ದರ್ಶನ್ ದಾರಿಯನ್ನೇ ಕಾಯುತ್ತಿರುವ ಕಿರುತೆರೆಯ ಕಲಾವಿದನನ್ನು ಭೇಟಿ ಮಾಡಿದ ಬಿಗ್ಬಾಸ್ ಸ್ಪರ್ಧಿ...!
ಅಂದಹಾಗೇ ದರ್ಶನ್ ಅಂದ್ರೆ ಪ್ರೀತಿ, ಅವರು ಖಂಡಿತಾ ನನಗೆ ಸಹಾಯ ಮಾಡುತ್ತಾರೆ ಎಂದು ಕಾಯುತ್ತಾ ಕುಳಿತಿದ್ದ ಕಲಾವಿದರೊಬ್ಬರನ್ನು ಬಿಗ್ ಬಾಸ್ ಸ್ಪರ್ಧಿಯೊಬ್ಬರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಕೈಯಲ್ಲಿ ಕಾಸಿಲ್ಲದೇ ಚಿಕಿತ್ಸೆಗೆ ಹಣ ಕೂಡಿಸುವುದು ಕಷ್ಟವಾಗಿದೆ, ಪರಿಸ್ಥಿತಿ ತೀರಾ ಹದಗೆಟ್ಟಿದೆ. ಏನು ಮಾಡುವುದೋ ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದ ನಟ ಅನಿಲ್ ಕುಮಾರ್ ಅವರನ್ನು ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ರಂಗಭೂಮಿ ಮತ್ತು ಕಿರುತೆರೆಯ ಕಲಾವಿದನಾಗಿ ಹೆಚ್ಚು ಗುರುತಿಸಿಕೊಂಡಿದ್ದ ಅನಿಲ್ ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದು ಸದ್ಯ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಾಕಷ್ಟು ಯಶಸ್ವಿ ನಟರ ಜೊತೆ ಅಭಿನಯಿಸಿ ಒಳ್ಳೊಳ್ಳೆ ಸಿನಿಮಾಗಳನ್ನು ಕೊಟ್ಟ ಕೀರ್ತಿ ಸಹ ಕಲಾವಿದರಿಗೂ ಸಲ್ಲುತ್ತದೆ. ಅದರಲ್ಲಿ ನಟ ಅನಿಲ್ ಕುಮಾರ್ ಕೂಡ ಒಬ್ಬರು. ಧಾರವಾಹಿಗಳಲ್ಲಿ, ಸಿನಿಮಾ, ರಂಗಭೂಮಿಗಳಲ್ಲಿ ಸಾಕಷ್ಟು ಖ್ಯಾತ ನಟರ ಜೊತೆ ಅಭಿನಯಿಸಿದ ಅನಿಲ್ ಸದ್ಯ ಜೀವನ ಮಾಡೋಕೆ ತೀರಾ ಕಷ್ಟವಾಗಿದ್ಯಂತೆ. ನಾನು ದರ್ಶನ್ ನಿನಾಸಂ ನಲ್ಲಿ ಒಟ್ಟಿಗೆ ಬಣ್ಣ ಹಚ್ಚಿದ್ವಿ ಎಂದು ನೆನಪಿಸಕೊಳ್ಳುತ್ತಾ…ಅವರು ಖಂಡಿತಾ ನನ್ನನ್ನು ನೋಡಲು ಬರುತ್ತಾರೆಂದು ಹೇಳಿಕೊಂಡಿದ್ದರು.
ಸದ್ಯ ಬಿಗ್ಬಾಸ್ ಸ್ಪರ್ಧಿಯಾಗಿದ್ದ ಅಕ್ಷತಾ ಪಾಂಡವಪುರ ಮತ್ತು ಅನಿಲ್ ಇಬ್ಬರು ರಾಜ್ಯ ಪ್ರಶಸ್ತಿ ವಿಜೇತ ಚಿತ್ರ ‘ಪಲ್ಲಟ’ ದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಅನಿಲ್ ಅವರನ್ನು ಭೇಟಿಯಾದ ಬಳಿಕ ಅಕ್ಷತಾ, ನಟರಾದ ಅನಿಲ್ ಅವರನ್ನು ಅನಿಲ್ ಅಣ್ಣಾ ಎಂದೇ ಕರೆಯುತ್ತಿದ್ದೆವು. ಫೋನ್ ಮಾಡಿದಾಗಲೆಲ್ಲಾ ಪ್ರೀತಿಯಿಂದಲೇ, ಖುಷಿಯಿಂದಲೇ ಮಾತನಾಡಿಸುತ್ತಿದ್ದರು. ಈಗ ಅವರ ಸ್ಥಿತಿ ನೋಡಿ ಬೇಸರವಾಗ್ತಿದೆ ಎಂದರು.ಬಳಿಕ ಮಾತನಾಡಿದ ಅಕ್ಷತಾ ಪಾಂಡವಪುರ, ಅನಿಲ್ ಕುಮಾರ್ ಅವರ ಆರೋಗ್ಯ ಹದಗೆಟ್ಟಿದೆ. ನಾವೆಲ್ಲರೂ ಪ್ರೀತಿಯಿಂದ ಅನಿಲ್ ಅಣ್ಣಾ ಅಂತಾ ಕರೆಯುತ್ತಿದ್ವಿ. ಪ್ರತಿ ಬಾರಿ ಫೋನ್ ಮಾಡಿದಾಗಲೂ ತುಂಬಾ ಖುಷಿಯಿಂದ ಮಾತನಾಡಿಸುತ್ತಿದ್ದರು. ಇಂದು ಅವರ ಪರಿಸ್ಥಿತಿ ನೋಡಿ ತುಂಬಾ ಬೇಸರ ಆಗಿದೆ ಅಂತಾ ಹೇಳಿದರು.
Comments