ಬಿಕಿನಿ ತೊಟ್ಟುಕೊಳ್ಳಲು ನಿನ್ನ ಪತ್ನಿಯನ್ನು ಬಿಟ್ಟಿದ್ದೀಯ, ನಾಚಿಕೆ ಆಗಲ್ವಾ ನಿನಗೆ ಎಂದಿದ್ದಕ್ಕೆ ಸಿಡಿದ್ದೆದ್ದ ನಟಿ…?!!!

14 Mar 2019 4:57 PM | Entertainment
1034 Report

ಮದುವೆಯಾಗಿ ಒಂದು ಮಗುವಾದ್ರೂ ಅದೇ ಬ್ಯೂಟಿ, ಗ್ಲಾಮರ್ ಉಳಿಸಿಕೊಂಡಿದ್ದಾರೆ ಈ ನಟಿ. ಈಗಲೂ ಅದೇ ಮಾದಕತೆ ಹೊಂದಿರುವ ನಟಿ ಕಂಡು ಒಂದಷ್ಟು ತಾರೆಯರು ನನಗೆ ಹೊಟ್ಟೆ ಕಿಚ್ಚಾಗುತ್ತದೆ ಎಂದು ಕರೀನಾ ಸೌಂದರ್ಯ ಬಗ್ಗೆ ಕೊಂಡಾಡಿದ್ರು. ಆದರೆ ಇದೀಗ ಆ  ಬಾಲಿವುಡ್’ನ ಬ್ಯೂಟಿ ಕರೀನಾ ಕಪೂರ್ ಸದ್ಯ ಕೆಲವರ ವಿರುದ್ಧ ಸಿಕ್ಕಾಪಟ್ಟೆ ರಾಂಗ್ ಆಗಿದ್ದಾರೆ. ಕರೀನಾ ಈ ಬಾರಿ ಕೆಲವರ ವಿರುದ್ಧ ರೊಚ್ಚಿಗೆದ್ದಿದ್ಯಾಕೆ…? ತನ್ನ ಬಗ್ಗೆ ಮಾತನನಾಡೋಕೆ, ನೀವ್ಯಾರು..? ನಿಮ್ಮದೆಷ್ಟು ಇದ್ಯೋ ಅಷ್ಟನ್ನು ನೋಡ್ಕೊಳ್ಳಿ ಎನ್ನುವ ಹಾಗೇ ಕೋಪಗೊಂಡಿದ್ದು ಯಾರ ವಿರುದ್ಧ….  ನನ್ನ ಬಗ್ಗೆ ಪತಿ ಸೈಫ್ ಅಲಿಖಾನ್ ಜೊತೆ ಏನು  ಕೇಳ್ತೀರಾ…ನನ್ನನ್ನೇ ಕೇಳಿ ಉತ್ತರ ಕೊಡ್ತೀನಿ ಎಂದು ರಾಂಗ್ ಆಗಿದ್ದಾರೆ. ಆಗಿದ್ದಾದ್ರೂ ಏನು..? ಯಾಕೆ ಕರೀನಾ ಸಿಟ್ಟಾಗಿದ್ದಾರೆ. ಕಾರಣ ಇಷ್ಟೆ….

