ಶೃತಿ ಹಾಸನ್ ಹುಡುಗ ಆಗಿದ್ರೆ ಈ ಸ್ಟಾರ್ ನಟಿಯನ್ನೆ ಮದುವೆ ಆಗ್ತಿದ್ರಂತೆ..!!

ಶೃತಿ ಹಾಸನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ತಮಿಳು ತೆಲುಗು ಚಿತ್ರರಂಗವನ್ನು ಆಳಿದ ನಟಿ.. ಇದೀಗ ಶೃತಿ ಹಾಸನ್ ಸುದ್ದಿಯಾಗಿದ್ದಾರೆ.. ಅರೇ ಹೌದಾ ಯಾಕೆ ಅಂತ ಯೋಚನೆ ಮಾಡುತ್ತಿದ್ದೀರಾ..ಶೃತಿ ಹಾಸನ್ ಒಂದು ವೇಳೆ ನಾನು ಹುಡುಗ ಆಗಿದ್ದರೆ ಈ ನಟಿ ಜೊತೆ ಡೇಟ್ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಯಾರಪ್ಪ ನಟಿ ಅಂತ ಅಂದುಕೊಳ್ಳುತ್ತಿದ್ದೀರಾ..!! ಅವರೇ ದಿ ಮೋಸ್ಟ್ ಬ್ಯೂಟಿಫುಲ್ ಗರ್ಲ್ ತಮನ್ನಾ ಭಾಟಿಯಾ..
ನಾನು ಹುಡುಗ ಆಗಿ ಹುಟ್ಟಿದ್ದರೆ, ನಾನು ತಮನ್ನಾ ಭಾಟಿಯಾನನ್ನು ಮದುವೆಯಾಗುತ್ತಿದ್ದೆ ಎಂದು ಬಹುಬಾಷಾ ನಟಿ ಶ್ರುತಿ ಹಾಸನ್ ಇಂಟರ್ವ್ಯೂ’ನ್ಲಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಶ್ರುತಿ ಹಾಸನ್ ಫೀಲ್ಮ್ ಫೇರ್ ಮ್ಯಾಗಜೀನ್‍ಗೆ ಸಂದರ್ಶನ ಕೊಟ್ಟಿದ್ದರು. ಈ ವೇಳೆ ಸಂದರ್ಶಕಿ ನೀವು ಹುಡುಗ ಆಗಿ ಹುಟಿದ್ದರೆ, ಯಾರನ್ನು ಡೇಟ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆಗ ಶ್ರುತಿ ಹಾಸನ್ ನಾನು ಹುಡುಗ ಆಗಿದ್ದರೆ ತಮನ್ನಾಳನ್ನು ಮದುವೆ ಆಗುತ್ತಿದ್ದೆ ಎಂದು ಉತ್ತರ ಕೊಟ್ಟಿದ್ದಾರೆ.
ಏಕೆಂದರೆ ಆಕೆ ಒಳ್ಳೆಯ ಹುಡುಗಿ ಹಾಗೂ ನಾನು ಆಕೆಯನ್ನು ಬಿಟ್ಟುಕೊಡಲು ಇಷ್ಟಪಡುವುದಿಲ್ಲ ಎಂದು ಶ್ರುತಿ ಹಾಸನ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಶ್ರುತಿ ಹಾಸನ್ ಪವನ್ ಕಲ್ಯಾಣ್ ಜೊತೆ ‘ಗಬ್ಬರ್ ಸಿಂಗ್’, ರಾಮ್ ಚರಣ್ ಜೊತೆ ‘ಎವಡು’ ಹಾಗೂ ಅಲ್ಲು ಅರ್ಜುನ್ ಜೊತೆ ‘ರೇಸ್ ಗುರಂ’ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು..
Comments