ಕಲಾವಿದರ ಸಂಘದಿಂದ ರೆಬಲ್ ಸ್ಟಾರ್ ಅಂಬರೀಶ್ ಬಿರುದು ಮಿಸ್ಟೇಕ್..!

ಸ್ಯಾಂಡಲ್’ವುಡ್ ದಿಗ್ಗಜರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಕೂಡ ಒಬ್ಬರು.. ರೆಬಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನೆಲ್ಲಾ ಅಗಲಿ ತಿಂಗಳುಗಳೆ ಕಳೆದು ಹೋದವು.. ಅವರ ಸಾವಿನ ಸುದ್ದಿ ಕೇಳಿ ಇಡೀ ರಾಜ್ಯವೇ ಕಂಬನಿ ಮಿಡಿಯಿತು.. ಅಂಬಿ ಅಗಲಿಕೆಯಿಂದ ಸಿನಿರಂಗ ಅನಾಥವಾಯಿತು.. ಇದೀಗ ಸ್ಯಾಂಡಲ್ ವುಡ್ ದಿಗ್ಗಜ ರೆಬೆಲ್ ಸ್ಟಾರ್ ಅಂಬರೀಶ್ ಬಿರುದನ್ನು ಕಲಾವಿದರ ಸಂಘ ತಪ್ಪು ಬರೆದಿದ್ದಾರೆ..
ಅಂಬರೀಶ್ ಹೆಸರಿನಲ್ಲಿ ಕಲಾವಿದರ ಸಂಘ ಮಾಡಬೇಕು ಎಂಬ ಆಸೆಯಿಂದ ಕಲಾವಿದರ ಸಂಘ ಮಾಡಲಾಗಿದೆ.. ಕನ್ನಡ ಚಿತ್ರರಂಗದ ಕಲಾವಿದರಿಗೊಂದು ಸಂಘ ಮಾಡಬೇಕೆಂದು ಕನಸು ಹೊತ್ತವರು ಡಾ. ರಾಜ್ ಕುಮಾರ್ ಅದನ್ನು ನನಸು ಮಾಡಲು ಕಲಾವಿದರು ಮುಂದಾಗಿದ್ದಾರೆ,, ರೆಬೆಲ್ ಸ್ಟಾರ್ ಅಂಬರೀಶ್ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿರುವ ಚಾಮರಾಜಪೇಟೆಯಲ್ಲಿ ಒಂದು ಕಲಾವಿದರ ಸಂಘ ನಿರ್ಮಾಣ ಮಾಡಿ ರಾಜ್ ಕನಸನ್ನು ನನಸು ಮಾಡಿದ್ದರು. ಆದರೆ ಇಲ್ಲೊಂದು ಎಡವಟ್ಟಾಗಿದೆ ಅದೂ 'ರೆಬೆಲ್ ಸ್ಟಾರ್ ಅಂಬರೀಶ್ ಹೋಗಿ 'ರೇಬಲ್ ಸ್ಟಾರ್ ಅಂಬರೀಶ್' ಎಂದು ಮಿಸ್ಟೇಕ್ ಮಾಡಲಾಗಿದೆ. ತಪ್ಪು ಮಾಡದೇ ಇರೋರು ಯಾರ್ ಹೇಳಿ.. ಬೈ ಮಿಸ್ ಆಗಿ ಬಿಟ್ಟಿದೆ.. ಅದನ್ನ ದೊಡ್ಡದು ಮಾಡದೆ ಅದನ್ನು ಸರಿಪಡಿಸಲು ಇದೀಗ ಕಲಾವಿದರು ಮುಂದಾಗಿದ್ದಾರೆ.
Comments