ಚಾಲೆಂಜಿಂಗ್ ಸ್ಟಾರ್ ಪುತ್ರನ ವಿಡಿಯೋ ಸಾಂಗ್ ರಿಲೀಸ್ …!!! ಅಪ್ಪ-ಮಗನ ಜುಗಲ್ ಬಂಧಿಗೆ ಅಭಿಮಾನಿಗಳು ಫಿದಾ....
ಅಂದಹಾಗೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ಯಜಮಾನ ಬಿಡುಗಡೆಯಾಗಿ 15 ದಿನಗಳಾಗಿವೆ. ಅಭಿಮಾನಿಗಳು ಸಿನಿಮಾಗೆ ಗುಡ್ ರೆಸ್ಪಾನ್ಸ್ ನೀಡಿದ್ದಾರೆ. ದರ್ಶನ್ ಜೊತೆಗೆ ಪುತ್ರ ವಿನೀಶ್ ಕೂಡ ಯಜಮಾನ ಸಿನಿಮಾದಲ್ಲಿ ನಟಿಸಿ ಸುದ್ದಿಯಾಗಿದ್ದರು. ಥಿಯೇಟರ್ ನಲ್ಲಿ ಅಪ್ಪನ ಕಟೌಟ್ ಜೊತೆ ಪುತ್ರ ವಿನೀಶ್ ಕಟೌಟ್ ಕೂಡ ಎತ್ತರದಲ್ಲಿ ತಲೆ ಎತ್ತಿತ್ತು.
ಅಪ್ಪ-ಮಗನ ಜುಗಲ್ ಬಂಧಿಯ ಸಿನಿಮಾ ಹಾಡು ಇದೀಗ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.ಈ ಬಗ್ಗೆ ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ನಿಮ್ಮ ಪ್ರೀತಿಯ `ಯಜಮಾನ’ ಚಿತ್ರದ ಶಿವನಂದಿ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ನೀವು ತೋರಿರುವ ಪ್ರೀತಿ-ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿ” ಎಂದು ಟ್ವೀಟ್ ಮಾಡಿ ವಿಡಿಯೋ ಲಿಂಕ್ ಹಾಕಿದ್ದಾರೆ.ಅಂದಹಾಗೇ ಶಿವನಂದಿ ಲಿರಿಕಲ್ ಹಾಡು ಮಾತ್ರ ಬಿಡುಗಡೆಯಾಗಿತ್ತು. ಶಿವನಂದಿ ಹಾಡಿಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿತು. ಲಿರಿಕಲ್ ಸಾಂಗ್ ಗೆ ಫಿದಾ ಆದ ದಚ್ಚು ಅಭಿಮಾನಿಗಳು ವಿಡಿಯೋ ಸಾಂಗ್ ರಿಲೀಸ್ ನಿಂದಾಗಿ ಭಾರೀ ಖುಷಿಯಲ್ಲಿದ್ದಾರೆ. ಈ ಹಾಡಿನಲ್ಲಿ ಸ್ಯಾಂಡಲ್‍ವುಡ್ ನಟರಾದ ಪ್ರಜ್ವಲ್ ದೇವರಾಜ್, ಪ್ರೇಮ್, ವಿನೋದ್ ಪ್ರಭಾಕರ್, ಶರಣ್, ಚಿರಂಜೀವಿ ಸರ್ಜಾ ಹಾಗೂ ದರ್ಶನ್ ಅವರ ಮಗ ವಿನೀಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.ದರ್ಶನ್ ಮತ್ತು ಪುತ್ರ ವಿನೀಶ್ ಅವರು ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೇ ವಿನೀಶ್ ಸ್ಯಾಂಡಲ್’ವುಡ್ ಗೆ ಅಧಿಕೃತವಾಗಿ ಎಂಟ್ರಿ ಕೊಡುತ್ತಿದ್ದಾರೆ.ಯಜಮಾನ ಚಿತ್ರಕ್ಕೆ ದರ್ಶನ್‍ಗೆ ನಾಯಕಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ನಟಿಸಿದ್ದಾರೆ.
Comments