ಪ್ರೀತಿಸಿ ಮದುವೆಯಾದ ಮೇಲೆ ''ನನ್ನಷ್ಟು ಖರಾಬ್ ಹೆಂಡ್ತಿ ನಿಕ್''ಗೆ ಸಿಗಬಾರದಿತ್ತೆಂದ'' ನಟಿ ....?!!
ಪ್ರೀತಿಸಿ ಮದುವೆಯಾಗಿದ್ದೀನಿ. ನಾನು ನಿಕ್ ಒಬ್ಬರಿಗೊಬ್ಬರು ಪರಸ್ಪರ ಲವ್ ಮಾಡಿಯೇ ಮದುವೆ ಮಾಡಿಕೊಂಡಿದ್ದೀವಿ ಎಂದು ಮಾಧ್ಯಮದವರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸುವ ಪಿಗ್ಗಿ ಈ ಮಾತು ಹೇಳಿದ್ದರು. ಹಾಲಿವುಡ್ ಸಿಂಗರ್ ನಿಕ್ ಜೊತೆ ದೇಶಿ ಗರ್ಲ್ ಖ್ಯಾತಿಯ ಪ್ರಿಯಾಂಕ ಚೋಪ್ರಾ ವಿವಾಹ ವಾದ ಮೇಲೆ ದಿನನಿತ್ಯವೂ ಸುದ್ದಿಯ್ಲಲಿರುತ್ತಾರೆ. ಇಬ್ಬರನ್ನು ನೋಡಿ ಬಿ ಟೌನ್ ಕ್ಯೂಟ್ ಕಪಲ್ ಎಂದು ಹಾಡಿ ಹೊಗಳಿದ್ದಾರೆ. ಮದುವೆಯಾಗಿ ತಿಳಗಳುಗಳೇ ಕಳೆದಿವೆ, ಅಂದಹಾಗೇ ಇದೀಗ ಪಿಗ್ಗಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ನಾನು ನಿಕ್ ಒಳ್ಳೆಯ ಹೆಂಡತಿಯಲ್ಲ. ನನ್ನಷ್ಟು ಖರಾಬ್ ಹೆಂಡತಿ ಮತ್ತೊಬ್ಬರಿಲ್ಲ ಎಂದಿದ್ದಾರೆ ಪಿಗ್ಗಿ. ಪಾಪ ನಿಕ್ ಎಂದಿದ್ದಾರೆ.ನಟಿ ಪ್ರಿಯಾಂಕ ಚೋಪ್ರಾ ಕಂಡರೆ ನಿಕ್ ಗೆ ಇಷ್ಟವಾಗ್ತಿಲ್ವಾ ಅದಕ್ಕಾಗಿಯೇ ಈ ಮಾತು ಹೇಳ್ತಿದ್ದಾರೆ ಎಂದು ಕನ್ಫೂಸ್ ಆಗಬೇಡಿ. ಯಾಕಂದ್ರೆ ಅವರು ಹೇಳಿದ್ದು ನಿಜ. ಆದರೆ ‘ನನಗೆ ಅಡುಗೆ ಮಾಡಲು ಗೊತ್ತಿಲ್ಲ. ಗೊತ್ತಿರುವುದು ಎಗ್ ಮತ್ತು ಟೋಸ್ಟ್ ಮಾಡಲು ಮಾತ್ರ. ಈ ಬಗ್ಗೆ ಪತಿ ಜೊನಾಸ್ ಗೆ ಮೊದಲೇ ಹೇಳಿದ್ದೆ. ಅದಕ್ಕೆ ಆತ ಪರವಾಗಿಲ್ಲ ನಂಗೂ ಬರಲ್ಲ ಎಂದಿದ್ದ. ನನ್ನ ಅದೃಷ್ಟ ನಂಗೆ ಇಂಥಾ ಗಂಡ ಸಿಕ್ಕಿರುವುದು. ಇಷ್ಟು ಈಸಿಯಾಗಿ ತೆಗೆದುಕೊಳ್ಳುವ ಗಂಡ ಎಲ್ಲರಿಗೂ ಸಿಗಲ್ಲ’ ಎಂದು ಪ್ರಿಯಾಂಕಾ ತಮ್ಮ ಪತಿಯ ಬಗ್ಗೆ ಹೊಗಳಿಕೊಂಡಿದ್ದಾರೆ.
Comments