ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್’ನಿಂದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್..!!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಂಡಿದೆ.. ಇದರ ಸಂತಸದಲ್ಲಿರುವ ಅಪ್ಪು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ.. ಇದೇ ಮಾರ್ಚ್ 17ರಂದು ಪವರ್ ಸ್ಟಾರ್ ಬರ್ತಡೇ ಇದೆ.. ಅಭಿಮಾನಿಗಳು ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ..ಆದರೆ ಇದೇ ಹಿನ್ನಲೆಯಲ್ಲಿ ಅಪ್ಪು ದಯವಿಟ್ಟು ಮನೆಯ ಬಳಿ ಯಾರು ಬರಬೇಡಿ ಎಂದಿದ್ದಾರೆ.. ಅಪ್ಪು ಈ ವಿಷಯವಾಗಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರಿಗೆ ಮಾರ್ಚ್ 17ರಂದು 43ನೇ ಹುಟ್ಟುಹಬ್ಬದ ಸಂಭ್ರಮ. ಪುನೀತ್ ತಮ್ಮ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ತಮ್ಮ ಟ್ವಿಟ್ಟರಿನಲ್ಲಿ ಒಂದು ವಿಡಿಯೋ ಹಾಕಿ ಅಭಿಮಾನಿಗಳ ಜೊತೆ ಮನವಿ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ. ಮಾರ್ಚ್ 16ರ ರಾತ್ರಿ ನಾನು ಊರಿನಲ್ಲಿ ಇರುವುದಿಲ್ಲ. 17ನೇ ತಾರೀಖು ಬೆಳಗ್ಗೆ ಬರುತ್ತಿದ್ದೇನೆ. ಹಾಗಾಗಿ ದಯವಿಟ್ಟು ಯಾರೂ ಮನೆ ಹತ್ತಿರ ಬರಲು ಹೋಗಬೇಡಿ ಏಕೆಂದರೆ ನಾನು ಊರಿನಲ್ಲಿ ಇರುವುದಿಲ್ಲ. ಹಾರ, ಕೇಕ್ ಹಾಗೂ ಹೂಗುಚ್ಚಗಳನ್ನು ತರಬೇಡಿ. ಏಕೆಂದರೆ ನೀವು ನಿಮ್ಮ ಪ್ರೀತಿ, ವಿಶ್ವಾಸದಿಂದ ಹಣ ಖರ್ಚು ಮಾಡಿ ತಂದಿರುತ್ತೀರಿ.
ಆದರೆ ನೀವು ಇಲ್ಲಿ ಬಂದಾಗ ಅದು ನನಗೆ ಸೇರುತ್ತೊ, ಅಲ್ಲಿ ಇಲ್ಲಿ ಹಾರಾಡುತ್ತೋ ಗೊತ್ತಿಲ್ಲ. ಇದರಿಂದ ನೀವು ಬೇಸರ ಆಗುವುದು ಬೇಡ. ನೀವು ಎಲ್ಲಿಂದನೋ ಬಂದು ನನ್ನನ್ನು ನೋಡಿಕೊಂಡು ಹೋಗುವುದೇ ದೊಡ್ಡ ಉಡುಗೊರೆ. ದಯವಿಟ್ಟು ಮನೆಯ ಬಳಿ ಯಾರು ಬರಬೇಡಿ.. ನೀವು ನನಗಾಗಿ ಖರ್ಚು ಮಾಡುವ ಹಣವನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.
Comments