ತುಪ್ಪದ ಬೆಡಗಿಗಾಗಿ ಗೆಳೆಯರಿಬ್ಬರ ಮಾರಾಮಾರಿ : ಇದು ರೀಲ್ ಅಲ್ಲಾ…ರಿಯಲ್ …!!!
ಅಂದಹಾಗೇ ಸ್ಯಾಂಡಲ್ವುಡ್ ಹೀರೋಯಿನ್ ರಾಗಿಣಿ ದ್ವಿವೇದಿಗಾಗಿ ಇಬ್ಬರು ಸ್ನೇಹಿತರು ಹೊಡೆದಾಡಿಕೊಂಡಿ ರುವಘಟನೆ ನಡೆದಿದೆ. ಇದು ಯಾವುದೋ ಸಿನಿಮಾ ಕಥೆ ಯ್ಲಲ, ಬದಲಾಗಿ ರಿಯಲ್ ಆಗಿ ನಡೆದಿರುವಂತಹದ್ದು. ಗಾಸಿಪ್ ಅಥವಾ ಇನ್ನೆನ್ನೋ ಒಟ್ಟಾರೆ ರಾಗಿಣಿಯ ಹೆಸರು ಚಿತ್ರರಂಗದ ಅನೇಕ ಕಲಾವಿದರ ಹೆಸರು ಜೊತೆ ತಳುಕು ಹಾಕಿಕೊಂಡಿದೆ. ಸದ್ಯ ಮತ್ತೊಂದು ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಈ ಬಾರಿ ರಾಗಿಣಿ ಹೆಸರು ಉದ್ಯಮಿಗಳಿಬ್ಬರ ಹೆಸರಿನ ನಡುವೆ ಸಿಕ್ಕಿ ಹಾಕಿಕೊಂಡಿದೆ.
ಯಾವುದು ಸುಳ್ಳೋ ಯಾವುದು ಸತ್ಯವೋ ಗೊತ್ತಿಲ್ಲ ರಾಗಿಣಿಯವರ ಹೆಸರು ಮಾತ್ರ ಸಿಕ್ಕಾಪಟ್ಟೆ ಕಾಂಟ್ರೋವರ್ಸಿಗೆ ಒಳಗಾಗಿದೆ. ಸ್ಯಾಂಡಲ್ ವುಡ್ ನಟಿ ರಾಗಿಣಿಯವರ ಸಲುವಾಗಿ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ನಲ್ಲಿ ಆಕೆಯ ಹಾಲಿ ಮತ್ತು ಮಾಜಿ ಗೆಳೆಯರ ನಡುವೆ ಮಾರಾಮಾರಿ ನಡೆದಿದೆ. ಈಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ಹಿಂದೆ ಗಣಿ ಉದ್ಯಮಿ ಶಿವ ಪ್ರಕಾಶ್ ಎಂಬವರ ಜೊತೆ ರಾಗಿಣಿ ಆತ್ಮೀಯರಾಗಿದ್ದು, ಆದರೆ ಕಳೆದ ಕೆಲ ದಿನಗಳಿಂದ ಆರ್.ಟಿ.ಓ. ಅಧಿಕಾರಿ ರವಿಶಂಕರ್ ಎಂಬುವವರ ಜೊತೆ ಸಲುಗೆಯಿಂದಿದ್ದರು. ಅಲ್ಲದೆ ಶಿವ ಪ್ರಕಾಶ್ ಅವರನ್ನು ಅಷ್ಟಕ್ಕಷ್ಟೇ ಮಾತನಾಡಿಸುತ್ತಿದ್ದರೆಂದು ಹೇಳಲಾಗಿದೆ. ರಾಗಿಣಿ ಹಾಲಿ ಗೆಳೆಯ ರವಿಶಂಕರ್ ಜೊತೆ ಹೋಟೇಲ್’ಗೆ ಊಟಕ್ಕೆಂದು ಹೋಗಿದ್ದಾರೆ.
ಇದೇ ಹೋಟೇಲ್’ನಲ್ಲಿ ರಾಗಿಣಿ ಮಾಜಿ ಗೆಳೆಯ ಶಿವಪ್ರಕಾಶ್ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರೆಂದು ಹೇಳಲಾಗಿದೆ. ಅಂದಹಾಗೇ ರಾಗಿಣಿಯನ್ನು ರವೀಶಂಕರ್ ಜೊತೆ ಸಲುಗೆಯಿಂದಿದ್ದನ್ನು ನೋಡಿ ಶಿವಪ್ರಕಾಶ ನೆಟ್ಟಿಗೇರಿದೆ. ಇನ್ನು ಮುಂದೆ ರಾಗಿಣಿ ಜೊತೆ ಓಡಾಡದಂತೆ ರವಿಶಂಕರ್ ಅವರಿಗೆ ಧಮ್ಕಿ ಹಾಕಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಆ ಬಳಿಕ ಬಿಯರ್ ಬಾಟಲ್ ನಿಂದ ರವಿಶಂಕರ್ ಅವರ ತಲೆಗೆ ಹೊಡೆದಿದ್ದು, ಈ ಸಂಬಂಧ ಈಗ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ರಾಗಿಣಿ ಕೇಳೋಣವೆಂದರೆ ನಟಿ ಎಲ್ಲಿಗೆ ಹೋಗಿದ್ದಾರೋ ಗೊತ್ತಿಲ್ಲ. ಸದ್ಯ ಅವರು ದುಬೈಗೆ ಹೋಗಿದ್ದಾರೆಂದು ಹೇಳಲಾಗುತ್ತಿದೆ.
Comments