ಹೋಳಿ ಹಬ್ಬದ ದಿನವೇ ಕಿಡಿಗೇಡಿಗಳಿಗೆ ನಟಿಯಿಂದ ಚಪ್ಪಲಿ ಸೇವೆ...?!!!

ಅಂದಹಾಗೇ ಹೋಳೀ ಹಬ್ಬದ ಸಂಭ್ರಮದಲ್ಲಿ ಇರಬೇಕಿದ್ದ ನಟಿಗೆ ಈ ವರ್ಷದ ಹೋಳಿ ಅಷ್ಟೇನು ಖುಷಿ ಕೊಡಲಿಲ್ಲ. ಮೊದಲೇ ಜೀವನದಲ್ಲಿ ಕಷ್ಟ ಅನುಭವಿಸಿದ ನಟಿ, ಹಬ್ಬದ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ. ಆ ದಿನ ನಡೆದ ಘಟನೆಯನ್ನು ಆಕೆ ಮರೆಯಲು ಸಾಧ್ಯವಾಗ್ತಿಲ್ಲವಂತೆ. ಟಿವಿ ಬೆಡಗಿ ಚಾಹತ್ ಖನ್ನಾಗೆ ಹೋಳಿ ಹಬ್ಬ ಕೆಟ್ಟ ಅನುಭವ ನೀಡಿದೆ. ಹೋಳಿ ದಿನ ನಡೆದ ಘಟನೆಯಿಂದಾದ ಬೇಸರವನ್ನು ನಟಿ ಹಂಚಿಕೊಂಡಿದ್ದಾರೆ.
ಅಂದು ರಸ್ತೆಯಲ್ಲಿ ಬರುತ್ತಿದ್ದ ನನ್ನ ಕಾರಿನ ಮೇಲೆ ಮದ್ಯವ್ಯಸನಿಗಳ ಗುಂಪೊಂದು ಅಟ್ಯಾಕ್ ಮಾಡಿತ್ತು. ಈ ಘಟನೆ ನಡೆದಿದ್ದು ಮುಂಬೈನ ಮಲ್ನಾಡ್’ನಲ್ಲಿ. ನಟಿ ಕಾರನ್ನು ಏಕಾಏಕಿ ಅಟ್ಟಗಟ್ಟಿದ ಕಿಡಿಗೇಡಿಗಳು ನನ್ನ ಕಾರಿನ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕಾರಿನ ಗ್ಲಾಸ್ ಪುಡಿ ಮಾಡಿದ್ದಾರೆ. 10-15 ಮದ್ಯ ವ್ಯಸನಿಗಳ ಗುಂಪು ಈ ದಾಳಿ ನಡೆಸಿದೆ. ಸುತ್ತಲೂ ಜನರಿದ್ರೂ ಯಾರೊಬ್ಬರೂ ನಟಿ ರಕ್ಷಣೆಗೆ ಬರಲಿಲ್ಲವಂತೆ. ಹಾಗಾಗಿ ನಟಿ ಪೊಲೀಸರಿಗೆ ಫೋನ್ ಮಾಡಿದ್ದಾಳೆ. ತನ್ನ ಕಾರು ಚಾಲಕನ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದ ಕಿಡಿಗೇಡಿಗಳನ್ನು ಮಟ್ಟ ಹಾಕಲು ಚಪ್ಪಲಿ ಏಟು ನೀಡಿದ್ದಾಳೆ. ಆದರೆ ಯಾಕೆ ನಟಿ ಕಾರನ್ನೇ ಟಾರ್ಗೆಟ್ ಮಾಡಿ,ದಾಳಿ ನಡೆಸಿದ್ದಾರೆಂಬುದು ಮಾತ್ರ ತಿಳಿದು ಬಂದಿಲ್ಲ.ಅನೇಕ ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ನಟಿ, ಬಾಲಿವುಡ್ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾಳೆ. ಆಕೆ ವೈಯಕ್ತಿಕ ಜೀವನ ಒಂದು ದುರಂತ ಕಥೆ. ಕೆಲ ದಿನಗಳ ಹಿಂದಷ್ಟೆ ನಟಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಾಳೆ. 2018 ರಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ಆಕೆಗೆ ಇಬ್ಬರು ಮಕ್ಕಳು ಇದ್ದು ಇವರ ಜೀವನ ದುರಂತ ಮಯದಿಂದ ಕೂಡಿತ್ತು ಎನ್ನಲಾಗಿತ್ತು.
Comments