ರಚಿತಾ, ರಶ್ಮಿಕಾರನ್ನು ಬಿಟ್ಟು ನಮ್ಮ ಚಂದನವನ ಆಳೋ ಭವಿಷ್ಯ ನಟಿಮಣಿಯರು ಇವರೇನಾ…?!!!
ಅಂದಹಾಗೇ ದಶಕಗಳ ಹಿಂದೆ ರಮ್ಯಾ, ರಾಧಿಕಾ, ರಕ್ಷಿತಾರದ್ದೇ ಕಾರುಬಾರು. ಸ್ಯಾಂಡಲ್’ವುಡ್ ಆಳುತ್ತಿದ್ದ ಈ ಮೂವರು ನಟಿಮಣಿಯರ ಪ್ಲೇಸ್ ಗೆ ಸದ್ಯ ರಚಿತಾ, ರಶ್ಮಿಕಾ ಬಂದಿದ್ದಾರೆ. ಇಂದಿನ ಟಾಪ್ ನಾಯಕಿಯರ ಪಟ್ಟಿಯಲ್ಲಿ ಇವರು ಹೆಸರು ಇದೆ. ಇವರಾದ ನಂತರ ನಮ್ಮ ಚಂದನವನ ಆಳೋ ನಾಯಕಿಯರು ಯಾರಂತಾ ನಿಮಗೆ ಗೊತ್ತಿದ್ಯಾ.. ನಾವ್ ಹೇಳ್ತೀವಿ ಕೇಳಿ.ಸಾಕಷ್ಟು ನಾಯಕಿರು ಬರ್ತಾಯಿರ್ತಾರೆ, ಹೋಗ್ತಾ ಇರ್ತಾರೆ. ಅವರಾದ ನಂತರ ಇವರು, ಇವರಾದ ನಂತರ ಮತ್ತೊಬ್ಬರು. ಬಣ್ಣದ ಲೋಕವೇ ಅಂತದ್ದು ಯಾವಾಗ ಯಾರನ್ನ ಕೈ ಹಿಡಿಯುತ್ತೋ ಗೊತ್ತಿಲ್ಲ. ಆದರೆ ಸದ್ಯಕ್ಕೆ ಮಾತ್ರ ಚಂದನವನಕ್ಕೆ ನವ ನಟಿಯರು ಎಂಟ್ರಿ ಕೊಡುತ್ತಿದ್ದಾರೆ.
ಸದ್ಯ ಭವಿಷ್ಯದಲ್ಲಿ ಸಿಲ್ವರ್ ಸ್ಕ್ರೀನ್’ನಲ್ಲಿ ಈ ಸ್ಟಾರ್ ನಾಯಕಿಯರ ಮಕ್ಕಳು ಕಾಣಿಸಿಕೊಳ್ಳುತ್ತಾರೆ ಎಂಬ ಅಂದಾಜಿನಲ್ಲಿದೆ ಗಾಂಧಿ ನಗರ. ರಿಯಲ್ ಸ್ಟಾರ್ ಉಪೇಂದ್ರ ಮಗಳು ಬಾಲ ನಟಿಯಾಗಿ ಅಮ್ಮನ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಚೊಚ್ಚಲ ಸಿನಿಮಾದಲ್ಲೇ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ಉಪ್ಪಿ ಪುತ್ರಿ, ಬಹಳ ಚೆನ್ನಾಗಿಯೇ ಮಿಡಿಯಾ, ಕ್ಯಾಮೆರಾ ಫೇಸ್ ಮಾಡ್ತಾಳೆ. ಮುಂದಿನ ಸಿನಿಮಾಗಳಲ್ಲಿ ನಾಯಕಿಯಾಗುವ ಕನಸು ಕಂಡಿರುವ ಉಪ್ಪಿ ಮಗಳು ಐಶ್ವರ್ಯ, ನೆಕ್ಸ್ಟ್ ಜನರೇಷನ್'ನ ನಾಯಕಿಯಾಗೋದ್ರಲ್ಲಿ ಡೌಟೇ ಇಲ್ಲ. ಪ್ರಿಯಾಂಕ ಪುತ್ರಿಯಷ್ಟೇ ಅಲ್ಲಾ...…ಒಂದಷ್ಟು ಸ್ಟಾರ್ ನಟಿಯರ ಮಗಳು ಕೂಡ ಬಣ್ಣ ಹಚ್ಚೋಕೆ ಭರ್ಜರಿಯಾಗಿಯೇ ಫೋಟೋ ಶೂಟ್ ಮಾಡಿಸಿದ್ದಾರೆ. ಈಗಾಗಲೇ ಅಮ್ಮನಿಂದ ಒಂದಷ್ಟು ಕಲೆಯನ್ನು ಪಡೆದುಕೊಂಡಿರುವ ಆ ಕ್ಯೂಟ್ ಗರ್ಲ್ಸ್ ಯಾರ್ಯಾರು ಗೊತ್ತಾ..?
