‘ಕನ್ನಡ ಕೋಗಿಲೆ’ಯಿಂದ ನಿರೂಪಕಿ ಅನುಪಮಾ ಔಟ್ …!!!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಕನ್ನಡ ಕೋಗಿಲೆ’. ಸದ್ಯ ಯಶಸ್ವಿಯಾಗಿ ಮೊದಲ ಸೀಸನ್ ಕಂಪ್ಲೀಟ್ ಆಗಿದೆ. ಕನ್ನಡ ಕೋಗಿಲೆ ಶೋ ಮೂಲಕ ಕರ್ನಾಟಕಕ್ಕೆ ಸಾಕಷ್ಟು ಜನ ಪ್ರತಿಭಾವಂತ ಗಾಯಕರನ್ನು ಪರಿಚಯಿಸಿದೆ. ಅಲ್ಲದೇ ಶೋ ನಿರೂಪಕರಾಗಿ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡರು ಮೊದಲ ಬಾರಿಗೆ ಆ್ಯಂಕರಿಂಗ್ ಮಾಡಿದ್ದರು. ಮಾತು, ಮಜಾ, ಸಂಗೀತ ಮೂಲಕ ಸಾಕಷ್ಟು ಅಭಿಮಾನಿಗಳ ಮನಗೆದ್ದ ಅನುಪಮಾ ಗೌಡರು ಮತ್ತೆ ಶೋ ನಲ್ಲಿ ಕಂಟಿನ್ಯೂ ಆಗಲ್ವಂತೆ.
ಸದ್ಯ ಮತ್ತೆ ಕನ್ನಡದ ಕೋಗಿಲೆ ಸೆಕೆಂಡ್ ಸೀಸನ್ ಆರಂಭವಾಗ್ತಿದೆ. ಆದರೆ ಈ ಶೋ ತೀರ್ಪುಗಾರರು ಮಾತ್ರ ಅವರೇ ಮುಂದುವರೆಯುತ್ತಾರೆ. ನಿರೂಪಕಿ ಅನುಪಮಾ ಗೌಡರ ಬದಲು ಆರ್ ಜೆ ಸಿರಿ ಎಂಬುವವರು ನಿರೂಪಕಿಯಾಗಿ ಬರಲಿದ್ದಾರೆ. ಕನ್ನಡ ಕೋಗಿಲೆಯಲ್ಲಿ ಮೊದಲ ಬಾರಿಗೆ ರ್ಯಾಪರ್ ಚಂದನ್ ಶೆಟ್ಟಿ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್ ಜೆ ಸಿರಿ ರೇಡಿಯೋ ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ. ಇನ್ನು ಮುಂದೆ ಕನ್ನಡ ಕೋಗಿಲೆಯನ್ನು ಮುನ್ನಡೆಸಲಿದ್ದಾರೆ. ಇದೇ ಮಾರ್ಚ್ 23 ರಿಂದ ಶುರುವಾಗಲಿದೆ. ಈ ಬಾರಿಯೂ ಚಂದನ್ ಶೆಟ್ಟಿ ಜೊತೆ, ಅರ್ಚನ ಉಡುಪ, ಸಾಧು ಕೋಕಿಲ ಅವರು ತೀರ್ಪುಗಾರರಾಗಿ ಮುಂದುವರೆಯುತ್ತಾರೆ. ಆದರೆ ಅನುಪಮಾ ಗೌಡರು ಯಾಕೆ ಶೋ ನಲ್ಲಿ ಮುಂದುವರೆಯುತ್ತಿಲ್ಲ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ. ಫಸ್ಟ್ ಟೈಮ್ ಆ್ಯಂಕರಿಂಗ್ ಮಾಡಿದ ಅನುಪಮಾ ಗೌಡರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್-ಫಾಲೋಯರ್ಸ್ ಇದ್ದಾರೆ.
Comments