ಬಾಲಿವುಡ್ ನ ಮಾಜಿ ಪ್ರೇಮಿಗಳು ಒಂದೆಡೆ ಸೇರಿದ್ದಾಗ ಅಲ್ಲಿ ನಡೆದಿದ್ದೆ ಬೇರೆ..!!?

ದೀಪಿಕಾ ಪಡುಕೊಣೆ ಮತ್ತು ರಣವೀರ್ ಸಿಂಗ್ ಮದುವೆಯಾದಗಿನಿಂದಲೂ ಒಂದಲ್ಲ ಒಂದಕ್ಕೆ ಸುದ್ದಿಯಾಗುತ್ತಲೆ ಇದ್ದಾರೆ. ಇತ್ತಿಚಿಗಷ್ಟೆ ಬ್ಯಾಚುಲರ್ ಲೈಫ್ ಗೆ ಗುಡ್ ಬಾಯ್ ಹೇಳಿ ಸಪ್ತ ಪದಿ ತುಳಿದು ಮ್ಯಾರಿಡ್ ಲೈಫ್ ನ ಎಂಜಾಯ್ ಮಾಡ್ತಿದ್ದಾರೆ. ರೊಮ್ಯಾಂಟಿಕ್ ಮೂಡ್ನಲ್ಲಿದ್ದ ಈ ಜೋಡಿಗೆ ಅಭಿಮಾನಿಗಳು ಸ್ವಲ್ಪ ದಿನಗಳ ಹಿಂದೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಲ್ಲೀ ತನಕ ರೊಮ್ಯಾಂಟಿಕ್ ಸುದ್ದಿಗಳಲ್ಲಿ ಬ್ಯುಸಿ ಇರ್ತಾಯಿದ್ದ ರಣವೀರ್ ಸಿಂಗ್ ಬದಲು ಇದೀಗ ರಣಬೀರ್ ಕಪೂರ್ ಸುದ್ದಿಯಲ್ಲಿದ್ದಾರೆ.
ಒಂದು ಕಾಲದಲ್ಲಿ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಮಾಜಿ ಪ್ರೇಮಿಗಳು ಅನ್ನೋದು ಬಾಲಿವುಡ್ ಮಾತು..ಇದೀಗ ಮಾಜಿ ಪ್ರೇಮಿಗಳಿಬ್ಬರು ಎದುರು ಬದುರಾಗಿದ್ದಾರೆ. ಅರೇ ಮಾಜಿ ಪ್ರೇಮಿಗಳು ಒಂದೆಡೆ ಸೇರುದ್ರೆ ಏನಾಗಬಹುದು.. ರಣವೀರ್ ಸಿಂಗ್ ಮದುವೆಯಾಗಿ ಹಾಯಾಗಿರುವ ದೀಪಿಕಾ ಪಡುಕೋಣೆ ಇದೀಗ ಬೇರೆ ಹುಡುಗನ ಜೊತೆ ಪೋಟೋದಲ್ಲಿ ಸೆರೆಯಾಗಿದ್ದಾರೆ. ಶೂಟ್ ಒಂದರ ವೇಳೆ ದೀಪಿಕಾ ಮತ್ತು ರಣಬೀರ್ ಕಪೂರ್ ಎದುರು-ಬದರಾಗಿದ್ದರು. ಮದುವೆಯಾಗಿದ್ದರೂ ದೀಪಿಕಾ ರಣಬೀರ್ ಜತೆ ಬಹಳ ಆಪ್ತವಾಗಿ ಕಾಣಿಸಿಕೊಂಡರು.
ಈ ಫೊಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಬ್ಬರು ತಬ್ಬಿಕೊಂಡು ಆಪ್ತತೆಯಿಂದ ಇದ್ದಾರೆ.. ಇಬ್ಬರ ಮಧ್ಯೆ ಸ್ನೇಹ ಹೊರತು ಬೇರೇನೂ ಇಲ್ಲ ಎಂದರೂ ಜನ ನಂಬೋದು ಕಷ್ಟ ಬಿಡಿ.. ಬಾಲಿವುಡ್ ಮಂದಿ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದೇ ಇಲ್ಲ… ಹಾಗಾಗಿ ದೀಪಿಕಾ ಮತ್ತು ರಣವೀರ್ ಮಧ್ಯೆ ರಣಬೀರ್ ಬಂದ್ರೂ ಯಾವುದಕ್ಕೂ ಡೋಂಟ್ ಕೇರ್ ಎನ್ನುವ ಈ ಜೋಡಿ ಮ್ಯಾರಿಡ್ ಲೈಫ್ ನ ಎಂಜಾಯ್ ಮಾಡ್ತಿದ್ದಾರೆ.
Comments