'ಇದನ್ನೆಲ್ಲಾ ನಾನು ನೋಡಲಾರೆ..ಇನ್ನು ಮುಂದೆ ಅಲ್ಲಿ ಇರಲ್ಲ’ : ಕಿಚ್ಚ ಸುದೀಪ್ ಶಾಕಿಂಗ್ ಹೇಳಿಕೆ…!!!

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಮಂಡ್ಯದ ಧಗಧಗ ಉರಿಯುತ್ತಿದೆ. ಸ್ಯಾಂಡಲ್’ವುಡ್ ಸ್ಟಾರ್ ನಟರ ದಂಡೇ ಮಂಡ್ಯದತ್ತ ಹರಿದು ಬರುತ್ತಿದೆ. ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಬಹಿರಂಗವಾಗಿ ಚುನಾವಣೆಗೆ ಸ್ಪರ್ಧೆ ಬಗ್ಗೆ ಘೋಷಣೆ ಮಾಡುತ್ತಿದ್ದಂತೇ ಅಭಿಮಾನಿಗಳ ಮನದಲ್ಲಿ ಮತ್ತಷ್ಟು ಗೊಂದಲದ ಕೋಲಾಹಲ ಎಬ್ಬಿದೆ. ಒಟ್ಟಾರೆ ಈ ಸ್ಟಾರ್ ನಾಯಕ ನಡುವೆ ಕಿಚ್ಚ ಸುದೀಪ್ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ರಾಜಕೀಯ, ಕ್ಯಾಂಪೇನ್ ವಿಚಾರವಾಗಿ ಅಷ್ಟಾಗಿ ಕಾಣಿಸಿಕೊಳ್ಳದ ಕಿಚ್ಚ, ಸೋಶಿಯಲ್ ಮಿಡಿಯಾವನ್ನು ಸದಾ ಬಳಸುತ್ತಿರುತ್ತಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಒಂದಷ್ಟು ಸುದೀಪ್ ಮನಸ್ಸಿಗೆ ಬೇಸರ ತರಿಸುವ ವಿಚಾರಗಳು ನಡೆದಿದ್ಯಂತೆ. ಅಭಿಮಾನಿಗಳಿಗೆ ಈ ಬಗ್ಗೆ ಒಂದು ಎಚ್ಚರಿಕೆ ಅಥವಾ ಶಾಕಿಂಗ್ ಹೇಳಿಕೆ ಕೊಡುತ್ತಿದ್ದಾರೆ. ಸುದೀಪ್ ಫ್ಯಾನ್ಸ್ ಕೂಡ ದಿನಾ ಅಭಿನಯ ಚಕ್ರವರ್ತಿಯನ್ನು ಫಾಲೋ ಮಾಡ್ತಾ ಇರ್ತಾರೆ. ಸುದೀಪ್ ಕೊಟ್ಟ ಈ ಹೇಳಿಕೆಯಿಂದ ಸ್ವಲ್ಪ ಕಸಿವಿಸಿಗೊಂಡಿದ್ದಾರಂತೆ ಅಭಿಮಾನಿಗಳು. ಕಿಚ್ಚ ಮನಸ್ಸಿಗೆ ಆದ ಗಾಯವಾದ್ರು ಏನು..ಯಾಕೆ ಥರಾ ಮಾತನಾಡಿದ್ದಾರೆ ಗೊತ್ತಾ..?
