ಒನ್ಸ್‌ಮೋರ್ ಲಿಪ್ಲಾಕ್..!! ಹಾಟ್ ಚುಂಬನದಲ್ಲಿ ಮೈಮರೆತ ರಶ್ಮಿಕಾ ಮಂದಣ್ಣ..!!!

ಸ್ಯಾಂಡಲ್ ವುಡ್ ಬಹು ಬೇಡಿಕೆಯ ನಟಿಯರಲ್ಲಿ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಒಬ್ಬರು.. ಚಂದನವನಕ್ಕೆ ಕಿರಿಕ್ ಪಾರ್ಟಿಯ ಮೂಲಕ ಸಾನ್ವಿಯಾಗಿ ಎಂಟ್ರಿ ಕೊಟ್ಟ ಈಕೆ ಮಾಡಿದೆಲ್ಲಾ ಹಿಟ್ ಸಿನಿಮಾಗಳೇ..ಬಹು ಬೇಗ ಯಶಸ್ವಿ ನಾಯಕಿಯಾಗಿ ರಶ್ಮಿಕ ಗುರುತಿಸಿಕೊಂಡರು.. ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ ಕಿರಿಕ್ ಪಾರ್ಟಿಯ ಕರ್ಣ ನ ಜೊತೆ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡರು.. ನೋಡಿದವರೆಲ್ಲಾ ಇವರಿಬ್ಬರನ್ನು ನೋಡಿ ಮೇಡ್ ಫಾರ್ ಈಚ್ ಅದರ್ ಅಂದ್ರು..
ಆದ್ರೆ ಆ ಜೋಡಿಗೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ.. ಬಹುಬೇಗ ಬ್ರೇಕಪ್ ಮಾಡಿಕೊಂಡರು.. ವೀಕ್ಷಕರು ಹೇಳಿದ್ದು ಅವರು ಬ್ರೇಕ್ ಅಪ್ ಆಗಿದ್ದಕ್ಕೆ ಗೀತಗೋವಿಂದಂ ಸಿನಿಮಾನೆ ಕಾರಣ ಅಂತ.ಗೀತ ಗೋವಿಂದಂ ಸಿನಿಮಾದ ಲಿಫ್ ಲಾಕ್ ಸೀನ್ ಅವರಿಬ್ಬರು ಬೇರೆ ಬೇರೆ ಮಾಡಿತ್ತು ಅನ್ನೋದು ಕೆಲವರ ಮಾತಾಗಿದೆ..
ಆ ಸಿನಿಮಾದ ಮೂಲಕ ಎಲ್ಲರ ದಿಲ್ ಕದ್ದ ವಿಜಯ್-ರಶ್ಮಿಕಾ ಜೋಡಿ 'ಡಿಯರ್ ಕಾಮ್ರೇಡ್' ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಒಂದಾಗಿದ್ದಾರೆ. ಟಾಲಿವುಡ್ನ ಬಹುನಿರೀಕ್ಷಿತ ಈ ಸಿನಿಮಾದ ಟೀಸರ್, ತೆಲುಗು,ತಮಿಳು,ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿದೆ.
ಗೀತಗೋವಿಂದಂ ಜೋಡಿ ಮತ್ತೆ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಲಿಪ್ಲಾಕ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಟೀಸರ್ನಲ್ಲಿ ಮುದ್ದಾದ ಹಾಡೊಂದರ ಕೆಲ ಸಾಲುಗಳಿದ್ದು, ವಿಜಯ್ ರೌಡಿಗಳಿಗೆ ಹೊಡೆಯುತ್ತಾ ಕೊನೆಯಲ್ಲಿ ನಾಯಕಿ ರಶ್ಮಿಕಾಳಿಗೆ ಕಿಸ್ ಮಾಡುವುದರೊಂದಿಗೆ ಅದು ಕೊನೆಯಾಗುತ್ತದೆ. ಡಿಯರ್ ಕಾಮ್ರೇಡ್ ಸಿನಿಮಾ ಮೇ 31ರಂದು ತೆರೆ ಮೇಲೆ ಬರಲಿದೆ.. ಗೀತಗೋವಿಂದಂ ಜೋಡಿಯನ್ನು ಮೆಚ್ಚಿಕೊಂಡ ಅಭಿಮಾನಿಗಳು ಈ ಸಿನಿಮಾವನ್ನು ನೋಡುವುದಕ್ಕೆ ಸ್ವಲ್ಪ ದಿನ ಕಾಯಲೇಬೇಕು.
Comments