14 ವರ್ಷಗಳ ನಂತರ ಮತ್ತೆ ಸ್ಯಾಂಡಲ್’ವುಡ್ ನತ್ತ ಮುಖ ಮಾಡಿದ ಬಿಗ್ ಬಿ…!!

ಕನ್ನಡದಲ್ಲಿ ಬಾಲಿವುಡ್ ಸ್ಟಾರ್ ನಟರ ಆಗಮನವಾಗುತ್ತಿದೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳೆಂದರೆ ಮೂಗು ಮುರಿಯುತ್ತಿದ್ದ ಬೇರೆ ಭಾಷೆ ಸ್ಟಾರ್ ನಟರು, ಇಂದು ಕನ್ನಡ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಈಗಾಗಲೇ ಬಿಗ್ ಬಿ ಅಮಿತಾಬ್ ಬಚ್ಚನ್ ಕನ್ನಡದ ಸಿನಿಮಾ ಅಮೃತಧಾರೆ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ ಮತ್ತೊಂದು ಬಿಗ್ ಬಜೆಟ್ ಮೂವಿಯಲ್ಲಿ ನಟಿಸೋಕೆ ಬರುತ್ತಿದ್ದಾರೆ. ಅಂದಹಾಗೇ ಅವರು ಅದರಲ್ಲಿ ಯಾವ ಪಾತ್ರ ನಿರ್ವಹಿಸುತ್ತಾರೆ. ಆ ಸಿನಿಮಾ ಸ್ಟಾರ್ ಹೀರೋ-ಹೀರೋಯಿನ್ ಯಾರು ಅಂತಾ ಯೋಚಿಸ್ತಿದ್ದೀರಾ…?! ಅಮಿತಾಬ್ ಈ ಸಿನಿಮಾದಲ್ಲಿ ನಟಿಸುವ ಬದಲು ಹಾಡೊಂದನ್ನು ಹಾಡುತ್ತಿದ್ದಾರೆ.
ನಟ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿರುವ ಹಾಗೂ ನಟಿ ಪಾರೂಲ್ ಯಾದವ್ ನಟಿಸುತ್ತಿರುವ ‘ಬಟರ್ ಫ್ಲೈ’ ಚಿತ್ರದ ಮೂಲಕ ಬಿಗ್-ಬಿ ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿಕೊಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಈ ಚಿತ್ರದ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯನ್ನು ಕೂಡ ಹೊಂದಿದೆ. ಸಿಂಗಿಂಗ್ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿರುವ ಅಮಿತಾಬ್ ಗೆ ಗಾಯಕಿ ವಿದ್ಯಾ ವೋಕ್ಸ್ ಜೊತೆಯಾಗಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದಿರೋದು ಮಾಸ್ಟರ್ ಹೀರಣಯ್ಯ. ಅಮಿತಾಬ್ ಹಾಡಿರುವ ಹಾಡಿನ ಶೂಟಿಂಗ್ ಪ್ಯಾರೀಸ್ ನಲ್ಲಿ ನಡೆಯುತ್ತಿದೆ.. ಗಣೇಶ್ ಆಚಾರ್ಯ ಈ ಹಾಡಿಗೆ ಕೋರಿಯೋಗ್ರಾಫಿ ಮಾಡಿದ್ದಾರೆ.ಅಂದಹಾಗೇ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಸಿನಿಮಾದಲ್ಲಿ ಬಿಗ್ ಬಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ 14 ವರ್ಷಗಳ ನಂತರ ಮತ್ತೆ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.
Comments