ರಕ್ತದಲ್ಲಿ ಪತ್ರ ಬರೆಯುವ, ಕೈಗೆ ಗಾಯ ಮಾಡಿಕೊಂಡು ಹೆಸರು ಬರೆಯುವ ಎಲ್ಲಾ ಅಭಿಮಾನಿಗಳ ವಿರುದ್ಧ ಕಿಚ್ಚ ಸುದೀಪ್ ಬೇಸರ ಮಾಡಿಕೊಂಡಿದ್ದಾರೆ. ನೀವು ಇದೇ ಥರ ಮಾಡುವುದಾದರೆ…ನಾನು ಕೂಡ ಒಂದು ನಿರ್ಧಾರಕ್ಕೆ ಬಂದಿದ್ದೇನೆ… ಇದೂ ಒಂದಲ್ಲ ಎರಡಲ್ಲ, ಅನೇಕ ಬಾರಿ ಹೇಳುತ್ತಿದ್ದೇನೆ. ಈ ಅಭಿಮಾನಿಗಳು ಹುಚ್ಚು ಅಭಿಮಾನ ಮೆರೆಯುತ್ತಿದ್ದರೇ ನನ್ನ ಮನಸ್ಸಿಗೆ ನಿಜಕೂ ಗಾಸಿಯಾಗುತ್ತದೆ ಬರೆದುಕೊಂಡಿದ್ದಾರೆ. ಅಭಿಮಾನಿಯೊಬ್ಬರು ಕೈಗೆ ಗಾಯಮಾಡಿಕೊಂಡು ರಕ್ತದಲ್ಲಿ ಕಿಚ್ಚ ಎಂದು ಬರೆದು ಫೋಟೋ ತೆಗೆದು ಟ್ವೀಟರ್‌ನಲ್ಲಿ ಸುದೀಪ್‌ಗೆ ಟ್ಯಾಗ್ ಮಾಡಿದ್ದರು. ಅದನ್ನು ನೋಡಿದ ಸುದೀಪ್ ಅಸಹಾಯಕತೆಯಿಂದ, ನೋವಿನಿಂದ ಪತ್ರ ಬರೆದಿದ್ದಾರೆ. ಆ ಪತ್ರ ಇಲ್ಲಿದೆ. ನನಗೆ ಈ ರೀತಿ ಪ್ರೀತಿ ತೋರಿಸಿದರೇ ಹಿಂಸೆ ಆಗುತ್ತದೆ. ನೀವು ನ್ನನ ಮಾತಿಗೆ ಬೆಲೆ ಕೊಡುವುದೇ ಆದರೇ, ಅಥವಾ ನನಗೆ ಪ್ರೀತಿ ತೋರುವುದೇ ಆದರೆ ಈ ರೀತಿ ಮಾಡಿಕೊಳ್ಳ ಬೇಡಿ. ಇದು ಪ್ರೀತಿ ತೋರುವ ವಿಧಾನ ಅಲ್ಲಾ..ನೋವಿನಿಂದ ಹೇಳುತ್ತಿದ್ದೇನೆ. ನನ್ನ ಮಾತು ಕೇಳದೇ ನೀವು ಇದನ್ನು ಮುಂದುವರೆಸುವುದೇ ಆದರೆ.ನಾನು ಕೂಡ ಒಂದು ನಿರ್ಧಾರ ಮಾಡಿದ್ದೇನೆ. ಇನ್ನು ಮುಂದೆ ನಿಮ್ಮ ಕೈಗೆ ಸಿಗಲ್ಲಾ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲ್ಲ, ನಾನು ಏನನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲ್ಲ. ಇನ್ನು ಮುಂದೆ..
ನಾನು ಟ್ವೀಟರ್, ಸೋಷಲ್ ಮೀಡಿಯಾ ತೊರೆಯಬೇಕಾಗುತ್ತದೆ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಈ ಥರಾ ನೋವಿನ ಮಾತುಗಳನ್ನಾಡುತ್ತಿರುವುದು ಇದೇ ಮೊದಲೇನಲ್ಲಾ, ಅಭಿಮಾನ ಇರಬೇಕು, ಹುಚ್ಚು ಅಭಿಮಾನ ಇರಬಾರದು. ನಾವು ತೋರಿಸುವ ಪ್ರೀತಿ ಅವರಿಗೆ ಇಷ್ಟವಾಗಿರಬೇಕು. ಅವರಿಗೆ ಇಕ್ಕಟ್ಟಿಗೆ ಸಿಲಕಿಸಬಾರದು ಎಂದಿದ್ದಾರೆ.
Comments