‘ಕ್ಲೂ’ ಕೊಟ್ಟು ಮಗಳ ಹೆಸರನ್ನು ಫೈನಲ್ ಮಾಡಿದ್ರ ರಾಮಾಚಾರಿ ಜೋಡಿ..!!

ಚಂದನವನದ ಸಿಂಡ್ರೆಲಾ ಸದ್ಯ ಮಗುವಿನ ಲಾಲನೆ, ಪಾಲನೆ ಪೋಷಣೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಕೂಡ ಸದಾ ಸೋಷಿಯಲ್ ಮಿಡೀಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ ರಾಮಾಚಾರಿ ವೈಫ್ ಮಾರ್ಗಿ.. ಇತ್ತಿಚಿಗಷ್ಟೆ ಫೋಟೋ ಹಾಕಿ ಸುದ್ದಿಯಲ್ಲಿರುವ ನಟಿ ರಾಧಿಕಾ ಪಂಡಿತ್ ಮಗುವಿನ ತಾಯಿಯಾಗಿದ್ದರೂ ಅಷ್ಟೇ ಬ್ಯೂಟಿ, ಗ್ಲಾಮರ್ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಇತ್ತಿಚಿಗೆ ಮಾಡಿಸಿದ ಪೋಟೋಶೂಟ್ ಸಾಕ್ಷಿಯಾಗಿತ್ತು.
ಅಂದಹಾಗೇ ಸದ್ಯ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲಗ ಕಪಲ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇದೀಗ ಮುದ್ದಾದ ಹೆಣ್ಣು ಮಗುವಿನ ತಂದೆತಾಯಿಯಾಗಿದ್ದಾರೆ. ರಾಕಿಂಗ್ ಜೋಡಿ ಮಗಳ ಹೆಸರು ಏನಿರಬಹುದು ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಇಬ್ಬರ ಹೆಸರಿನ ಅಕ್ಷರ ಬಳಸಿ ಯಶಿಕಾ ಎಂದು ಹೆಸರಿಡಿ ಎಂದು ಅನೇಕ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಯಶ್ ತನ್ನ ಮಗಳನ್ನು ರಸಗುಲ್ಲ ಎಂದು ಕರೆಯುತ್ತಾರೆ ಎಂದು ಬಹಿರಂಗಪಡಿಸಿದ್ದರು.
ಇದೀಗ ರಾಧಿಕಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಇಂಗ್ಲಿಷ್ ವರ್ಣಮಾಲೆಯ 'ಆರ್' ಅಕ್ಷರವನ್ನು ಹಿಡಿದುಕೊಂಡು ಪೋಸ್ ನೀಡಿರುವ ಫೋಟೋ ಪ್ರಕಟಿಸಿದ್ದು, 'ಆರ್' ಫಾರ್ ಏನು ಅಂತ ಗೆಸ್ ಮಾಡಿ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಇದಕ್ಕೆ ನೂರಾರು ಜನ ಪ್ರತಿಕ್ರಿಯಿಸಿದ್ದು, ಇದು ನಿಮ್ಮ ಮಗುವಿನ ಹೆಸರಿನ ಆರಂಭದ ಅಕ್ಷರವಾಗಿರಬೇಕು ಎಂದು ಗೆಸ್ ಮಾಡುತ್ತಿದ್ದಾರೆ. ಈ ಆರ್ ಅಕ್ಷರದ ಹಿಂದಿನ ರಹಸ್ಯವೇನೆಂದು ರಾಧಿಕಾ ಸದ್ಯದಲ್ಲೇ ಬಹಿರಂಗಪಡಿಸಬಹುದು ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ರಾಕಿಂಗ್ ಜೋಡಿಯ ಮುದ್ದಿನ ಮಗಳಿಗೆ ಆರ್ ಅಕ್ಷರದಿಂದ ಹೆಸರು ಇಡಬಹುದು ಎಂಬುದು ಅಭಿಮಾನಿಗಳ ಮಾತಾಗಿದೆ. ಇದೀಗ ಯಶ್ ಕೆಜಿಎಫ್ 2 ನಲ್ಲಿ ಬ್ಯುಸಿಯಾಗಿದ್ದಾರೆ. ಎಷ್ಟೆ ಬ್ಯುಸಿಯಾಗಿದ್ದರು ಕೂಡ ಮಗಳನ್ನು ಒಂದು ದಿನ ನೋಡಿಲ್ಲ ಅಂದರೆ ರಾಕಿ ಬಾಯ್ ಗೆ ಇರೋದಕ್ಕೆ ಆಗಲ್ವಂತೆ.
Comments