ಬಾಣಂತನದ ಆರೈಕೆ ನಡುವೆಯೂ ಮತ್ತೊಂದು ಕೆಲಸದಲ್ಲಿ ಬ್ಯುಸಿಯಾದ್ರು ಸ್ಯಾಂಡಲ್ವುಡ್ ಸಿಂಡ್ರೆಲಾ...!!!
ಅಂದಹಾಗೇ ಸ್ಯಾಂಡಲ್’ವುಡ್ ಸಿಂಡ್ರೆಲಾ ಸದ್ಯ ಮಗುವಿನ ಲಾಲನೆ, ಪಾಲನೆ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರುತ್ತಾರೆ ಮಿಸ್ಸಸ್ ರಾಮಾಚಾರಿ. ಏನಾದರೊಂದು ಫೋಟೋ ಹಾಕಿ ಸುದ್ದಿಯಲ್ಲಿರುವ ನಟಿ ರಾಧಿಕಾ ಪಂಡಿತ್ ಮಗುವಿನ ತಾಯಿಯಾಗಿದ್ದರೂ ಅಷ್ಟೇ ಬ್ಯೂಟಿ, ಗ್ಲಾಮರ್ ಉಳಿಸಿಕೊಂಡಿದ್ದಾರೆ ಎಬುದಕ್ಕೆ ಈ ಫೋಟೋಶೂಟೇ ಕಾರಣ.
ನಟಿ ರಾಧಿಕಾ ಪಂಡಿತ್ ರನ್ನು ರಾಕಿಂಗ್ ಸ್ಟಾರ್ ಯಶ್ ಪ್ರೀತಿಸಿ ಮದುವೆಯಾಗಿದ್ದಾರೆ. ಕಳೆದ ಡಿಸೆಂಬರ್ನಲ್ಲಷ್ಟೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಇಬ್ಬರು ಸ್ಯಾಂಡಲ್’ವುಡ್ನ ಮೋಸ್ಟ್ ಫೇವರೆಬಲ್ ಕಪಲ್. ಅಂದಹಾಗೇ ನಟ ಯಶ್ ಅವರು ಕೆಜಿಎಫ್-2 ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತ ರಾಧಿಕಾ ಪಂಡಿತ್ ಕೆಲ ತಿಂಗಳ ನಂತೆ ಮತ್ತೆ ಸ್ಯಾಂಡಲ್’ವುಡ್’ಗೆ ಎಂಟ್ರಿ ಆಗುತ್ತಿದ್ದಾರೆ. ಒಟ್ಟಾರೆ ಇತ್ತೀಚಿಗೆ ನಟಿ ರಾಧಿಕಾ ಅವರ ಆದಿ ಲಕ್ಷ್ಮಿ ಪುರಾಣ ಸಿನಿಮಾ ಟೀಸರ್ ಬಿಡುಗಡೆಯಾಯ್ತು. ಮತ್ತೆ ರಾಧಿಕಾರ ಹೊಸ ಲುಕ್ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಫೋಟೋಶೂಟ್ ಮಾಡಿಸಿಕೊಂಡಿರುವ ರಾಧಿಕಾ ನೋಡೋಕೆ ಬಳುಕೋ ಬಳ್ಳಿ ಥರಾ ಕಾಣ್ತಾರೆ.
ಒಂದು ಮಗುವಿನ ತಾಯಿಯಾಗಿದ್ದರೂ ಅದೇ ಗ್ಲಾಮರ್, ಲುಕ್ ನ್ನು ಉಳಿಸಿಕೊಂಡಿದ್ದಾರೆಂದು ಫೋಟೋಗಳೇ ಸಾಕ್ಷಿ ಹೇಳುತ್ತಿವೆ. ಹೇಳಿ ಕೇಳಿ ಬಾಣಂತನದ ಆರೈಕೆಯಲ್ಲಿರುವ ರಾಧಿಕಾ ಪಂಡಿತ್ ದೇಹದಲ್ಲಿ ಹಾರ್ಮೋನ್ ಗಳ ಏರು-ಪೇರಾಗಿರುತ್ತವೆ. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿಕೊಂಡು ರಾಧಿಕಾ ಹೊಸ ಸಿನಿಮಾಗೆ ರೆಡಿಯಾಗ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಒಂದ್ ಕಡೆ ಸ್ಟಾರ್ ಜೋಡಿ ಕೆಜಿಎಫ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರೇ, ಇತ್ತ ರಾಧಿಕಾ ಹೊಸ ಚಿತ್ರ ಶೂಟಿಂಗ್ ಗೆ ರೆಡಿಯಾಗ್ತಿರಬಹುದು. ಆದರೆ ಇನ್ನು ಅದು ಸಿನಿಮಾ ಫೋಟೋ ಶೂಟ್ ಅಥವಾ, ಬೇರೆ ಯಾವ ಜಾಹೀರಾತುವಿನಲ್ಲಿ ಕಾಣಿಸಿಕೊಳ್ತಾರೋ ಗೊತ್ತಿಲ್ಲ.
ರಾಧಿಕಾ ಮತ್ತೆ ಸಿನಿಮಾ ನಾಯಕಿಯಾಗಲು ಸಿದ್ದರಾಗಿದ್ದಾರೆ ಎಂದೆನಿಸುತ್ತದೆ. ಅವರ ಈ ಚಿತ್ರಗಳನ್ನು ನೋಡುತ್ತಿದ್ದರೆ ಅವರನ್ನು ಸದ್ಯದಲ್ಲೇ ಬೆಳ್ಳಿ ತೆರೆ ಮೇಲೆ ನೋಡುವ ಸೂಚನೆ ಸಿಗುತ್ತಿದೆ.
Comments