ನಟಿ ಪೂಜಾಗಾಂಧಿ ವಿರುದ್ಧ ಕೇಸ್ : ಛೇ... ಮಳೆ ಹುಡುಗಿ ಇಂಥಾ ಕೆಲಸ ಮಾಡೋದಾ..?!!!

ಕನ್ನಡ ಚಿತ್ರರಂಗದ ನಾಯಕಿ ನಟಿ ಪೂಜಾಗಾಂಧಿ ವಿರುದ್ಧ ಕೇಸ್ ದಾಖಲಾಗಿದೆ. ಮುಂಗಾರು ಮಳೆ ಮೂಲಕ ಅಭಿಮಾನಿಗಳ ಮನಸೂರೆಗೊಂಡ ಖ್ಯಾತ ನಟಿ ಪೂಜಾ ಮೇಲೆ ಹೋಟೆಲ್ ಮಾಲೀಕರು ದೂರು ಕೊಟ್ಟಿದ್ದಾರೆ. ಅಂದಹಾಗೇ ಪೂಜಾಗಾಂಧಿ ಏನು ಎಡವಟ್ಟು ಮಾಡಿಕೊಂಡಿದ್ದಾರೆ ಗೊತ್ತಾ..? ನಟಿಯಾದರೇನು..? ಸೆಲೆಬ್ರಿಟಿಯಾದರೇನು ಬ್ಯುಸಿನೆಸ್ ಬುಸಿನೆಸ್ ಅಲ್ಲವೇ ಎಂದು ಹೋಟೆಲ್ ಮಾಲೀಕರು ಪೂಜಾ ವಿರುದ್ಧ ಕೋಪಗೊಂಡಿದ್ದಾರೆ.
ನಗರದ ಅಶೋಕ ಹೋಟೆಲ್ ನಲ್ಲಿ ಬಿಲ್ ಕಟ್ಟದೇ ನಟಿ ಪೂಜಾಗಾಂಧಿ ಕದ್ದು ಓಡಿ ಹೋಗಿದ್ದರಂತೆ. ಈ ಹಿನ್ನಲೆಯಲ್ಲಿ ಅವರ ಮೇಲೆ ಕೇಸ್ ದಾಖಲು ಮಾಡಲಾಗಿತ್ತು. ಪೂಜಾಗಾಂಧಿ ವಿರುದ್ಧ ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ದೂರು ಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್ ( ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದಾರೆ. ಅಂದಹಾಗೇ ಸಾವಿರಾರು ರೂಪಾಯಿ ಅಲ್ಲಾ, ರೀ ಬರೋಬ್ಬರಿ 4.5 ಲಕ್ಷ ರೂ ಬಿಲ್ ಪಾವತಿ ಮಾಡದೇ ಎಸ್ಕೇಪ್ ಆಗಿದ್ದರಂತೆ ಪೂಜಾಗಾಂಧಿ.
ಆದರೆ ಯಾವಾಗ ಅಶೋಕ ಹೋಟೆಲ್ ಕಡೆಯಿಂದ ನಟಿ ವಿರುದ್ಧ ಕೇಸ್ ದಾಖಲು ಮಾಡಲಾಯ್ತೋ ಪೊಲೀಸರು ಠಾಣೆಗೆ ಪೂಜಾಗಾಂಧಿಯನ್ನು ಕರೆಸಿದ್ದಾರೆ.ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.
ಆದರೆ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪೂಜಾಗಾಂಧಿ ಅಭಿಮಾನಿಗಳು ಛೇ…ಸ್ಟಾರ್ ನಟಿಯಾಗಿದ್ದರೂ ಬಿಲ್ ಕಟ್ಟೋಕೆ ನಾಲ್ಕು ಲಕ್ಷ ಹಣ ಇಲ್ಲವೇ ಎಂದು ಟ್ರೋಲ್ ಮಾಡುತ್ತಿದ್ದಾರೆ.
Comments