ರಾಕಿಂಗ್ ಸ್ಟಾರ್ ಯಶ್ ಮನೆಗೆ ಟೈಟ್ ಸೆಕ್ಯುರಿಟಿ...!!!
ನಟ ರಾಕಿಂಗ್ ಸ್ಟಾರ್ ಯಶ್ ಮನೆಗೆ ಬಿಗಿ ಪೊಲೀಸ್ ಭದ್ರೆತೆ ಒದಗಿಸಲಾಗಿದೆ. ಮೊನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ದರ್ಶನ್ ಮನೆಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಯಶ್ ಅವರ ಹೊಸ ಕೆರೆಹಳ್ಳಿಯಲ್ಲಿರುವ ನಿವಾಸದ ಮೇಲೆ ಭದ್ರತೆ ಒದಗಿಸಲಾಗಿದೆ. ಡಿಸಿಪಿ ಆದೇಶದ ಮೇರೆಗೆ ಈಗಾಗಲೇ ಯಶ್ ನಿವಾಸಕ್ಕೆ ಬಿಗಿ ಭದ್ರತೆಯಿಡಲಾಗಿದೆ.
ಮೂರು ದಿನಗಳ ಹಿಂದೆ ಬೆಳಗಿನ ಜಾವ 3 ಗಂಟೆಗೆ ದುಷ್ಕರ್ಮಿಗಳು ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಿದ್ದರು. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಮನೆಯಲ್ಲಿ ದರ್ಶನ್ ಇರಲಿಲ್ಲ. ಪತ್ನಿ ವಿಜಯಲಕ್ಷ್ಮಿ ಅವರ ಪ್ರೆಸ್ಟೀಜ್ ಅಪಾರ್ಟ್’ಮೆಂಟ್ ನಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ನಟಿ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ನಡೆಸಿದ್ದ ದರ್ಶನ್ ಮತ್ತು ಯಶ್ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ನಡುವೆ ದರ್ಶನ್ ಮತ್ತು ಯಶ್ ರನ್ನು ಜೆಡಿಎಸ್ ನ ಮುಖಂಡರು ವೈಯಕ್ತಿಕವಾಗಿ ನಿಂಧನೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಜಿಡಿಎಸ್ ನಾಯಕರ ವಿರುದ್ಧ ದೂರು ದಾಖಲಾಯ್ತು. ಮನೆಯಲ್ಲಿ ಸೆಕ್ಯುರಿಟಿ ಒಬ್ಬರೇ ಇದ್ದ ಕಾರಣ, ಸೆಕ್ಯುರಿಟಿ ಕೊಟ್ಟ ಹಿನ್ನಲೆಯಲ್ಲಿ ದೂರು ದಾಖಲಾಗಿದೆ. ಮುನ್ನೆಚ್ಚರಿಕೆಯಾಗಿ ಯಶ್ ಮನೆಗೂ ಟೈಟ್ ಸೆಕ್ಯುರಿಟಿ ನೀಡಲಾಗಿದೆ. ಬೊಪ್ಪ ಸಮುದ್ರದಲ್ಲಿ ಮಾತನಾಡಿದ ನಟಿ ಸುಮಲತಾ ಈ ಮಟ್ಟಿಗೆ ಕೆಳಗಿಳಿದು ರಾಜಕಾರಣ ಮಾಡ್ತಾರೆ. ನಿಜಕ್ಕೂ ಬೇಸರವಾಗ್ತಿದೆ. ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ದರ್ಶನ್ ಆಗಲೀ ಯಶ್ ಆಗಲೀ ಈ ಬೆದರಿಕೆಗಳಿಗೆ ಬಗ್ಗುವುದಿಲ್ಲ. ನನ್ನ ಬೆಂಬಲಕ್ಕೆ ನಿಂತಿರುವ ದರ್ಶನ್, ಮತ್ತು ಯಶ್ರನ್ನು ನೋಡಿ ಹೆದರಿಕೊಂಡಿದ್ದಾರೆ. ಅದಕ್ಕೆಲ್ಲಾ ಹೀಗೆ ಮಾಡ್ತಿದ್ದಾರೆ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.
Comments