ರಾಜಕೀಯದ ನಡುವೆಯೂ ಒಂದಾದ ದಚ್ಚು-ಕಿಚ್ಚ..!! ಅಭಿನಯ ಚಕ್ರವರ್ತಿಗೆ ಸಾಥ್ ಕೊಟ್ಟ ಡಿ-ಬಾಸ್.!!!
ಸ್ಯಾಂಡಲ್ ವುಡ್’ನಲ್ಲಿ ಸ್ಟಾರ್ ವಾರ್ ಅನ್ನೋದು ಕಾಮನ್.. ಒಂದು ಬಾರಿ ಜಗಳ ಮತ್ತೊಂದು ಬಾರಿ ಸಮಾಗಮ… ನಾಯಕರಿಬ್ಬರು ಒಟ್ಟಿಗೆ ಸೇರೋದು ಒಂಥರಾ ಖುಷಿಯ ವಿಚಾರ.. ಆದರೆ ಈ ಸ್ಟಾರ್ ವಾರ್ ನಿಂದಾಗಿ ಇಬ್ಬರು ಸ್ಟಾರ್ ನಾಯಕಿರು ಒಟ್ಟೊಟ್ಟಿಗೆ ಎಲ್ಲು ಕಾಣಿಸಿಕೊಳ್ಳವುದೆ ಇಲ್ಲ… ಅದೇ ರೀತಿ ದರ್ಶನ್ ಮತ್ತು ಸುದೀಪ್ ಕೂಡ… ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದು ತೀರಾ ಅಪರೂಪ.. ಒಂದೆಡೆ ಕಾಣಿಸಿಕೊಂಡರೂ ಅಲ್ಲೊಂದಿಷ್ಟು ಗಾಸಿಪ್ ಹುಟ್ಟೋದು ಕಾಮನ್.. ದಚ್ಚು ಕಿಚ್ಚನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.. ಇದೀಗ ಇವರಿಬ್ಬರು ಕೂಡ ಒಂದಾಗುತ್ತಿದ್ದಾರೆ ಹೇಗೆ ಅಂತೀರಾ..!! ಮುಂದೆ ಓದಿ.
ಚಂದನವನದ ದಿಗ್ಗಜರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್. ೨ ವರ್ಷಗಳ ಹಿಂದೆ ಕೆಲವು ಭಿನ್ನಾಭಿಪ್ರಾಯಗಳಿಂದ ದೂರ ಆಗಿರುವ ವಿಷಯ ಸಾಮಾನ್ಯವಾಗಿ ನಿಮಗೆಲ್ಲಾ ಗೊತ್ತೇ ಇದೆ.ಆದ್ರೆ ಇದೀಗ ಇವರಿಬ್ಬರು ಒಂದಾಗುತ್ತಾ ಇದ್ದಾರಂತೆ , ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾದಲ್ಲಿ ಡಿ ಬಾಸ್ ಕೂಡ ಇದಾರಂತೆ, ಹಾಗಾದರೆ ‘ಪೈಲ್ವಾನ್’ ಸಿನಿಮಾದಲ್ಲಿ ಡಿ ಬಾಸ್ ಅವರ ಪಾತ್ರ ಏನು ಏನಿರಬಹುದು ಅಂತ ಯೋಚನೆ ಮಾಡ್ತಿದ್ದೀರಾ..
ಎಸ್.. ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನೆಮಾವಾದ ‘ಪೈಲ್ವಾನ್’ ಸಿನಿಮಾದಲ್ಲಿ ಡಿ ಬಾಸ್ ಅವರು ೨೦ ಸೆಕೆಂಡ್ ಧ್ವನಿಯನ್ನ ಕೊಟ್ಟಿದ್ದಾರಂತೆ. ಇನ್ನು ‘ಪೈಲ್ವಾನ್’ ಸಿನಿಮಾದ ಟ್ರೈಲರ್ ನಲ್ಲಿ ಡಿ ಬಾಸ್ ಅವರ ಧ್ವನಿ ಇರಲಿದ್ದು, ಇದೆ ಯುಗಾದಿ ಹಬ್ಬದ ದಿನದಂದು ‘ಪೈಲ್ವಾನ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗ್ತಾಯಿದೆ. ಒಟ್ಟಿನಲ್ಲಿ ಇವರಿಬ್ಬರು ಮತ್ತೆ ಒಂದಾದರೆ ಸ್ಯಾಂಡಲ್ ವುಡ್ ನಲ್ಲಿ ಹವಾ ಶುರುವಾಗೋದು ಮಾತ್ರ ಗ್ಯಾರೆಂಟಿ.
Comments