ಮತ್ತೆ ಶುರುವಾಗ್ತಿದೆ ಕನ್ನಡದ ಮೋಸ್ಟ್ ಫೇವರೀಟ್ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್'...!
ಅಂದಹಾಗೇ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡಿಗರ ಮೋಸ್ಟ್ ಫೇವರಿಟ್ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್' ಮತ್ತೆ ಆರಂಭವಾಗುತ್ತಿದೆ. ನಟ ರಮೇಶ್ ಅರವಿಂದ್ ಅವರು ಈ ರಿಯಾಲಿಟಿ ಶೋ ಹೋಸ್ಟ್ ಮಾಡುತ್ತಿದ್ದು ಸಾಧಕರ ಚೇರ್ ನಲ್ಲಿ ಕನ್ನಡದ ಖ್ಯಾತ ಕಲಾವಿದರ ಜೀವನ ಗಾಥೆಯನ್ನು ತೋರಿಸಲಾಗುತ್ತಿತ್ತು. ಸದ್ಯ ಯಶಸ್ವಿಯಾಗಿ ಹಲವು ಎಪಿಸೋಡ್ ಮುಗಿಸಿದ್ದ ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತಿಯಲ್ಲಿ ಪ್ರಸಾರವಾಗುತ್ತಿದೆ.
ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ 'ವೀಕೆಂಡ್ ವಿತ್ ರಮೇಶ್' ಸದ್ಯ ಹೊಸ ಅವತಾರದಲ್ಲಿ ಮರಳಿ ಬರುತ್ತಿದ್ದಾನೆ. ವೀಕೆಂಡ್ ವಿತ್ ರಮೇಶ್ ಹೊಸ ವರ್ಸನ್ ಬಗ್ಗೆ ಕೇಳಿದಾಗ, ನಟ ರಮೇಶ್ ಅವರು ಪ್ರವಾಸ ಮುಗಿಸಿ ಮನೆಗೆ ಬಂದಾಗ ಆಗುವ ಖುಷಿಯ ಹಾಗೇ ಅನಿಸುತ್ತೆ ಎಂದು ಹೇಳಿದ್ದಾರೆ.ವೀಕೆಂಡ್ ವಿತ್ ರಮೇಶ್ ಜನರಲ್ಲಿ ಒಂದು ಕನಸನ್ನು ಬಿತ್ತಿದೆ. ಇಲ್ಲಿನ ಕೆಂಪು ಕುರ್ಚಿ ಯುವ ಜನರಲ್ಲಿ ಭರವಸೆಯನ್ನು ಮೂಡಿಸುತ್ತಿದೆ ಎಂದು ರಮೇಶ್ ಹೇಳಿದ್ದಾರೆ. ನಾವು ನಮ್ಮ ಪ್ರೇಕ್ಷಕರಿಗೆ ಕೆಲ ಸಂದೇಶದ ಜೊತೆಗೆ ಮನರಂಜನೆ ನೀಡಲು ಸಿದ್ಧರಾಗಿದ್ದೇವೆ. ಅತಿಥಿಗಳನ್ನು ಕರೆ ತರುವುದು, ಅವರ ಸಾಧನೆ, ಕೊಡುಗೆಗಳನ್ನು ಪ್ರಸ್ತುತಪಡಿಸುವ ರೀತಿ ಜನರ ಮನ ಗೆದ್ದಿದೆ. ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋ ಒಟ್ಟಾರೆ ಯಶಸ್ಸಿಗೆ ಇದೇ ಕಾರಣ. ವೀಕೆಂಡ್ ವಿತ್ ರಮೇಶ್ ನಲ್ಲಿ ಕಲಾವಿದರ ವೈಯಕ್ತಿಕ ಜೀವನದ ಬಗ್ಗೆ ತಿಳಿಸಲಾಗುತ್ತದೆ. ಆರ್ಟಿಸ್ಟ್ಗಳ ಬದುಕು ನೇರವಾಗಿ ಸಾರ್ವಜನಿಕರ ಲೈಫ್'ನ್ನು ಮುಟ್ಟುತ್ತದೆ. ಈ ಸೀಸನ್ ನಲ್ಲೂ ಸಾಕಷ್ಟು ವಿಶೇಷತೆಗಳಿರುತ್ತವೆ ಎಂದು ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ.
Comments