ರೆಬೆಲ್ ಸ್ಟಾರ್ ಅಂಬಿಯಿಂದಲೇ ಮಗನಿಗೆ ಎದುರಾಯ್ತು ಸಂಕಷ್ಟ…!!!

ಒಂದ್ ಕಡೆ ಅಮ್ಮ ರಾಜಕೀಯಕ್ಕೆ ಸೇರಿ ಟೆನ್ಶನ್ ಹೆಚ್ಚು ಮಾಡಿದ್ದಾರೆ. ಇನ್ನೊಂದ್ ಕಡೆ ತನ್ನ ಸಿನಿಮಾ ಬ್ಯುಶಿ ಶೆಡ್ಯೂಲ್. ಇದರ ಮಧ್ಯೆ ಅಂಬಿಯಿಂದಲೇ ಪುತ್ರ ಅಭಿಷೇಕ್ ‘ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಭಿಷೇಕ್ ಅಂಬರೀಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಅಮರ್ ಪ್ರಮೋಶನ್ ಗೆಂದು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಚಿತ್ರದಲ್ಲಿ ಬಳಸಲಾಗಿರುವ ಒಂದು ಹಾಡಿಗೆ ಇದೀಗ ಕಾಪಿ ರೈಟ್ ಸಮಸ್ಯೆ ಎದುರಾಗಿದೆ. ಪರೋಕ್ಷವಾಗಿಯೇ ಅಂಬಿಯೇ ಕಾರಣವಾಗಿದ್ದಾರೆ.
ಅಂದಹಾಗೇ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಸಿನಿಮಾ ಒಲವಿನ ಉಡುಗೊರೆ 100 ದಿನ ದಿನಗಳ ಕಾಲ ಭರ್ಜರಿ ಯಶಸ್ಸುಗಳಿಸಿತ್ತು. ವಿಷ್ಯ ಏನಪ್ಪಾ ಅಂದ್ರೆ… ಆ ಸಿನಿಮಾದಲ್ಲಿನ ಹಾಡೊಂದನ್ನು ಪುತ್ರ ಅಭಿಷೇಕ್ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಇದಕ್ಕೆ ಸಂಗೀತ ಆಡಿಯೋ ಕಂಪನಿ ಕಡಿವಾಣ ಹಾಕಿದೆ. ಈ ಆಡಿಯೋ ಕಂಪನಿ ಪ್ರಮೋಷನ್ ವೇಳೆ ತಕರಾರು ತೆಗೆಯಲು ಕಾರಣ, ಒಲವಿನ ಉಡುಗೊರೆ' ಹಾಡನ್ನು ಚಿತ್ರಮಂದಿರದಲ್ಲಿ ಮಾತ್ರ ಬಳಸಬೇಕು.ಪ್ರಮೋಷನ್‌ಗೆ, ಯೂಟ್ಯೂಬ್‌ಗೆ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವಂತಿಲ್ಲ ಎಂದು ಹೇಳಿದೆ.ಈಗಾಗಲೇ ಅಂಬಿಯ ಫೇಮಸ್ ಡೈಲಾಗ್ ನೋ ವೇ..ಚಾನ್ಸೇ ಇಲ್ಲಾ ಡೈಲಾಗ್ ನ್ನು ಅಮರ್ ಸಿನಿಮಾದಲ್ಲಿ ಬಳಕೆ ಮಾಡಲಾಗಿದೆ. ಅಂಬಿಯ ಕಣ್ಣನ್ನೇ ಹೋಲುವ ಅಭಿಷೇಕ್ ಕಣ್ಣಿನ ಮೂಲಕ ಅಪಾರ ಅಭಿಮಾನಿಗಳನ್ನು ಸೆಳೆದಿದ್ದಾರೆ. ಇನ್ನೂ ಟೀಸರ್ ನಲ್ಲೇ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿದ ಅಮರ್ ಡೈಲಾಗ್ ‘ಹೀರೋ ಥರಾ ಅಲ್ಲಾ, ಹೀರೋನೆ’ ಬಹಳ ಫ್ಯಾನ್ಸ್ ಗೆ ಹಿಡಿಸಿತು. ಒಳ್ಳೆ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ರು. ಇದೀಗ ಅಮರ್ ಸಿನಿಮಾ ಸಾಂಗ್ ಗೆ ಪರೋಕ್ಷವಾಗಿ ಅಂಬಿಯೇ ಕಾರಣವಾಗಿದ್ದಾರೆ.
Comments