ಶಾಕ್ ಆಗ್ತೀರಾ...! ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದವರಿಗೆ ಪ್ರತಿಯಾಗಿ ಈ ನಟಿ ಕೊಟ್ಟಿದ್ದೇನು ಗೊತ್ತಾ..?!!!
ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ, ಉಡುಗೊರೆ ಕೊಟ್ಟವರಿಗೆ ಪ್ರತಿಯಾಗಿ ಏನ್ ಸರ್ಪ್ರೈಸ್ ಕೊಟ್ಟಿದ್ದಾರೆ ಗೊತ್ತಾ,..? ತಮ್ಮ ಸ್ಟಾಫ್’ ಕಡೆಯಿಂದ ನಟಿ ಅಲಿಯಾ ಭಟ್’ಗೆ ಉಡುಗೊರೆಯೊಂದನ್ನು ನೀಡಲಾಗಿತ್ತು. ಅಂದಹಾಗೇ ನಟಿ ಅಲಿಯಾ ತಮ್ಮ ಜನ್ಮ ದಿನಕ್ಕೂ ಮೊದಲೇ ತಮ್ಮ ಡ್ರೈವರ್ ಸುನೀಲ್ ಮತ್ತು ಡೊಮೆಸ್ಟಿಕ್ ಹೆಲ್ಪ್ ಅನ್ಮೋಲ್ ಅವರಿಗೆ ತಲಾ 50 ಲಕ್ಷಗಳನ್ನು ನೀಡಿರುವುದು ತಿಳಿದು ಬಂದಿದೆ. ಆಲಿಯಾ ತಾವು ನೀಡಿರುವ ಹಣದಿಂದ ಅವರು ಮುಂಬೈನಲ್ಲಿ ಮನೆಯನ್ನು ಖರೀದಿಸಬೇಕು ಎಂದು ಬಯಸಿದ್ದಾರೆ.
ಮೂಲಗಳ ಪ್ರಕಾರ ಸುನಿಲ್ ಮತ್ತು ಅನ್ಮೋಲ್ ಇಬ್ಬರೂ ಈಗಾಗಲೇ ಜುಹುಗಳಲ್ಲಿ ಮತ್ತು ಖರ್ ದಂಡಾದಲ್ಲಿ ಮನೆಗಳನ್ನು ಬುಕ್ ಮಾಡಿರುವುದಾಗಿ ತಿಳಿದು ಬಂದದೆ. ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ತಮ್ಮ ಬಾಲಿವುಡ್ ಪ್ರವೇಶದಿಂದಲೂ ಜೊತೆಗಿರುವ ಇಬ್ಬರನ್ನೂ ಆಲಿಯಾ ತುಂಬಾ ಇಷ್ಟಪಡುವುದು ಕಂಡು ಬರುತ್ತಿದೆ. ತಮ್ಮ ಸ್ಟಾಫ್ ಗೆ ಮನೆಯನ್ನು ಕೊಂಡುಕೊಳ್ಳಲು ಹಣ ಕೊಡುವುದರೊಂದಿಗೆ ಅಲಿಯಾ ಸಹ ಜುಹುನಲ್ಲಿ ಅಪಾರ್ಟ್’ಮೆಂಟ್ ಒಂದನ್ನು ಖರೀದಿಸಿದ್ದು, ಅದರ ಬೆಲೆ ಸುಮಾರು 13 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ. ಅಲಿಯಾ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿರುವುದರಿಂದ ಈ ಮನೆಯನ್ನು ಆಫೀಸ್ ಜಾಗವಾಗಿ ಬಳಸುವುದಾಗಿ ಹೇಳಿದ್ದಾರೆ. ಆಲಿಯಾ ತಮ್ಮ ಬ್ಯಾನರ್‌ಗೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೇ ಅಲಿಯಾ ಥರಾ ಧಾರಾಳ ಯಾರಿದ್ದಾರೆಂದು ಆಕೆಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಬಿ ಟೌನ್ ನಲ್ಲಿ ಟ್ರೆಂಡಿಂಗ್ ನಾಯಕಿಯರ ಪೈಕಿ ಅಲಿಯಾ ಗೆ ಮೊದಲ ಸ್ಥಾನ.
Comments