ತಿಲ್ಲ. ಸುದೀಪ್ ಬಿಟ್ಟರೆ ಯಾರೂ ನನ್ನ ಮೇಲೆ ಕರುಣೆ ತೋರುತ್ತಿಲ್ಲ ಯಾಕೆ...? ಶಿವಣ್ಣ, ಅಪ್ಪು, ಯಶ್, ದರ್ಶನ್ ಯಾಕೆ ನನಗೆ ಸಹಾಯ ಮಾಡಲು ಮುಂದೆ ಬರುತ್ತಿಲ್ಲ ಎಂದು ಕಣ್ಣೀರು ಸುರಿಸಿ ವಿಡಿಯೋ ಮಾಡಿ ನೆರವು ನೀಡಲು ಸಹಾಯ ಹಸ್ತ ಚಾಚಿದ ನಟಿ ವಿಜಯಲಕ್ಷ್ಮಿ ಗೆ ಇದೀಗ ಶಿವರಾಜ್’ಕುಮಾರ್ ಖಡಕ್ ಆಗಿ ಉತ್ತರ ನೀಡಿದ್ದಾರೆ. ಅವರ ಶಾಕಿಂಗ್ ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಚಾಮುಂಡಿ ಬೆಟ್ಟದಲ್ಲಿ ಕುಂಟನಿಗೂ ನಾನು 2 ಸಾವಿರ ರೂ. ಸಹಾಯ ಮಾಡಿದೆ. ಎಷ್ಟೋ ಹೆಣ್ಣುಮಕ್ಕಳು ಗಾರ್ಮೆಂಟ್ಸ್ ನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಅವರನ್ನು ನೋಡಿದಾಗ ಹೆಮ್ಮ ಅನ್ನಿಸುತ್ತೆ, ಕೈ ಮುಗಿಯಬೇಕು ಅನ್ನಿಸುತ್ತೆ ಎಂದು ಶಿವರಾಜ್‍ಕುಮಾರ್ ಹೇಳಿದ್ದಾರೆ. ಅನಿವಾರ್ಯವಾಗಿ ಬೇಡಿದವರಿಗೆ ಸಹಾಯ ಮಾಡಬೇಕಾಗುತ್ತದೆ. ಆದರೆ ಎಲ್ಲಾ ಇದ್ದು ಕೊಂಡು ಬೇಡುವುದು ಸರಿಯಲ್ಲ ಎಂದು ನಟಿ ವಿಜಯಲಕ್ಷ್ಮಿಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ನಟಿ ವಿಜಯಲಕ್ಷ್ಮಿ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು ಆ ಸಮಯದಲ್ಲಿ ಸುದೀಪ್ ಬಿಟ್ಟರೆ ಶಿವಣ್ಣನಿಗೆ, ಅಪ್ಪುಗೆ ನನ್ನ ಬಗ್ಗೆ ಕರುಣೆ ಇಲ್ಲ. ನಾನೇನು ಮಾಡಿದ್ದೀನಿ ಅಂತಾ ಗೊತ್ತಾಗ್ತಿಲ್ಲ ಎಂಬ ಹೇಳಿಕೆ ಶಿವಣ್ಣ ಉತ್ತರ ನೀಡಿದ್ದಾರೆ.
Comments