ಹಸೆಮಣೆ ಏರಲು ಸಜ್ಜಾದ್ರು ಈ ಖ್ಯಾತ ನಟಿ...!

ಅಂದಹಾಗೇ ಬಿ ಟೌನ್’ನಲ್ಲಿ ಅತೀ ಚಿಕ್ಕ ವಯಸ್ಸಿಗೆಯೇ ಹೆಸರು ಮಾಡಿರುವ ನಟಿಯೊಬ್ಬರಿಗೆ ಮದುವೆ ಫಿಕ್ಸ್ ಆಗಿದೆ. ಸಾಲು ಸಾಲು ಮದುವೆಗಳು ಚಿತ್ರರಂಗದಲ್ಲಿ ಜರುಗುತ್ತಿವೆ. ಈಗಾಗಲೇ ಡಿಪ್ಪಿ-ರಣವೀರ್. ಪಿಗ್ಗಿ-ನಿಕ್ ಅಂತೆಯೇ ಇದೀಗ ಮತ್ತೊಬ್ಬ ಸ್ಟಾರ್ ನಟಿ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಬಾಲಿವುಡ್ನ ಮೋಸ್ಟ್ ಬ್ಯೂಟಿಫುಲ್, ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ಮದುವೆಯಾಗಲು ಸಿದ್ಧವಾಗಿದ್ದಾರೆ.
ತಮ್ಮ ಬಹುದಿನಗಳ ಗೆಳೆಯ, ಸೆಲೆಬ್ರಿಟಿಗಳ ಫೋಟೋಗ್ರಾಫರ್ ರೋಹನ್ ಶ್ರೇಷ್ಠ್ ಜೊತೆ ಮುಂದಿನ ವರ್ಷ ಅಥವಾ ಈ ವರ್ಷದ ಅಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬ ವರದಿಯನ್ನು ಮಾಧ್ಯಮಗಳು ಬಿತ್ತರಿಸಿವೆ. ಇದೂವರೆಗೂ ಶ್ರದ್ಧಾ ಕಪೂರ್ ಅಥವಾ ರೋಹನ್ ಈ ಬಗ್ಗೆ ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ. 2018ರಿಂದಲೂ ಶ್ರದ್ಧಾ ಮತ್ತು ರೋಹನ್ ಡೇಟಿಂಗ್ ನಲ್ಲಿದ್ದಾರೆ. ಅಂದಹಾಗೇ ಮದುವೆಗೆ ಒಪ್ಪಿಕೊಂಡಿರುವ ಶ್ರದ್ಧಾ ಕಪೂರ್ ಫುಲ್ಖು ಷಿ ಮೂಡ್ ನಲ್ಲಿದ್ದಾರೆ.
ಕೈಯಲ್ಲಿ ಸಿನಿಮಾ ಪ್ರಾಜೆಕ್ಟ್’ಗಳಿವೆ. ಮುಗಿದ ನಂತರ ನಾನು ಬ್ರೇಕ್ ತೆಗೆದುಕೊಂಡು ನಾನು ಹಸೆಮಣೆ ಏರಲು ಸಜ್ಜಾಗ್ತೀನಿ ಎಂದಿದ್ದಾರೆ. ಮದುವೆಗೆ ಪ್ರಿಪೇರ್ ಆಗಲು ಪ್ಲ್ಯಾನ್ ಮಾಡಿಕೊಳ್ತೀನಿ ಎಂದಿದ್ದಾರೆ.ಟಾಲಿವುಡ್ನ ಬಿಗ್ ಬಜೆಟ್ ಸಿನಿಮಾ ಸಾಹೋ ಸಿದಲ್ಲಿ ಆ್ಯಕ್ಟ್ ಮಾಡಲು ಇದೀಗ ರೆಡಿಯಾಗಿದ್ದಾರೆ ಶ್ರದ್ಧಾ ಕಪೂರ್. ಈಗಾಗಲೇ ಕೆಲ ಸ್ಟಾರ್ ಹೀರೋಗಳ ಮದುವೆ ಮಾತುಕತೆ ನಡೆಯುತ್ತಿದೆ. ಅದರೊಟ್ಟಿಗೆ ಈ ಜೋಡಿ ಕೂಡ ಸೇರಿಕೊಳ್ಳುತ್ತಿದೆ.
Comments