ರಾಹುಲ್ ಗಾಂಧಿ ಕಣಕ್ಕಿಳಿಯುತ್ತಿರುವ ಕ್ಷೇತ್ರ ಯಾವುದು ಗೊತ್ತಾ..?!!!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕ ಸಭೆ ಚುನಾವಣೆಗೆ ಭರ್ಜರಿಯಾಗಿಯೇ ಸಿದ್ಧತೆ ನಡೆಸಿದ್ದಾರೆ. ಕೆಲ ಮೂಲಗಳ ಪ್ರಕಾರ ರಾಹುಲ್ ಗಾಂಧಿ ಕೇರಳದ ವೈನಾಡು ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲ್ಲಿದ್ದಾರೆಂಬ ಮಾಹಿತಿ ಇದೆ. ಕೇರಳದಿಂದ ಸ್ಪರ್ಧಿಸುವಂತೆ ಕೆಪಿಸಿಸಿ ವಿನಂತಿ ಮಾಡುತ್ತಿದೆ. ಒಂದು ವೇಳೆ ವಿನಂತಿಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಲಿದೆ ಎಂದು ಹೇಳಲಾಗುತ್ತಿದೆ.
ವೈನಾಡುಯಿಂದಲೇ ನೀವೆ ಸ್ಪರ್ಧೆ ಮಾಡಬೇಕು ಎಂದು ರಾಹುಲ್ ಅವರಲ್ಲಿ ಕೆಪಿಸಿಸಿ ಮನವಿ ಮಾಡಿದೆ ಎಂಬ ವಿಷಯವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ ಹೇಳಿದ್ದಾರೆ.ಈ ವಿಚಾರವಾಗಿ ರಾಹುಲ್ ಗಾಂಧಿಯೊಂದಿಗೆ ಮಾತನಾಡಿದ್ದಾಗಿದೆ. ಇದೀಗ ವೈನಾಡಿನಿಂದ ಚುನಾವಣಾ ಕಣಕ್ಕಿಳಿದಿರುವ ಟಿ. ಸಿದ್ದಿಖ್ ಅವರಿಗೆ ವಿಷಯಗಳನ್ನು ತಿಳಿಸಿದ್ದೇವೆ. ಈಗ ರಾಹುಲ್ ಅವರ ಪ್ರತಿಕ್ರಿಯೆ ಏನಾಗಲಿದೆ ಎಂಬುದನ್ನು ಕಾಯುತ್ತಿದ್ದೇವೆ. ಅಲ್ಲಿಂದ ಧನಾತ್ಮ ಪ್ರತಿಕ್ರಿಯೆಗಾಗಿ ನಾವೆಲ್ಲಾ ಕಾಯುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ರಾಹುಲ್ ಗಾಂಧಿಯವರು ಏನು ಹೇಳ್ತಾರೆ ಎಂಬುದು ಸಂಜೆಯೊಳೆಗ ಗೊತ್ತಾಗಲಿದೆ. ವೈನಾಡಿನಲ್ಲಿ ರಾಹುಲ್ ಸ್ಪರ್ಧಿಸಬೇಕೆಂದು ಒತ್ತಾಯಿಸಿ ಕೇರಳದ ಸಂಸದರಾದ ವಿ.ಟಿ. ಬಲರಾಮ್ ಮತ್ತು ಕೆ.ಎ ಶಾಜಿ ತಮ್ಮ ಫೇಸ್‌ಬುಕ್‍ನಲ್ಲಿ ಬರೆದುಕೊಂಡಿದ್ದರು.
Comments