ಮೋಸ್ಟ್ ಫೇವರೀಟ್ ಆ್ಯಂಕರ್ ಅನುಶ್ರೀಗೆ ಆ ನಿರೂಪಕನೆಂದರೆ ಬಲು ಪ್ರೀತಿಯಂತೆ ಗೊತ್ತಾ..?
ಕಿರುತೆರೆಯ ಮೋಸ್ಟ್ ಫೇವರೀಟ್ ಆ್ಯಂಕರ್ ಅಂತಾ ಕೇಳಿದ್ರೆ ಎಲ್ಲರ ಬಾಯಲ್ಲೂ ಬರೋದು ಅದೇ ಹರಳು ಉರಿಯೋ ಹಾಗೇ ಮಾತನಾಡೋ ಮಾತಿನ ಮಲ್ಲಿ ಅನುಶ್ರೀ ಅಂತಾ. ಫಟ್ ಫಟ್ ಅಂತಾ ಮಾತನಾಡೋ ಅನುಶ್ರೀ ಕಂಡೆ ಮಕ್ಕಳಿಗೆ ಬಲು ಪ್ರೀತಿ ನೋಡ್ರಿ… ಅಲ್ರೀ ಅನುಶ್ರೀ ಮಾತಿಗೆ, ಆಕೆಯ ದೇಹಸಿರಿಗೆ ಹುಡುಗರು ಕೂಡ ಫಿದಾ ಆಗಿದ್ದಾರೆ. ಸದಾ ಕಾಲ ಫಸ್ಟ್ ನಿಂದ ಲಾಸ್ಟ್ ವರೆಗು ಅದೇ ಚಾರ್ಮ್, ಎನರ್ಜಿ ಉಳಿಸಿಕೊಂಡು ಮಾತನಾಡೋ ನಿರೂಪಕಿ ಕಂಡರೆ ತೀರ್ಪುಗಾರರಿಗೂ ಅಷ್ಟೇ ಪ್ರೀತಿ. ಆದರೆ ಮೋಸ್ಟ್ ಫೇವರೀಟ್ ಅನುಶ್ರೀಗೂ ಮತ್ತೊಬ್ಬ ಫೇವರೀಟ್ ಆ್ಯಂಕರ್ ಇದ್ದಾರಂತೆ.
ಹಾಗಂತಾ ಅವರೇ ಹೇಳಿಕೊಂಡಿದ್ದಾರೆ. ಅನುಶ್ರೀ ಆ ಆ್ಯಂಕರ್ ಕಂಡ್ರೆ ಎಷ್ಟು ಪ್ರೀತಿ ಅಂತಾ ಅವರೇ ಯೂಟ್ಯೂಬ್ ನಲ್ಲಿ ಹೇಳಿಕೊಂಡಿದ್ದಾರೆ. ಅವರಿಗೆ ಆ ನಿರೂಪಕರೆಂದರೆ ಫೇವರೀಟ್ ಅಂತೆ. ಕನ್ನಡದ ಕಿರುತೆರೆಯ ಫೇಮಸ್ ಆ್ಯಂಕರ್ ಯಾರು ಅಂದ್ರೆ ಫಟ್ ಅಂತಾ ಹೇಳೋದು, ಟಾಪ್ 1 ಸ್ಥಾನದಲ್ಲಿ ಇರೋದು ಕೂಡ ಅನುಶ್ರೀನೆ. ಅಂತಹ ಅನುಶ್ರೀಗೆ ಒಬ್ಬರು ಫೇವರೀಟ್ ಇದ್ದಾರಂತೆ, ಅವರು ಯಾರು ಗೊತ್ತಾ..?
ಹೌದು. ಕನ್ನಡ ಕಿರುತೆರೆಯ ಟಾಕಿಂಗ್ ಟಾಮ್ ಅಕುಲ್ ಬಾಲಾಜಿ ಕಂಡರೆ ಅನುಶ್ರೀಗೆ ಸಿಕ್ಕಾಪಟ್ಟೆ ಇಷ್ಟವಂತೆ. ಅನುಶ್ರೀ ಕೆಲವು ದಿನಗಳ ಹಿಂದೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆಂದಾಗ, ಅಭಿಮಾನಿಯೊಬ್ಬ ನಿಮಗೆ ಯಾವ ಅ್ಯಂಕರ್ ಇಷ್ಟವೆಂದು ಕೇಳಿದ್ದಕ್ಕೆ ಈ ರೀತಿ ಉತ್ತರಿಸಿದ್ದಾರೆ.
Comments