ಆ ಗಾಯಕನನ್ನು ನೋಡಲು, ಸೆಲ್ಫಿ ಕೇಳಲು ಮುಗಿ ಬಿದ್ದ ಜನ..!!!

ಅಂದಹಾಗೇ ಆ ಗಾಯಕನನ್ನು ನೋಡಲು ಬಿಸಿಲ ನಾಡಿನ ಜನ ಮುಗಿಬಿದ್ದಿದ್ದರು. ತಾವು ಅವರಿಗೆ ಶೇಕ್’ಹ್ಯಾಂಡ್ ನೀಡಬೇಕು, ಸೆಲ್ಫಿ ತೆಗೆದುಕೊಳ್ಳ ಬೇಕು ಎಂದು ಒಬ್ಬರ ಮೇಲೆ ಒಬ್ಬರು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂದಿದ್ದು ರಾಯಚೂರಿನಲ್ಲಿ. ಅಂದಹಾಗೇ ಸರಿಗಮಪ ಮೂಲಕ ಮನೆ ಮನೆ ಮಾತಾದ ಆ ಸಿಂಗರ್ ಇದೀಗ ಕರ್ನಾಟಕದ ಮನೆ ಮಗನಾಗಿದ್ದಾರೆ. ಎಲ್ಲೋ ಹಳ್ಳಿ ಗುಡ್ಡದಲ್ಲಿ ಕೂತು ಹಾಡುತ್ತಿದ್ದ ಕೋಗಿಲೆಗೆ ವೇದಿಕೆ ಸಿಕ್ಕಿದ್ದಾಗಿದೆ. ಹೌದು..ಅವರೇ ಹನುಮಂತಪ್ಪ.
ಜಾನಪದ ಹಾಡಿನ ಶೈಲಿ ಮೂಲಕ ಸರಿಗಮಪದಲ್ಲಿ ರನ್ನರ್ ಆಗಿ ಆಯ್ಕೆಯಾದ ಹನುಮಂತಪ್ಪನನ್ನು ನೋಡಲು ಜನವೋ ಜನ. ರಾಯಚೂರಿನ ಮಸ್ಕಿಯಲ್ಲಿ ನಡೆದ ಸಂತ ಸೇವಾಲಾಲ್ ಮಹಾರಾಜ್ ಜಯಂತಿಗೆ ಮುಖ್ಯ ಅತಿಥಿಯಾಗಿ ಬಂದಿದ್ದ ಹನುಮಂತಣ್ಣನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಹನುಮಂತನಿಗೆ ಲಂಬಾಣಿ ಸಮುದಾಯದವರು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅವರದೇ ವೇಷ ಭೂಷಣ ತೊಡಿಸುವುದರ ಮೂಲಕ ಹನುಮಂತನನ್ನು ಕೊಂಡಾಡಿದ್ರು. ಮಸ್ಕಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆದ ಬಂಜಾರ್ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಹನುಮಂತನಿಗೆ ಕೈಬೀಸಿ ಜನ ಅಭಿಮಾನ ಮೆರೆದು ಸೆಲ್ಫಿಗಾಗಿ ಮುಗಿಬಿದ್ದರು.
ನೆತ್ತಿ ಸುಡುವ ಬಿಸಿಲಿನಲ್ಲಿ ಮಕ್ಕಳು, ಮಹಿಳೆಯರೆನ್ನದೇ ಜನ ಕಾದು ಕುಳಿತು ಹನುಮಂತನನ್ನು ನೋಡಲು ಕಾತುರರಾಗಿದ್ದರು. ಅಂದಹಾಗೇ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹನುಮಂತಪ್ಪ ಕಾರ್ಯಕ್ರಮದಲ್ಲಿ ತಮ್ಮದೇ ಶೈಲಿಯ ಹಾಡಿನ ಮೂಲಕ ಜನರನ್ನು ರಂಜಿಸಿದ್ರು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಕನ್ನಡದ ಸಿಂಗಿಗ್ ರಿಯಾಲಿಟಿ ಶೋ ಸರಿಗಮಪ ಸೀಸನ್-15 ರಲ್ಲಿ ಹನುಮಂತಪ್ಪ ತೀರ್ಪುಗಾರರ ಮನಸ್ಸನ್ನ ಗೆದ್ದಿದ್ದರು. ತಮ್ಮದೇ ಹಾಡಿನ ಶೈಲಿಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ಅವರು ಸೀಸನ್-15 ರಲ್ಲಿ ರನ್ನರ್ಅಪ್ ಆಗಿದ್ದರು.
Comments