‘ನನ್ನ ಅಮ್ಮ ಸಾಯಲು ನಾನೇ ಕಾರಣವಾಗಿಬಿಟ್ಟೆ’ : ಖ್ಯಾತ ನಟ..!!!

ನಟ ಜಾಕಿ ಶ್ರಾಫ್ ಬಗ್ಗೆ ನೀವು ಕೇಳಿರ ಬೇಕಲ್ಲವೇ… ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಜಾಕಿ ಶ್ರಾಫ್ ತಮ್ಮ ಅಂತರಾಳದ ನೋವನ್ನು ತೋಡಿಕೊಂಡಿದ್ದಾರೆ. ನಟ ಜಾಕಿಶ್ರಾಫ್ ತನ್ನ ಅಮ್ಮನನ್ನು ಕಳೆದುಕೊಂಡಿದ್ದು ಹೇಗೆ ಎಂಬುದನ್ನು ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಖ್ಯಾತ ಖಳ ನಟ ಜಾಕಿಶ್ರಾಫ್’ಗೆ ಆಗ 8-9 ವಯಸ್ಸಂತೆ ಆಗ ಅಣ್ಣ-ಅಮ್ಮ, ನಾನು- ಅಪ್ಪ ಎಲ್ಲರು ಒಟ್ಟಿಗೆ ಮಲಗುತ್ತಿದ್ದೆವು. ಒಂದೇ ಕೋಣೆಯಲ್ಲಿಯೇ ನಾವು ನಾಲ್ಕು ಮಂದಿ ಮಲಗುತ್ತಿದ್ದೆವು. ನಮ್ಮದು ಚಿಕ್ಕ ಮನೆ, ನನಗೆ ಏನಾದರೂ ಕೆಮ್ಮು ಬಂದ್ರೆ ಮಧ್ಯ ರಾತ್ರಿಯಲ್ಲಿಯೇ ನನ್ನ ಅಮ್ಮ ಎದ್ದು ಏನಾಯ್ತು ಅಂತಾ ಕೇಳ್ತಿದ್ರು. ಸ್ವಲ್ಪ ನಿದ್ದೆ ಬರಲಿಲ್ಲವೆಂದು ಒದ್ದಾಡಿದ್ರು ಬಂದು ನನ್ನ ಬಳಿಯೇ ಮಲಗ್ತಾ ಇದ್ರು.
ಅಮ್ಮನಿಗೆ ಏನಾದರೂ ಆದರೆ ಅಪ್ಪ-ಅಣ್ಣ ತಕ್ಷಣ ಎದ್ದು ನೋಡ್ತಿದ್ರು, ಏನಾಯ್ತು ಅಂತಾ ಕೇಳ್ತಿದ್ರು. ಆಗೆಲ್ಲಾ ನಾವುಗಳು ತುಂಬಾ ಖುಷಿಯಾಗಿ ಇರ್ತಾಯಿದ್ವಿ ಎನ್ನುತ್ತಾರೆ ಶ್ರಾಫ್. ಆದರೆ ಸ್ವಲ್ಪ ಹಣ ನನ್ನ ಕೈಗೆ ಸಿಕ್ಕತು. ಶ್ರೀಮಂತನಾದೆ. ದೊಡ್ಡ ಬಂಗಲೆ ತೆಗೆದುಕೊಂಡೆ. ಅಮ್ಮನಿಗಾಗಿ ಸೆಪರೇಟ್ ಕೋಣೆ ಮಾಡಿಸಿದ್ದೆ. ಆಕೆಗೆ ಎಲ್ಲವೂ ಅಲ್ಲಿಯೇ ಸಿಗುವಂತೆ ಮಾಡಿಕೊಟ್ಟೆ. ನಾನು ಅಮ್ಮನಿಂದ ಬೇರೆ ಕೋಣೆಯಲ್ಲಿರಲು ಬಯಸಿದ್ದೆ. ನನಗೆ ಖುಷಿಯಾಯ್ತು. ಆದರೆ ನಮ್ಮ ಮಧ್ಯೆ ಗೋಡೆ ಅಡ್ಡ ಬಂತು. ಒಂದು ದಿನ ಅಮ್ಮನಿಗೆ ಹಾರ್ಟ್ಅಟ್ಯಾಕ್ ಆಗಿ ಸತ್ತು ಹೋದರು. ನನ್ನ ಶ್ರೀಮಂತಿಕೆಯಿಂದ ಗೋಡೆ ಬಂತು, ಆದ್ರೆ ಸಂಬಂಧ ಹೋಯ್ತು. ಗೋಡೆಯೊಂದಿಲ್ಲದಿದ್ದರೆ ನಾನು ನನ್ನ ಅಮ್ಮನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೆ. ಬಹುಶಃ ಅವರನ್ನು ಉಳಿಸಿಕೊಳ್ಳಬಹುದಿತ್ತು” ಅಂತ ಜಾಕಿ ಶ್ರಾಫ್ ನೆನೆಸಿಕೊಳ್ತಾರೆ.ಜಾಕಿಶ್ರಾಫ್ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ. ನನ್ನ ತಾಯಿ ನನ್ನಿಂದಲೇ ತೀರಿಕೊಂಡರು ಎಂಬ ನೋವಿದೆ ನನಗೆ ಎನ್ನುವ ಶ್ರಾಫ್ ಮಾತು ಕೇಳಿ ಅಭಿಮಾನಿಗಳು ಮರುಗಿದ್ದಾರೆ.
Comments