ಅಲ್ಲಿಗೆ ಹೋಗುವ ಮುನ್ನ ಅಭಿಮಾನಿಗಳಲ್ಲಿ ರಿಕ್ವೆಸ್ಟ್ ಮಾಡಿಕೊಂಡ್ರು ಕರ್ನಾಟಕದ ಕ್ರಶ್…!!!
ಅಂದಹಾಗೇ ಕರ್ನಾಟಕದ ಕ್ರಶ್ ರಶ್ಮಿಕಾ, ತಮ್ಮ ಸಿನಿಮಾ ಕೆರಿಯರ್’ನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಈಗಾಗಲೇ ಕನ್ನಡ ಸಿನಿಮಾ ಕ್ಷೇತ್ರದಲ್ಲಷ್ಟೇ ಅಲ್ಲಾ, ತೆಲುಗಿನಲ್ಲೂ ಕೂಡ ಬಹು ಬೇಗ ಹೆಸರು ಮಾಡಿದ್ರು. ಅಷ್ಟೇ ವೇಗವಾಗಿ ಗಾಸಿಪ್’ಗೂ ಒಳಗಾದ್ರು. ಅದೇನೆ ಇರಲಿ. ರಶ್ಮಿಕಾ ಅಭಿನಯದ ಯಜಮಾನ ಸಿನಿಮಾ ಕನ್ನಡದಲ್ಲಿ ಸಕ್ಸಸ್ ಆದ ನಂತರ ಮತ್ತೆ ಅವರ ಖ್ಯಾತಿ ಹೆಚ್ಚಾಗುತ್ತಿದೆ. ಕೈ ತುಂಬಾ ಅವಕಾಶಗಳು ರಶ್ಮಿಕಾರನ್ನು ಅರಸಿ ಬರುತ್ತಿವೆ. ಈಗ ಅವರಿಗೆ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಆಗಿದೆ. ಅಷ್ಟೇ ಅಲ್ಲಾ, ಸ್ಟಾರ್ ಹೀರೋಗಳು ರಶ್ಮಿಕಾ ಜೊತೆ ಆ್ಯಕ್ಟ್ ಮಾಡಲು ಮುಂದೆ ಬರುತ್ತಿದ್ದಾರೆ.
ಇದೀಗ ಮತ್ತಷ್ಟು ಖ್ಯಾತಿಗಳಿಸಲು ಕಾಲಿವುಡ್' ಗೆ ಎಂಟ್ರಿ ಕೊಡುತ್ತಿದ್ದಾರೆ. ಆ ಮೂಲಕ ಅಲ್ಲಿಗೆ ಹೋಗುವ ಮುನ್ನ ತಮ್ಮ ಅಭಿಮಾನಿಗಳಲ್ಲಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಈಗಾಗಲೇ ತಮಿಳಿಗೆ ರಶ್ಮಿಕಾ ಹೋಗುತ್ತಿದ್ದಾರೆಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿತ್ತು. ಅದು ಕನ್ನಡ ಹುಡುಗಿಯ ಹಿರಿಮೆ ಎಂದು ಕೊಂಡಾಡಿದ್ರು. ಆದರೆ ಆ ಸುದ್ದಿ ಅಧಕೃತವಾಗಿರಲಿಲ್ಲ. ಇದೀಗ ರಶ್ಮಿಕಾ ತಾವೇ ಖುದ್ದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಟ ಕಾರ್ತಿ ಜೊತೆ ತಾವು ಅಭಿನಯಿಸುತ್ತಿರುವ ತಮಿಳಿನ ಮೊದಲ ಸಿನಿಮಾ ಮುಹೂರ್ತದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಆ ಮೂಲಕ ಫಸ್ಟ್ ಟೈಮ್ ತಮಿಳಿಗೆ ಎಂಟ್ರಿಕೊಡುತ್ತಿದ್ದಾರೆ.
ಹಾಗಾಗಿಯೇ ತಮಿಳಿನ ಮೊದಲ ಸಿನಿಮಾದಲ್ಲಿ ಕೆಲಸ ಮಾಡುವ ಮುನ್ನ ತಮ್ಮ ಫ್ಯಾನ್ಸ್, ಫಾಲೋಯರ್ಸ್ಗೆ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.‘ಇದುವರೆಗೆ ನನಗೆ ಕನ್ನಡ ಮತ್ತು ತೆಲುಗು ಜನತೆ ಪ್ರೋತ್ಸಾಹ ನೀಡಿದ್ದೀರಿ. ಎಲ್ಲರೂ ನನಗೆ ಆಗಾಗ ತಮಿಳಿಗೆ ಯಾವಾಗ ಬರ್ತೀರಿ? 2019 ರಲ್ಲಿ ಬರ್ತೀರಾ ಎಂದು ಕೇಳುತ್ತಲೇ ಇದ್ದಿರಿ.. ಕೊನೆಗೂ ನಾನು ಬಂದೆ, ನನ್ನನ್ನು ಹೀಗೆ ಪ್ರೋತ್ಸಾಹಿಸಿ, ನಿಮ್ಮ ಮಗಳಂತೆ ಕಾಣಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ತಂಡದೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಖುಷಿಯಾಗುತ್ತಿದೆ. ಪ್ರೀತಿಯಿರಲಿ’ ಎಂದು ರಶ್ಮಿಕಾ ಅಭಿಮಾನಿಗಳಿಗೆ ಸಂದೇಶ ಬರೆದಿದ್ದಾರೆ. ಒಟ್ಟಾರೆ ಈಗಾಗಲೇ ಎರಡು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ ಖ್ಯಾತಿ ಗಳಿಸಿರುವ ರಶ್ಮಿಕಾ ತಮಿಳಿನಲ್ಲೂ ಬಹು ಬೇಡಿಕೆ ನಟಿಯಾಗಿ ಉಳಿಯುತ್ತಾರಾ ಎಂದು ಕಾದು ನೋಡಬೇಕಾಗಿದೆ.
Comments