ಚಾಲೆಂಜಿಂಗ್ ಸ್ಟಾರ್ ಹಾದಿಯನ್ನೇ ತುಳಿದ ಕಾಮಿಡಿ ಕಿಂಗ್ ಚಿಕ್ಕಣ್ಣ
ಚಾಲೆಂಜಿಂಗ್ ಸ್ಟಾರ್ ಸದ್ಯ ಸ್ಯಾಂಡಲ್’ವುಡ್ ನಲ್ಲಿ ಮಾದರಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆ ದರ್ಶನ್ ಅವರು ಚಿತ್ರರಂಗದ ಹೊಸ ಕಲಾವಿದರ ಪಾಲಿಗೆ, ಯಂಗ್ ಡೈರೆಕ್ಟರ್’ಗಳಿಗೆ ಲಕ್ಕಿ ಹ್ಯಾಂಡ್ ಹೀರೋ ಅಂತಾನೇ ಫೇಮಸ್ಸು. ಅಷ್ಟೇ ಅಲ್ಲದೇ ದಚ್ಚು ಸಮಾಜ ಸೇವೆಗಳಲ್ಲಿಯೂ ಬಹಳ ಗುರುತಿಸಿಕೊಂಡಿದ್ದಾರೆ. ಕಾಡು , ಪ್ರಾಣಿಗಳೆಂದರೇ ದರ್ಶನ್ ಗೆ ಎಂಥಾ ಪ್ರೀತಿ ಎನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ಇದೀಗ ಅವರ ಹಾದಿಯನ್ನೇ ತುಳಿಯುತ್ತಿದ್ದಾರೆ ಕಾಮಿಡಿ ಸ್ಟಾರ್ ಚಿಕ್ಕಣ್ಣ.
ನಟ ಚಿಕ್ಕಣ್ಣ ಅಂತದ್ದೇನು ಮಾಡಿದ್ದಾರೆ ಎಂದು ಯೋಚಿಸ್ತಿದ್ದೀರಾ, ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಚಿಕ್ಕಣ್ಣ ಒಂದೊಳ್ಳೆ ಕೆಲಸ ಮಾಡಿದ್ದಾರೆ. ಚಿಕ್ಕಣ್ಣನಿಗೂ ಕಾಡು, ಪ್ರಾಣಿಗಳೆಂದರೇ ಸಿಕ್ಕಾಪಟ್ಟೆ ಪ್ರೀತಿಯಂತೆ. ದರ್ಶನ್, ಸೃಜನ್ ಅಂತೆಯೇ ಚಿಕ್ಕಣ್ಣ ಕೂಡ ಚಿಕ್ಕಣ್ಣ ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಪಡೆಯುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಈ ಚಿರತೆಯನ್ನು ಚಿಕ್ಕಣ್ಣ, ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ ಎನ್ನಲಾಗಿದೆ. ಅಂದಹಾಗೇ ಚಿರತೆಗೆ 35 ಸಾವಿರ ರೂ. ನೀಡಿ ದತ್ತು ಪಡೆದಿದ್ದಾರೆ. ಅದಕ್ಕೆ ಭೈರ ಎಂದು ನಾಮಕರಣ ಮಾಡಿದ್ದಾರೆ. ಚಿಕ್ಕಣ್ಣ ದತ್ತು ತೆಗೆದುಕೊಳ್ಳುತ್ತಿದ್ದುದ್ದನ್ನು ನೋಡಿ ಅವರ ಕೆಲವು ಜನ ಸ್ನೇಹಿತರು ಕೂಡ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಸ್ಯಾಂಡಲ್’ವುಡ್ನ ಕಲಾವಿದರ ಈ ಕೆಲಸ ನೋಡಿ ಜನ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ನಟ ಸೃಜನ್ ಅವರು ಜಿರಾಫೆ ಮರಿಯನ್ನು ದತ್ತು ತೆಗೆದುಕೊಂಡೇ, ದೇವರಾಜ್ ಕುಟುಂಬ ಚಿರತೆಯನ್ನು ದತ್ತು ಪಡೆದುಕೊಂಡಿತ್ತು.ಈ ವೇಳೆ ಜಿರಾಫೆ ಮರಿಗೆ`ತೂಗುಲೋಕ್’ ಎಂದು ಸೃಜನ್ ಲೋಕೇಶ್ ನಾಮಕರಣ ಮಾಡಿದ್ದರು. ಇದಕ್ಕೂ ಮೊದಲು ಇಬ್ಬರು ಸೇರಿ ದತ್ತು ಪಡೆದಿದ್ದ ಹುಲಿಗಳಿಗೆ ದರ್ಶನ್ `ವಿನೀಶ್’ ಎಂದೂ ಸೃಜನ್ `ಅರ್ಜುನ್’ ಅಂತಲೂ ಹೆಸರಿಟ್ಟಿದ್ದರು. ಮೃಗಾಲಯದಲ್ಲಿ ಈ ಹುಲಿಗಳ ವಿಹಾರ ಕಂಡು ಸೃಜನ್ ಸಂತಸ ವ್ಯಕ್ತಪಡಿಸಿದ್ದರು. ಹಾಸ್ಯ ನಟ ಕೀರ್ತಿ ಕೂಡ ಮೊಸಳೆಯನ್ನು ದತ್ತು ಸ್ವೀಕರಿಸಿದ್ದರು.
Comments