ನಿರೂಪಕ ಅಕುಲ್ ಬಾಲಾಜಿ ಮಾಡಿದ ಈ ಕೆಲಸಕ್ಕೆ ಬೆನ್ನು ತಟ್ಟಬೇಕು…..?!

ಅಂದಹಾಗೇ ಬಿಗ್ ಬಾಸ್ ಸ್ಪರ್ಧಿ ಆಡಂ ಪಾಷಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ನಿರೂಪಕ ಅಕುಲ್ ಬಾಲಾಜಿ ಮೇಲೆ ದೂರು ಕೊಡಲಾಗಿತ್ತು. ನನ್ನ ಜೆಂಡರ್ ಬಗ್ಗೆ ಮಾತನಾಡಿದ್ದಾರೆ, ನನಗೆ ಅವಮಾನವಾಗಿದೆ ಎಂದು ರಿಯಾಲಿಟಿ ಶೋಯಿಂದಲೇ ಆಡಂ ಪಾಷಾ ಹೊರ ನಡೆದಿದ್ದರು. ಅದೇ ಸ್ಯಾಂಡಲ್’ವುಡ್ನ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಒಂದು ಒಳ್ಳೆ ಕೆಲಸ ಮಾಡಿ ಸುದ್ದಿಯಾಗಿದ್ದಾರೆ. ಅಂದಹಾಗೇ ಇತ್ತೀಚೆಗೆ ಯುವ ನಿರ್ದೇಶಕ ರಿಶಬ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಸಿನಿಮಾ ರಿಲೀಸ್ ಆಯ್ತು. ಸಿನಿಮಾ ನೋಡಿದ ಅಕುಲ್ ಬಾಲಾಜಿ ಆ ಚಿತ್ರ ನೋಡಿ ಸ್ಫೂರ್ತಿ ಪಡೆದಿದ್ದಾರೆ.
ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಅಕುಲ್ ಬಾಲಾಜಿ ಕುಟುಂಬದವರು, ಸ್ನೇಹಿತರ ಬಳಿ ಚರ್ಚೆ ನಡೆಸಿದ್ದಾರೆ. ನಂತರ ನಗರದ ಹೊರ ವಲಯದಲ್ಲಿರುವ ಲಗುಮೇನಹಳ್ಳಿಯಲ್ಲಿರುವ ಶಾಲೆಯನ್ನು ದತ್ತು ಪಡೆದಿದ್ದಾರೆ. ನಾನು ಶಾಲೆಯನ್ನು ದತ್ತು ತೆಗೆದುಕೊಳ್ಳಲು ರಿಶಬ್ ಸಿನಿಮಾವೇ ಸ್ಪೂರ್ತಿ. ಲಗುಮೇನಹಳ್ಳಿ ಶಾಲೆ ನನಗೆ ಹತ್ತಿರವಿರುವುದರಿಂದ ಆಗಾಗ ಬಂದು ಹೋಗಲು ಸುಲಭವಾಗುತ್ತದೆ ಎಂದು ದತ್ತು ಪಡೆದಿದ್ದೇನೆ. ಹೆಚ್ಚು ಶಾಲೆ ಕಡೆ ಗಮನ ಹರಿಸುತ್ತೇನೆ. ಆ ಮೂಲಕ ಕನ್ನಡ ಮಾಧ್ಯಮ ಶಾಲೆಗಳ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹೋರಾಡುತ್ತೇನೆ ಎಂದಿದ್ದಾರೆ. ನನಗೆ ಶಾಲೆ ಹತ್ತಿರವಾದ್ದರಿಂದ ಬಂದು ಹೋಗಲು, ಸೌಲಭ್ಯಗಳನ್ನು ಒದಗಿಸಲು ಸಹಾಯಕವಾಗುತ್ತದೆ ಎಂದಿದ್ದಾರೆ. ಈ ಹಿಂದೆ ಶಾಲೆ ಕಡೆ ಹೋಗಿದ್ದೆ. ನಾನು ದತ್ತು ತೆಗೆದುಕೊಳ್ಳಲು ಇದೇ ಸರಿಯಾದ ಸ್ಕೂಲ್ ಎಂದು ಭಾವಿಸಿದ್ದೆ. ಸದ್ಯ ಅಲ್ಲಿ 66 ಮಕ್ಕಳು ಕಲಿಯುತ್ತಿದ್ದು ಕೇವಲ ಇಬ್ಬರು ಟೀಚರ್’ಗಳಿದ್ದಾರೆ.ಈಗಿರುವ ಮಕ್ಕಳಿಗೆ ಟೀಚರ್ ಗಳು ಸಾಕಾಗುತ್ತಿಲ್ಲ. ಇಬ್ಬರಲ್ಲಿ ಒಬ್ಬ ಶಿಕ್ಷಕರು ಅದಾಗಲೇ ವೈಯಕ್ತಿಕ ಸಮಸ್ಯೆಯೆಂದು ಬಿಟ್ಟು ಹೋಗಿದ್ದಾರೆ. ನಾನು ಮೊದಲು ಶಿಕ್ಷಕರನ್ನು ನೇಮಕ ಮಾಡಿಸಿ ಮುಂದಿನ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇನೆ ಎಂದಿದ್ದಾರೆ.
Comments