ಅಪಘಾತವಾದ ವೃದ್ಧನಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಬಿಗ್ ಬಾಸ್ ಸ್ಪರ್ಧಿ..

ಕನ್ನಡದ ಅತೀ ದೊಡ್ಡ ರಿಯಾಲಿಟಿ ಷೋಗಳಲ್ಲಿ ಬಿಗ್ ಬಾಸ್ ಕೂಡ ಒಂದು ಸೀಸನ್ 6 ಸಿಕ್ಕಾಪಟ್ಟೆ ಹೆಸರು ಮಾಡಿತ್ತು ಯಾವ ಸೀಜನ್ ಮಾಡದಷ್ಟು ಹೆಸರನ್ನು ಸೀಜನ್ 6 ಮಾಡಿತ್ತು.. ಷೋ ಮುಗಿದ ಮೇಲೂ ಕೂಡ ಬಿಗ್ ಬಾಸ್ ಸುದ್ದಿಯಲ್ಲಿತ್ತು.. ಕವಿತಾ ಆ್ಯಂಡಿಯ ಕಿತ್ತಾಟ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿತ್ತು.. ಅಕ್ಷತಾ ರಾಕೇಶ್ ಕೂಡ ಸಿಕ್ಕಾಪಟ್ಟೆ ಸುದ್ದಿಯಾದರು.. ಒಟ್ಟಿನಲ್ಲಿ ಬಿಗ್ ಬಾಸ್ ಸೀಜನ್ 6 ಮುಗಿದ ಮೇಲೂ ಕೂಡ ಸ್ಪರ್ಧಿಗಳು ಒಂದಿಲ್ಲೊಂದು ಕೆಲಸ ಮಾಡಿ ಸುದ್ದಿಯಾಗುತ್ತಲೇ ಇದ್ದಾರೆ. ಅರೇ ಈಗ ಯಾರಪ್ಪ ಸುದ್ದಿಯಾಗಿರೋದು ಅಂತಿರಾ.. ಮುಂದೆ ಓದಿ
ಆರ್ ಆರ್ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ವೃದ್ಧರೊಬ್ಬರನ್ನ ಆರೈಕೆ ಮಾಡಿ ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ಮಾನವೀಯತೆ ಮೆರೆದಿದ್ದಾರೆ.ನೆನ್ನೆ ಸಂಜೆ ಆರ್ಆರ್ ನಗರದಲ್ಲಿ ಓಮ್ನಿ ಕಾರೊಂದು ಸುಮಾರು 75 ವರ್ಷದ ವೃದ್ಧನಿಗೆ ಗುದ್ದಿ ಎಸ್ಕೇಪ್ ಆಗಿದೆ. ಕಾರು ಗುದ್ದಿದ ಹೊಡೆತಕ್ಕೆ ವೃದ್ಧ ಎಂ.ರಾಘವೇಂದ್ರ ಗಾಯಗೊಂಡು ರಸ್ತೆ ಮಧ್ಯೆ ಬಿದ್ದಿದ್ದರು.ಇದನ್ನ ಗಮನಿಸಿದ ನಟಿ ಸೋನು ಪಾಟೀಲ್, ಸ್ಥಳಕ್ಕೆ ಬಂದು ವೃದ್ಧ ರಾಘವೇಂದ್ರ ಅವರ ಆರೈಕೆ ಮಾಡಿದ್ದಾರೆ. ಆದರೆ ಕಾಲಿನಿಂದ ರಕ್ತ ಬರುತ್ತಿತ್ತು,
ಆಗ ಅದಕ್ಕೆ ಅರಿಶಿಣ ಹಚ್ಚಿ ರಕ್ತ ನಿಲ್ಲಿಸಲು ಟ್ರೈಮಾಡಿದ್ದಾರೆ. ನಂತರ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಡಿಕ್ಕಿ ಹೊಡೆದ ಕಾರಿನ ನಂಬರ್ ಸಂಗ್ರಹಿಸಿ ಸೋನು ಪಾಟೀಲ್, ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ. ಇನ್ನು, ಗಾಯಗೊಂಡಿರುವ ಎಂ.ರಾಘವೇಂದ್ರ ಉಡುಪಿ ಮೂಲದವರಾಗಿದ್ದಾರೆ. ಮಕ್ಕಳನ್ನ ನೋಡುವ ಸಲುವಾಗಿ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ನಲ್ಲಿ ಒಂದಿಷ್ಟು ಹೆಸರು ಮಾಡಿದ್ದ ಸೋನು ಪಾಟೀಲ್ ಇದೀಗ ಮಾನವೀಯತೆ ಮೆರೆದು ಸುದ್ದಿಯಾಗಿದ್ದಾರೆ.
Comments