ಒಂದು ಕಾಲದಲ್ಲಿ ಚಿತ್ರರಂಗವನ್ನೇ ಆಳಿದ 'ರಂಗ ನಾಯಕಿ' ಈಗ ಏನ್ ಮಾಡ್ತಿದ್ದಾರೆ ಗೊತ್ತಾ..?!!!
ಒಂದಾನೊಂದು ಕಾಲದಲ್ಲಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ್ದ, ಕನ್ನಡ ಚಿತ್ರರಂಗವನ್ನು ಆಳಿದ ನಟಿ ಆರತಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಟಿ ಆರತಿ ಅವರು ಕರ್ಪೂರದ ಗೊಂಬೆ ಮೂಲಕ ಕೋಟ್ಯಾಂತರ ಕನ್ನಡಾಭಿಮಾನಿಗಳ ಮನಗೆದ್ದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜೊತೆ ಬ್ರೇಕ್ ಅಪ್ ಬಳಿಕ ಚಂದ್ರಶೇಖರೊಟ್ಟಿಗೆ ಮದುವೆಯಾದರು. ಮದುವೆಯಾದ ನಂತರ ಆಕೆ ಅಮೇರಿಕಾಕ್ಕೆ ಹೋದರು. ಆರತಿಗೆ ಒಬ್ಬ ಮಗಳಿದ್ದಾಳೆ. ಮಗಳಿಗಾಗಿ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಆರತಿ ಸಂಪಾದಿಸಿದ ಹಣವನ್ನೆಲ್ಲಾ ಏನು ಮಾಡಿದ್ದಾರೆ ಗೊತ್ತಾ…?!!
ಆದರೆ ಆಕೆ ಈಗ ಏನು ಮಾಡುತ್ತಿದ್ದಾರೆ. ಯಾವ ಮಾಧ್ಯಮಕ್ಕೂ ಸಿಗದ ಅವರು ರಹಸ್ಯವಾಗಿಯೇ ಕೆಲ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಆರತಿ ಸದ್ಯ ಏನ್ ಮಾಡ್ತಿದ್ದಾರೆ ಗೊತ್ತಾ..?ಸಂಪಾದಿಸಿದ ಹಣವನ್ನೆಲ್ಲಾ ಅವರು ಸಮಾಜ ಸೇವೆಗೆ ಖರ್ಚು ಮಾಡುತ್ತಿದ್ದಾರೆ. ಅಮೇರಿಕಾದಲ್ಲಿಯೇ ಇದ್ದುಕೊಂಡೇ ಬಡ ಮಕ್ಕಳಿಗೆ, ಶಾಲೆಗೆ ಖರ್ಚು ಮಾಡುತ್ತಿದ್ದಾರೆ.
ಆರತಿಗೆ ಪತಿ ಚಂದ್ರಶೇಖರ್ ಕೂಡ ಸಹಾಯ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿರುವ ತಮ್ಮ ಬಂಗಲೆಯನ್ನು 18 ಕೋಟಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಾಮಾಜಿಕ ಕೆಲಸಗಳಿಗೆ ಉಪಯೋಗಿಸಿದ್ದಾರೆ. ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದುಕೊಂಡು ಅವರಿಗೆ ಮಹಿಳಾ ಶಿಕ್ಷಣ, ಶೌಚಾಲಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. 40ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಖರ್ಚು ವೆಚ್ಚವನ್ನೆಲ್ಲಾ ನೋಡಿಕೊಳ್ಳುತ್ತಿದ್ದಾರೆ ಈ ಮಹಾ ಕಾರ್ಯ ಎಲ್ಲಿಯೂ ಬಯಲಾಗಿಲ್ಲ. ಯಾವ ಸಂದರ್ಶನದಲ್ಲೂ ಕಾಣಿಸಿಕೊಳ್ಳದ ನಾಯಕಿಯ ಜೀವನ ಸದ್ಯ ಚೆನ್ನಾಗಿದ್ದರೂ, ಅವರು ಅಭಿನಯವನ್ನು ಮರೆತಿಲ್ಲ. ಮಗಳಿಗಾಗಿ ಚಿತ್ರರಂಗವನ್ನೇ ತ್ಯಜಿಸಿದ್ದಾರೆ. ಆದರೂ ನಮ್ಮ ದೇಶ, ಭಾಷೆ, ಜನ ವನ್ನು ಮರೆತಿಲ್ಲ ಈ ಕನ್ನಡದ ಖ್ಯಾತ ನಟಿ.
Comments