‘ಬಿಕಿನಿ ತೊಟ್ಟ ಪತ್ನಿ ಕರೀನಾ ಅವರ ಫೋಟೋವೊಂದನ್ನು ತಮ್ಮ ಟ್ವಿಟ್ಟರ್’ನಲ್ಲಿ ಸೈಫ್ ಅಲಿಖಾನ್ ಹಂಚಿಕೊಂಡಿದ್ದರು. ಈ ಫೋಟೋಗೆ ವ್ಯಕ್ತಿಯೊಬ್ಬರು ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ.ಏನು ಹೇಳಬೇಕು ಸೈಫ್ ಆಲಿ ಖಾನ್ ನಿನಗೆ? ಹೆಂಡತಿಗೆ ಬಿಕಿನಿ ತೊಟ್ಟುಕೊಳ್ಳಲು ಬಿಟ್ಟಿದ್ದೀಯಲ್ಲಾ?’ ಎಂದು ಟ್ವೀಟ್ ಮಾಡಿದ್ದರು. ಇದೀಗ ಈ ಟ್ವೀಟ್ಗೆ ಕರೀನಾ ಉತ್ತರ ಕೊಟ್ಟಿದ್ದಾರೆ.  ನನ್ನಿಷ್ಟ ಬಂದ ಡ್ರೆಸ್ ಹಾಕೋಕೆ ಯಾರ ಅಪ್ಪಣೆ ಬೇಕಾಗಿಲ್ಲ, ನಾನು ಬಿಕಿನಿ ತೊಡೋದನ್ನು ತಡೆಯಲು ಸೈಫ್ ಯಾರು. ನನ್ನ ಸೈಫ್ ಸಂಬಂಧ ಆಳವಾಗಿದೆ. ನಾನು ಬಿಕಿನಿ ತೊಟ್ಟಿದ್ದೇನೆ ಎಂದ್ರೆ ಅದಕ್ಕೆ ಅರ್ಥವಿರುತ್ತದೆ ಎಂದು ತಿರುಗೇಟು ನೀಡಿದ್ದಾರೆ.  ನೀನು ಬಿಕಿನಿ ತೊಡಬೇಡ ಹಾಗೇ ಇರು, ಹೀಗೆ ಇರು ಎಂದು ಹೇಳಲು ನನ್ನ ಸೈಫ್ ಸಂಬಂಧ ಚೀಪ್ ಅಲ್, ನಮ್ಮಬ್ಬರ ರಿಲೇಶನ್ ಶಿಪ್ ಆಳವಾಗಿದೆ. ನಾವಿಬ್ಬರು ಪರಸ್ಪರ ವಿಶ್ವಾಸ  ನಂಬಿಕೆ ಇಟ್ಟುಕೊಂಡಿದ್ದೇವೆ ಎಂದು ಖಾರವಾಗಿ ಟ್ರೋಲಿಗರ ವಿರುದ್ಧ ಸಿಡಿದೆದ್ದಿದ್ದಾರೆ.

ಅಂದಹಾಗೇ ಸೈಫ್ ಬಗ್ಗೆ ಮಾತನಾಡಿದ ಆ ಟ್ರೋಲಿಗರಿಗೆ ಸಿಕ್ಕಾಪಟ್ಟೆ ಖಾರವಾಗಿಯೇ ಉತ್ತರ ಕೊಟ್ಟಿದ್ದಾರೆ.  ಸೈಪ್ ನಿನ್ನ ಹೆಂಡತಿಯನ್ನು ಬಿಕಿನಿ ತೊಡಲು ಬಿಟ್ಟಿದ್ದೀಯಾ, ನಿನಗೆ ನಾಚಿಕೆ ಆಗುವುದಿಲ್ಲವೇ, ಪತ್ನಿ ಬಿಕಿನಿ ಹಾಕಿ ತಿರುಗುತ್ತಿದ್ದರೆ ನೀನು ನೋಡಿ ಮಜಾ ಮಾಡುತ್ತಿದ್ದೀಯಾ ಎನ್ನುವ ಟ್ರೋಲ್‌ಗೆ ಕರೀನಾ ಬರೋಬ್ಬರಿ ತಿರುಗೇಟು ನೀಡಿದ್ದಾಳೆ. ಅಷ್ಟೇ ಅಲ್ಲಾ ಕರೀನಾಗೆ  ಮತ್ತೊಬ್ರು ಟ್ರೊಲ್ ಮಾಡಿ, ನೀವು ಒಬ್ಬ ತಾಯಿಯಾಗಿ ತೈಮೂರ್’ನನ್ನು ಎತ್ತಿ ಕೊಳ್ಳುವುದಿಲ್ಲವೆಂದಿದ್ದಕ್ಕೆ ಕರೀನಾ,  ನಿಮ್ಮ ಮೆಸೇಜ್’ನಿಂದ ನಿಮ್ಮ ನಡತೆ ಹೇಗಿದೆ ಎಂದು ಗೊತ್ತಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ತಾಯಿಯಾದ ಮೇಲೆ ನಮ್ಮ ಜೀವನ ಮುಗಿದುಹೋಗುತ್ತಾ? ಜಿಮ್‌ಗೆ ಹೋಗದಿರು.ಗೆಳೆಯರೊಂದಿಗೆ ಮಾತನಾಡದಿರು ಎನ್ನುವ ಹೇಳಿಕೆಗಳಿಗೆಲ್ಲಾ ನಾನು ಸೊಪ್ಪು ಹಾಕುವುದಿಲ್ಲ ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಟಾಂಗ್ ನೀಡಿದ್ದಾಳೆ.

Edited By

Kavya shree

Reported By

Kavya shree

Comments