ಪುಟ್ಟಗೌರಿ ರಂಜನಿ ಮೊದಲು ಆ್ಯಕ್ಟರ್ ಈಗ ಡೈರೆಕ್ಟರ್…!!

ಕನ್ನಡ ಕಿರುತೆರೆಯಲ್ಲಿ ಸುಮಾರು 6 ವರ್ಷಗಳಿಂದಲೂ ಕೂಡ ಪುಟ್ಟಗೌರಿ ಮದುವೆ ಧಾರವಾಹಿ ಪ್ರಸಾರವಾಗುತ್ತಿದೆ.. ಆ ಧಾರವಾಹಿಗೆ ಅಭಿಮಾನಿ ಬಳಗ ದೊಡ್ಡದೇ ಇದೆ..ಮಾಡೋ ಕೆಲಸವನ್ನೆಲ್ಲಾ ಬಿಟ್ಟು ಮನೆಯ ಹೆಣ್ಣು ಮಕ್ಕಳು ಟಿವಿ ಮುಂದೆ ಕೂತುಬಿಡುತ್ತಿದ್ದರು… ಅಷ್ಟು ಅಭಿಮಾನಿಗಳನ್ನು ಸಂಪಾದಿಸಿತ್ತು ಪುಟ್ಟ ಗೌರಿ ಮದುವೆ ಧಾರವಾಹಿ… ಗೌರಿಯ ಪಾತ್ರವನ್ನು ಸಾಕಷ್ಟು ಜನ ಒಪ್ಪಿಕೊಂಡಿದ್ದರು… ಅಷ್ಟೆ ಅಲ್ಲದೆ ಕೆಲವೊಂದು ಬಾರಿ ಗೌರಿ ಟ್ರೋಲಿಗರ ಬಾಯಿಗೆ ಆಹಾರ ಆಗಿದ್ದು ಕೂಡ ಉಂಟು.. ಸುಮಾರು 6 ವರ್ಷಗಳ ಕಾಲ ರಂಜನಿ ಪುಟ್ಟಗೌರಿಯಾಗಿ ತೆರೆ ಮೇಲೆ ಕಾನೀಸಿಕೊಂಡಿದ್ದರು…
6 ವರ್ಷಗಳ ಕಾಲ ಪುಟ್ಟಗೌರಿ ಧಾರವಾಹಿ ಮೂಲಕ ಜನರ ಮನಸ್ಸಿಗೆ ಹತ್ತಿರವಾದ ರಂಜಿನಿ ರಾಘವನ್ ಇದೀಗ ಮತ್ತಷ್ಟು ಹತ್ತಿರವಾಗಲು ಹೊಸ ಪ್ರಯೋಗದೊಂದಿಗೆ ಜನರ ಮುಂದೆ ಬರ್ತಿದ್ದಾರೆ.. ನಿರ್ದೇಶಕಿ ಆಗಿ ಗುರುತಿಸಿಕೊಳ್ಳುವ ಆಸೆ ಇರುವ ರಂಜಿನಿ ತನ್ನ ಇಷ್ಟು ವರ್ಷದ ನಟನೆಯ ಅನುಭವದಿಂದ ಹೊಸ ಧಾರಾವಾಹಿ ನಿರ್ದೇಶನ ಮಾಡುವುದಾಗಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕಲರ್ಸ್ ವಾಹಿನಿಯಲ್ಲೇ ಮಾಡುವುದು ಬಹುತೇಕ ಖಚಿತವಾಗಿದ್ದು ಧಾರಾವಾಹಿಯ ಹೆಸರು ಇನ್ನು ತಿಳಿಸಿಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಸಲುವಾಗಿ ಸದ್ಯಕ್ಕೆ ರಂಜಿನಿ ಪಾತ್ರಧಾರಿಗಳಿಗೆ ಆಡಿಷನ್ ಮಾಡುತ್ತಿದ್ದಾರೆ. ಒಟ್ಟಾರೆ ಪಾತ್ರದ ಅನುಭವದಿಂದ ರಂಜನಿ ಧಾರವಾಹಿ ನಿರ್ದೇಶನಕ್ಕೆ ಮುಂದಾಗಿದ್ದಾರೆ.
Comments