ಚಿತ್ರನಟರ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು..?!!!

ಈಗಾಗಲೇ ಸ್ಯಾಂಡಲ್’ವುಡ್ನ ಇಬ್ಬರು ಘಟಾನುಗಟಿ ಸ್ಟಾರ್ ಗಳು ಮಂಡ್ಯದ ನೆಲಕ್ಕೆ ಕಾಲಿಟ್ಟಿದ್ದಾರೆ. ನಾವು ಸುಮಲತಾ ಅಮ್ಮನ ಪರ ಪ್ರಚಾರ ಮಾಡ್ತೀವಿ, ಖಂಡಿತಾ ಅವರನ್ನೇ ಗೆಲ್ಸೇ ಗೆಲ್ಲಿಸ್ತೀವಿ ಅಂತಾ ಹೇಳಿದ್ರೆ. ಇತ್ತ ಕುಮಾರ ಸ್ವಾಮಿ ಅಭಿಮಾನಿಗಳು ಮಂಡ್ಯದಿಂದ ಖಂಡಿತಾ ಪಾಠ ಕಲಿತೇ ಹಿಂದಕ್ಕೆ ಹೋಗ್ತೀರಾ ಅಂತಾ ಹೇಳಿದ್ದಾರೆ. ಇದರ ಮದ್ಯೆಯೇ ಸಿನಿಮಾ ನಟರ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದೆ.
ಈಗಾಗಲೇ ಚುನಾವಣೆ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಚಿತ್ರ ನಟರು ಬಹಿರಂಗವಾಗಿ ಒಬ್ಬರ ಪರ ಪ್ರಚಾರ ಮಾಡುತ್ತಿದ್ದಾರೆ. ಮತ ಯಾಚಿಸುತ್ತಿದ್ದಾರೆ, ಅಭಿಮಾನಿಗಳು ಎಂಬ ಹೆಸರು ಬಳಕೆ ಮಾಡಿಕೊಳ್ಳುವುದು ಕೂಡ ಒಂದು ರೀತಿಯ ಆಮೀಷ ಎಂದು ಕರವೇ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಹಾಗಾಗಿ ಚುನಾವಣಾ ಮುಗಿಯುವವರೆಗು ಅವರ ಚಿತ್ರಗಳನ್ನು ಬ್ಯಾನ್ ಮಾಡುವಂತೆ ಅಧ್ಯಕ್ಷ ಜಯರಾಮ್ ನಾಯ್ಡು ದೂರು ದಾಖಲಿಸಿದ್ದಾರೆ.ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಯರಾಮ್ ಮಾತನಾಡಿ, ಯಾವ ಕಲಾವಿದರು,ಚುನಾವಣೆಯ ಪ್ರಚಾರದಲ್ಲಿ ಭಾಗಿಯಾದ್ರೆ, ಅವರೆಲ್ಲರೂ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಬರುತ್ತಾರೆ. ಈ ಬಗ್ಗೆ ನಾವು ಕಲಾವಿದರ ವಿರುದ್ಧ ದೂರು ನೀಡಿದ್ದೇವೆ, ಈ ಸಂಬಂಧ ನಾವು ಮೊದಲೇ ನಮ್ಮ ವಕೀಲರ ಬಳಿ ಕೇಳಿದಾಗ ಪ್ರಚಾರಕರೆಲ್ಲರೂ ಕೋಡ್ ಆಫ್ ಕಂಡೆಕ್ಟ್ ಗೆ ಬರುತ್ತೆ ಎಂದು ಹೇಳಿದ್ದಾರೆ. ಅಂದಹಾಗೇ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಅಧಿಕೃತವಾಗಿ ಸ್ಪರ್ಧಿಸುತ್ತೇವೆ ಎಂದು ಘೋಷಿಸುತ್ತಿದ್ದಂತೇ ಕೆಲ ಸ್ಟಾರ್ ನಟರು ಸುದ್ದಿ ಗೋಷ್ಟಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಕೆಲ ನಟರು ನಾವು ಗೆಲ್ಲಿಸುತ್ತೇವೆ.ಅಭಿಮಾನಿ ಸಂಘಗಳು ಕೂಡ ಸಾಥ್ ನೀಡುತ್ತಾರೆ ಎಂದು ಹೇಳಿದ್ದಾರೆ. ಹಾಗಾಗಿ ಇದು ಕೋಡ್ ಆಫ್ ಕಂಡೆಕ್ಟ್ ಗೆ ಬರುತ್ತೆ ಎಂಬ ಕಾರಣಕ್ಕೆ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇನೆ. ಚುನಾವಣೆ ಮುಗಿಯುವವರೆಗೂ ನಟರ ಚಿತ್ರ ಹಾಗೂ ಜಾಹೀರಾತು ನಿಷೇಧ ಮಾಡಬೇಕು ಎಂದು ಜಯರಾಮ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
Comments