ಬಾರದ ಲೋಕಕ್ಕೆ ಪಯಣ ಬೆಳೆಸಿದ ಖ್ಯಾತ ನಟಿ...!!!

ಫಣಿಯಮ್ಮ ಸಿನಿಮಾ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟಿ ಶಾರದ ರಾವ್ ಇಂದು ಇಹಲೋಕ ತ್ಯಜಿಸಿದ್ದಾರೆ. ಫಣಿಯಮ್ಮ ಚಿತ್ರದ ಅಮೋಘ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದ ಶಾರದಾ ರಾವ್ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಬೆಂಗಳೂರಿನ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಮುಂಜಾನೆ 7.30 ಸುಮಾರಿಗೆ ಸಾವನಪ್ಪಿದ್ದಾರೆ.
ಫಣಿಯಮ್ಮ ಸಿನಿಮಾದಲ್ಲಿ ವಿಧವೆ ಪಾತ್ರ ನಿರ್ವಹಿಸಿದ್ದ ಇವರು, ವಿಧವೆ ಕುರಿತು ಹಾಗೂ ಭೈರಪ್ಪ ನವರ ವಂಶವೃಕ್ಷ ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರದಲ್ಲಿ ವೈದವ್ಯವನ್ನು ಒಪ್ಪಿಕೊಂಡು ಹೊಸ ಸಾಧ್ಯತೆಗಳತ್ತ ಚಿಂತನೆ ನಡೆಸುವ ಕಾಥ್ಯಾಯಿನಿಯಾಗಿ ಅಭಿನಯಿಸಿದ್ದ ರೀತಿ ಅಭಿಮಾನಿಗಳನ್ನು ಮೋಡಿ ಮಾಡಿತು.ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಾದ 'ಫಣಿಯಮ್ಮ' (1983) ಮತ್ತು 'ವಂಶವೃಕ್ಷ' (1971), ಆದಿ ಶಂಕರಾಚಾರ್ಯ (1983) ಚಿತ್ರಗಳಲ್ಲಿ ನಟಿಸಿದ ಶಾರದ ರಾವ್ ಅವರು ಕಥೆಯನ್ನು ಕೇಳಿ ಪಾತ್ರ ಮಾಡಲು ಒಪ್ಪಿಕೊಳ್ಳುತ್ತಿದ್ದರು.ಸಮಾಜದಲ್ಲಿ ಹೆಣ್ಣುಮಗಳೊಬ್ಬಳು ಅನುಭವಿಸುವ ನೋವು, ಕಷ್ಟಗಳನ್ನ ಪರದೆ ಮೂಲಕ ತೋರಿಸಿದ ಶಾರದಾ ರಾವ್ ಗೆ ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅಂದಹಾಗೇ ಚಿತ್ರರಂಗ ಅದ್ಭುತ ಕಲಾವಿದೆಯನ್ನು ಕಳೆದ ಕೊಂಡ ದುಃಖದಲ್ಲಿದೆ.
Comments