ದೇವಕಿ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಎಂಟ್ರಿಯಾಗ್ತಾಯಿರುವ ಉಪ್ಪಿ ಮಗಳ ಜೊತೆ ಶೃತಿ, ಮಾಲಾಶ್ರೀ ಸುಧಾರಾಣಿಯ ಪುತ್ರಿಯರು ತಮ್ಮ ತಮ್ಮ ಸಿನಿಮಾಗಳಲ್ಲಿ ಬೆಳ್ಳಿ ಪರದೆ ಮೇಲೆ ಕಾಲಿಡಲು ಕೂಡ ಬರ್ಒಂತಾ ಇದ್ದಾರೆ. ಒಂದು ಕಾಲದಲ್ಲಿ ಶಿವಣ್ಣನಿಗೆ ಬೆಸ್ಟ್’ಪೇರ್ ಆಗಿದ್ದ ನಟಿ ಸುಧಾರಾಣಿ, ಮಗಳು ನಿಧಿ ಕೂಡ ಭವಿಷ್ಯ ತಾರೆಯಾಗುವಲ್ಲಿದ್ದಾರಂತೆ. ಅಂದಹಾಗೇ ನಿಧಿಯನ್ನು ಮೊದಲ ಬಾರಿಗೆ ಪರಿಚಯಿಸ್ತಾಯಿದ್ದಾರಂತೆ ಜೋಗಿ ಪ್ರೇಮ್.
ರಕ್ಷಿತಾರ ಸಹೋದರ ಅಭಿಷೇಕ್’ನ ಫಸ್ಟ್ ಸಿನಿಮಾ ಮಾಡ್ತಾಯಿರುವ ಪ್ರೇಮ್, ಅಭಿಷೇಕ್'ಗೆ ನಾಯಕಿಯಾಗಿ ನಿಧಿಯನ್ನು ತೆರೆಗೆ ತರ್ತಾಯಿದ್ದಾರಂತೆ. ಹಿರಿಯ ನಟಿ ಶೃತಿ ಮಗಳು ಕೂಡ ಸಿನಿಮಾ ರಂಗಕ್ಕೆ ಎಂಟ್ರಿಯಾಗಲಿದ್ದಾರೆ. ಅಮ್ಮನಿಂದ ಕಲೆಯನ್ನು ಬಳುವಳಿ ಪಡೆದಿರುವ ಗೌರಿ, ಸಿಂಗರ್ ಕೂಡ ಹೌದಂತೆ. ಆಕೆ ಯಾವ ಫೀಲ್ಡ್ನ'ಲ್ಲಿ ಗುರುತಿಸಿಕೊಳ್ತಾಳೆ ಎಂಬುದು ಮಾತ್ರ ಗೊತ್ತಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ ಗೌರಿ ಹಾಡಿದ ಹಾಡಿಗೆ ಅಭಿಮಾನಿಗಳಿಂದ ಭಾರೀ ಪ್ರಶಂಸೆ ಬಂದಿದ್ದವು. ಇನ್ನು ನಟಿ ಮಾಲಾಶ್ರೀ ಅವರ ಮಗಳು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಮಾಲಾಶ್ರೀ ಮಗಳು ಅನನ್ಯ ಕೂಡ ಅಮ್ಮನಂತೆ ಒಂದಷ್ಟು ದಶಕಗಳ ಚಿತ್ರರಂಗವನ್ನು ಆಳಿ ಕನಸಿನ ರಾಣಿಯಾಗಿ ಮೆರೆಯಲು ಸಿದ್ಧರಾಗಿದ್ದಾರಂತೆ.
ಆದರೆ ಈ ಬಗ್ಗೆ ಮಾಲಾಶ್ರೀ ಎಲ್ಲಿಯೂ ಮಗಳ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಒಂದಷ್ಟು ಗಾಂಧಿ ನಗರದ ಮಂದಿ ಮಾಲಾಶ್ರೀ ಮಗಳ ಲುಕ್ ರಗಡ್ ಆಗಿದೆ, ಭವಿಷ್ಯ ಸಿನಿಮಾಗಳಲ್ಲಿ ಅಮ್ಮನಂತೆ ಕಾಣಿಸಿಕೊಳ್ಳೋದ್ರಲ್ಲೀ ನೋ ಡೌಟ್ ಅಂತಿದ್ದಾರೆ.
Comments